ಕರ್ನಾಟಕ

karnataka

ETV Bharat / sports

8 ಹಳೆಯ ತಂಡಗಳಿಗೆ 4, ಹೊಸ ತಂಡಗಳಿಗೆ 3 ಆಟಗಾರರ ರೀಟೈನ್​ಗೆ ಅವಕಾಶ : ಸ್ಯಾಲರಿ ಪ್ಯಾಕೇಜ್ ಹೀಗಿರಲಿದೆ

3 ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ಫ್ರಾಂಚೈಸಿ, 15, 11 ಮತ್ತು 7 ಕೋಟಿ ರೂ. ಗಳನ್ನು ಬಳಸಿಕೊಳ್ಳಬಹುದು. ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 14 ಕೋಟಿ ಮತ್ತು 10 ಕೋಟಿ ರೂ.ಗಳನ್ನು ಮತ್ತು ಒಬ್ಬ ಆಟಗಾರನನ್ನು ಉಳಿಸಿಕೊಂಡರೆ 14 ಕೋಟಿ ರೂ.ಗಳನ್ನು ವೆಚ್ಚ ಮಾಡಬಹುದಾಗಿದೆ..

ಐಪಿಎಲ್ ಸ್ಯಾಲರಿ ಪ್ಯಾಕೇಜ್
ಐಪಿಎಲ್ ಸ್ಯಾಲರಿ ಪ್ಯಾಕೇಜ್

By

Published : Oct 30, 2021, 10:15 PM IST

ಮುಂಬೈ :2022ರ ಐಪಿಎಲ್​ಗೆ 2 ಹೊಸ ತಂಡಗಳ ಸೇರ್ಪಡೆಯಾಗಿದೆ. ಇದೀಗ ಬಿಸಿಸಿಐ ಆಟಗಾರರ ರೀಟೈನ್​ ಯೋಜನೆಯನ್ನು ಘೋಷಿಸಿದೆ. ಹಳೆಯ 8 ಫ್ರಾಂಚೈಸಿಗಳು ತಲಾ 4 ಆಟಗಾರರನ್ನು, ಹೊಸದಾಗಿ ಸೇರ್ಪಡೆಗೊಂಡಿರುವ ಎರಡೂ ತಂಡಗಳು ಮೂರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಬಿಸಿಸಿಐ ಅನುಮತಿ ಮಾಡಿದೆ.

"8 ಫ್ರಾಂಚೈಸಿಗಳು ಮೊದಲು ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ನಂತರ ಎರಡು ಹೊಸ ತಂಡಗಳು ತಮಗೆ ಬೇಕಾದ 3 ಆಟಗಾರರನ್ನು ಹರಾಜಿಗೂ ಮುನ್ನ ನೇರವಾಗಿ ಆಯ್ಕೆ ಮಾಡಿಕೊಳ್ಳಬಹುದು" ಎಂದು ಬಿಸಿಸಿಐ ಶನಿವಾರ ಫ್ರಾಂಚೈಸಿಗಳಿಗೆ ಮೇಲ್​ ಮಾಡಿದೆ.

2022ರ ಐಪಿಎಲ್​ ಆವೃತ್ತಿಯಲ್ಲಿ ತಂಡದ ವೇತನ 90 ಕೋಟಿ ರೂ. ಇರಲಿದೆ ಎಂದು ಬಿಸಿಸಿಐ ಇದೇ ವೇಳೆ ಖಚಿತಪಡಿಸಿದೆ. ನವೆಂಬರ್​ 1ರಿಂದ 31ರ ಒಳಗೆ 8 ಫ್ರಾಂಚೈಸಿಗಳು ತಾವೂ ಉಳಿಸಿಕೊಳ್ಳುವ 4 ಆಟಗಾರರನ್ನು ಘೋಷಿಸಬೇಕು. ನಂತರ ಹೊಸ ತಂಡಗಳು ಡಿಸೆಂಬರ್​ 1ರಿಂದ 25ರೊಳಗೆ ತಾವೂ ಆಯ್ಕೆ ಮಾಡಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಸಲ್ಲಿಸಬೇಕೆಂದು ಮೇಲ್​ನಲ್ಲಿ ತಿಳಿಸಿದೆ.

ಅಲ್ಲದೆ ಫ್ರಾಂಚೈಸಿಗಳು 4 ಆಟಗಾರರಲ್ಲಿ ಗರಿಷ್ಠ 3 ದೇಶಿ ಮತ್ತು ಒಬ್ಬ ವಿದೇಶಿ ಆಟಗಾರನ್ನು ಅಥವಾ ಗರಿಷ್ಠ ತಲಾ 2 ದೇಶಿ ಮತ್ತು ವಿದೇಶಿ ಆಟಗಾರರ ಸಂಯೋಜನೆಯಲ್ಲಿ ರೀಟೈನ್ ಮಾಡಿಕೊಳ್ಳಲು ಮಾತ್ರ ಅವಕಾಶವಿದೆ. ಇನ್ನು 2ಕ್ಕಿಂತ ಹೆಚ್ಚು ಅನ್​ಕ್ಯಾಪಡ್​ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಬೋರ್ಡ್​ ಖಚಿತಪಡಿಸಿದೆ.

ಹೊಸ ತಂಡಗಳು ಇಬ್ಬರು ದೇಶಿ ಆಟಗಾರರನ್ನು ಮತ್ತು ಒಬ್ಬ ವಿದೇಶಿ ಆಟಗಾರರನ್ನು ಮಾತ್ರ ಖರೀದಿಸಬಹುದಾಗಿದೆ. ದೇಶಿ ಆಟಗಾರರಲ್ಲಿ ಒಬ್ಬ ಅನ್​ಕ್ಯಾಪಡ್​ ಆಟಗಾರರನ್ನು ಖರೀದಿಸಲು ಮಾತ್ರ ಅವಕಾಶವಿದೆ.

ಸ್ಯಾಲರಿ ಕ್ಯಾಪ್​ ಹೀಗಿರಲಿದೆ :ಪ್ರತಿ ಫ್ರಾಂಚೈಸಿಗಳಿಗೆ ತಲಾ 90 ಕೋಟಿ ರೂ ನೀಡಲಾಗಿದೆ. ಇದರಲ್ಲಿ 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಯಸುವ ಫ್ರಾಂಚೈಸಿಗಳು 42 ಕೋಟಿ ರೂಗಳನ್ನು ಬಳಸಿಕೊಳ್ಳಬಹುದಾಗಿದೆ.

3 ಆಟಗಾರರನ್ನು ರೀಟೈನ್ ಮಾಡಿಕೊಂಡರೆ 33 ಕೋಟಿ ರೂ. ಇಬ್ಬರು ಆಟಗಾರರನ್ನು ರೀಟೈನ್ ಮಾಡಿಕೊಂಡರೆ 24 ಮತ್ತು ಕೇವಲ ಒಬ್ಬನೇ ಆಟಗಾರನನ್ನ ರೀಟೈನ್ ಮಾಡಿಕೊಂಡರೆ 14 ಕೋಟಿ ರೂ.ಗಳನ್ನು ಮಾತ್ರ ಬಳಿಸಿಕೊಳ್ಳಲು ಅನುಮತಿ ನೀಡಲಾಗಿದೆ.

4 ಆಟಗಾರರನ್ನು ರೀಟೈನ್ ಮಾಡಿಕೊಂಡರೆ, ಮೊದಲನೇ ಆಟಗಾರ 16, 2ನೇ ಆಟಗಾರ 12, 3ನೇ ಆಟಗಾರ 8, 4ನೇ ಆಟಗಾರ 6 ಕೋಟಿ ರೂ. ಪಡೆಯಲಿದ್ದಾರೆ.

3 ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ಫ್ರಾಂಚೈಸಿ, 15, 11 ಮತ್ತು 7 ಕೋಟಿ ರೂ. ಗಳನ್ನು ಬಳಸಿಕೊಳ್ಳಬಹುದು. ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 14 ಕೋಟಿ ಮತ್ತು 10 ಕೋಟಿ ರೂ.ಗಳನ್ನು ಮತ್ತು ಒಬ್ಬ ಆಟಗಾರನನ್ನು ಉಳಿಸಿಕೊಂಡರೆ 14 ಕೋಟಿ ರೂ.ಗಳನ್ನು ವೆಚ್ಚ ಮಾಡಬಹುದಾಗಿದೆ.

ಇದನ್ನು ಓದಿ:ಹಸರಂಗ ಹ್ಯಾಟ್ರಿಕ್: ಏಕದಿನ ಮತ್ತು ಟಿ20 ಎರಡರಲ್ಲೂ ಈ ಸಾಧನೆ ಮಾಡಿದ 4ನೇ ಬೌಲರ್​!

ABOUT THE AUTHOR

...view details