ಕರ್ನಾಟಕ

karnataka

ETV Bharat / sports

ಬೈರ್​ಸ್ಟೋವ್ ಐಪಿಎಲ್​ನಲ್ಲಿ ವೇಗವಾಗಿ 1000 ರನ್​ ಪೂರೈಸಿದ 4ನೇ ಬ್ಯಾಟ್ಸ್​ಮನ್​

ಭಾರತೀಯರಲ್ಲಿ ಸಚಿನ್ ತೆಂಡೂಲ್ಕರ್(31), ಸುರೇಶ್ ರೈನಾ(33), ರಿಷಭ್ ಪಂತ್ (35) ಗೌತಮ್ ಗಂಭೀರ್(36) ರೋಹಿತ್ ಮತ್ತು ಧೋನಿ 37 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಐಪಿಎಲ್​ನಲ್ಲಿ ವೇಗವಾಗಿ 1000 ರನ್
ಐಪಿಎಲ್​ನಲ್ಲಿ ವೇಗವಾಗಿ 1000 ರನ್

By

Published : Apr 26, 2021, 5:02 PM IST

ಚೆನ್ನೈ: ಸನ್​ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್​​​ಮನ್ ಜಾನಿ ಬೈರ್​ಸ್ಟೋವ್ ಭಾನುವಾರ ಐಪಿಎಲ್​ನಲ್ಲಿ ವೇಗವಾಗಿ 1000 ರನ್​ ಪೂರೈಸಿದ 4 ನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬೈರ್​ಸ್ಟೋವ್ ಈ ಮೈಲಿಗಲ್ಲು ತಲುಪಿದ್ದಾರೆ. ಅವರು ಈ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ 38 ರನ್​ ಸಿಡಿಸಿದ್ದರು. ಇಂಗ್ಲೀಷ್ ಬ್ಯಾಟ್ಸ್​ಮನ್​ 26 ಇನ್ನಿಂಗ್ಸ್​ಗಳಲ್ಲಿ ಐಪಿಎಲ್​ನಲ್ಲಿ 1000 ರನ್​ ಪೂರೈಸಿದ್ದಾರೆ.

ಆಸ್ಟ್ರೇಲಿಯನ್ ಬ್ಯಾಟ್ಸ್​ಮನ್ ಶಾನ್ ಮಾರ್ಷ್ ವೇಗವಾಗಿ 1000 ರನ್​ಗಳಿಸಿದ ದಾಖಲೆ ಹೊಂದಿದ್ದಾರೆ. ಅವರು 21 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದರು. ವೆಸ್ಟ್ ಇಂಡೀಸ್ ಬ್ಯಾಟ್ಸ್​ಮನ್​ ಲೆಂಡ್ಲ್​ ಸಿಮನ್ಸ್​ 23 ಇನ್ನಿಂಗ್ಸ್ ಮತ್ತು ಮ್ಯಾಥ್ಯೂ ಹೇಡನ್ 25 ಇನ್ನಿಂಗ್ಸ್​ಗಳಲ್ಲಿ 1000 ರನ್ ಪೂರೈಸಿದ್ದರು.

ಭಾರತೀಯರಲ್ಲಿ ಸಚಿನ್ ತೆಂಡೂಲ್ಕರ್(31), ಸುರೇಶ್ ರೈನಾ(33), ರಿಷಭ್ ಪಂತ್ (35) ಗೌತಮ್ ಗಂಭೀರ್(36) ರೋಹಿತ್ ಮತ್ತು ಧೋನಿ 37 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ತಂಡ 159 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಹೈದರಾಬಾದ್ ತಂಡವೂ 159 ರನ್​ಗಳಿಸಿ ಟೈ ಸಾಧಿಸಿತು. ಆದರೆ, ಸೂಪರ್​ ಓವರ್​ನಲ್ಲಿ ಎಸ್​ಆರ್​ಹೆಚ್​ ಕೇವಲ 7 ರನ್​ಗಳಿಸಿತ್ತು. ಡೆಲ್ಲಿ 6 ಎಸೆತಗಳಲ್ಲಿ 8 ರನ್​ಗಳಿಸಿ ಜಯ ಸಾಧಿಸಿತು. ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ( ಅಜೇಯ 66) ಏಕಾಂಗಿ ಹೋರಾಟ ವ್ಯರ್ಥವಾಯಿತು.

ಇದನ್ನು ಓದಿ:ಹೋಗುವವರೆಲ್ಲ ಹೋಗಲಿ, ಆದ್ರೆ ಐಪಿಎಲ್ ವೇಳಾಪಟ್ಟಿಯಂತೆ ಮುಂದುವರಿಯಲಿದೆ: ಬಿಸಿಸಿಐ

ABOUT THE AUTHOR

...view details