ಕರ್ನಾಟಕ

karnataka

ETV Bharat / sports

ಚಾಂಪಿಯನ್ಸ್​ಗಳ ಕದನ: ಬಲಿಷ್ಠ ಮುಂಬೈ ವಿರುದ್ಧ ಮುಂದುವರಿಯುವುದೇ ಸಿಎಸ್​ಕೆ ಜಯದ ಓಟ? - , ಸಿಎಸ್​ಕೆ vs ಮುಂಬೈ ಡ್ರೀಮ್ 11

ಎರಡು ಬಲಿಷ್ಠ ತಂಡಗಳು ಐಪಿಎಲ್​ನಲ್ಲಿ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮುಂಬೈ 18 ಮತ್ತು ಸಿಎಸ್​ಕೆ 12ರಲ್ಲಿ ಜಯ ಸಾಧಿಸಿದೆ. 2018ರಲ್ಲಿ ಸಿಎಸ್​ಕೆ ಮರಳಿದ ನಂತರ ಮುಂಬೈ 6, ಸಿಎಸ್​ಕೆ ಕೇವಲ 2ರಲ್ಲಿ ಜಯ ಸಾಧಿಸಿದೆ.

Chennai Super Kings vs Mumbai Indians
ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್

By

Published : May 1, 2021, 3:45 PM IST

ನವದೆಹಲಿ:ಐಪಿಎಲ್​ನ 27ನೇ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ತಂಡಗಳು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಸೆಣಸಾಡಲಿವೆ.

3 ಬಾರಿಯ ಚಾಂಪಿಯನ್ ಸಿಎಸ್​ಕೆ ಮೊದಲ ಪಂದ್ಯದಲ್ಲಿ ಸೋಲು ಕಂಡ ಬಳಿಕ ಸತತ 5 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿ ಮುನ್ನುಗ್ಗುತ್ತಿದೆ. ಇತ್ತ ಮುಂಬೈ ತಂಡ ಆಡಿರುವ 6 ಪಂದ್ಯಗಳಲ್ಲಿ 3 ರಲ್ಲಿ ಗೆಲುವು 3ರಲ್ಲಿ ಸೋಲು ಕಂಡು 4ನೇ ಸ್ಥಾನದಲ್ಲಿದೆ. ಆದರೆ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ಮಣಿಸಿರುವ ವಿಶ್ವಾಸದಲ್ಲಿರುವ ಚಾಂಪಿಯನ್​ ತಂಡ ಸಿಎಸ್​ಕೆ ವಿರುದ್ಧ ತನ್ನ ಪ್ರಾಬಲ್ಯವನ್ನು ಮುಂದುವರಿಸಿಕೊಂಡು ಹೋಗಲಿದೆಯೇ ಎಂದು ಕಾದು ನೋಡಬೇಕಿದೆ.

ಫಾಫ್​ ಡು ಪ್ಲೆಸಿಸ್​ ಮತ್ತು ರುತುರಾಜ್ ಗಾಯಕ್ವಾಡ್​ ಸಿಎಸ್​ಕೆ ತಂಡಕ್ಕೆ ಅದ್ಭುತ ಆರಂಭ ಒದಗಿಸುತ್ತಿದ್ದಾರೆ. ದ. ಆಫ್ರಿಕಾ ಆಟಗಾರ 6 ಇನ್ನಿಂಗ್ಸ್​ಗಳಲ್ಲಿ 270 ರನ್​ಗಳಿಸಿದ್ದರೆ, ಗಾಯಕ್ವಾಡ್​ 192 ರನ್​ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ರೈನಾ, ರಾಯುಡು ಉತ್ತಮ ಫಾರ್ಮ್​ನಲ್ಲಿರುವುದು ತಂಡದ ಧನಾತ್ಮಕ ಅಂಶವಾಗಿದೆ. ಜೊತೆಗೆ ಜಡೇಜಾ ಅವರ ಆಲ್​ರೌಂಡ್ ಪ್ರದರ್ಶನ ತಂಡಕ್ಕೆ ಪ್ಲಸ್​ ಪಾಯಿಂಟ್ ಆಗಿದೆ.

ಇನ್ನು ಮುಂಬೈ ತಂಡದ ಕಳೆದ ಪಂದ್ಯವನ್ನು ಗಮನಿಸಿದರೆ ತಂಡ ಉತ್ತಮ ಲಯಕ್ಕೆ ಮರಳಿದೆ ಎನ್ನಬಹುದು. ಆರಂಭಿಕ ಡಿಕಾಕ್ ಫಾರ್ಮ್​ ಕಂಡುಕೊಂಡಿದ್ದಾರೆ. ಬೌಲಿಂಗ್ ವಿಭಾಗವಂತೂ ಟೂರ್ನಿಯಲ್ಲೇ ಬಲಿಷ್ಠವಾಗಿದೆ. ಹಾರ್ದಿಕ್ ಪಾಂಡ್ಯ ಹೊರತುಪಡಿಸಿದರೆ ಉಳಿದೆಲ್ಲಾ ಆಟಗಾರರು ಅತ್ಯುತ್ತಮ ಲಯದಲ್ಲಿದ್ದು, ಇಂದಿನ ಪಂದ್ಯದಲ್ಲಿ ತಮ್ಮ 4ನೇ ಜಯಕ್ಕಾಗಿ ಎದುರು ನೋಡುತ್ತಿದ್ದಾರೆ.

ಮುಖಾಮುಖಿ: ಎರಡು ಬಲಿಷ್ಠ ತಂಡಗಳು ಐಪಿಎಲ್​ನಲ್ಲಿ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಮುಂಬೈ 18 ಮತ್ತು ಸಿಎಸ್​ಕೆ 12ರಲ್ಲಿ ಜಯ ಸಾಧಿಸಿದೆ. 2018ರಲ್ಲಿ ಸಿಎಸ್​ಕೆ ಮರಳಿದ ನಂತರ ಮುಂಬೈ 6, ಸಿಎಸ್​ಕೆ ಕೇವಲ 2ರಲ್ಲಿ ಜಯ ಸಾಧಿಸಿದೆ.

ಸಿಎಸ್​ಕೆ ಸಂಭವನೀಯ ತಂಡ: ಫಾಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂ.ಎಸ್.ಧೋನಿ (ನಾಯಕ/ಕೀಪರ್) ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ದೀಪಕ್ ಚಹರ್, ಲುಂಗಿ ಎನ್‌ಗಿಡಿ / ಇಮ್ರಾನ್ ತಾಹಿರ್

ಮುಂಬೈ ಸಂಭವನೀಯ ತಂಡ: ಕ್ವಿಂಟನ್ ಡಿ ಕಾಕ್ (ವಿ.ಕೀ), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಜಯಂತ್ ಯಾದವ್, ನಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ABOUT THE AUTHOR

...view details