ಕರ್ನಾಟಕ

karnataka

ETV Bharat / sports

ಐಪಿಎಲ್​ ಹರಾಜು: ಅಬ್ಬಬ್ಬಾ ಬರೋಬ್ಬರಿ 25ಕೋಟಿಗೆ ಬಿಕರಿಯಾದ ಆಸೀಸ್ ವೇಗಿ ಸ್ಟಾರ್ಕ್​ - ಐಪಿಎಲ್​ ಮಿನಿ ಹರಾಜು

IPL Auction 2024: ಐಪಿಎಲ್​ ಮಿನಿ ಹರಾಜು ಆರಂಭವಾಗಿದೆ.

ಐಪಿಎಲ್​ ಹರಾಜಿಗೆ ಕ್ಷಣಗಣನೆ
ಐಪಿಎಲ್​ ಹರಾಜಿಗೆ ಕ್ಷಣಗಣನೆ

By PTI

Published : Dec 19, 2023, 12:31 PM IST

Updated : Dec 19, 2023, 4:48 PM IST

ದುಬೈ​:ಇಲ್ಲಿನ ಕೊಕೊ ಕೋಲಾ ಅರೆನಾದಲ್ಲಿ ನಡೆಯುತ್ತಿರುವ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್​​ ಕಮಿನ್ಸ್​​​ ಬಿಡ್​ ದಾಖಲೆಯನ್ನು ವೇಗದ ಬೌಲರ್​ ಮಿಚೆಲ್​ ಸ್ಟಾರ್​​ ಮೀರಿಸಿದರು. ಕೋಲ್ಕತ್ತಾ ನೈಟ್​ ರೈಡರ್ಸ್​​ ವೇಗಿ ಸ್ಟಾರ್ಕ್​ಗೆ ಬರೋಬ್ಬರಿ 24.75 ಕೋಟಿ ಹಣ ಸುರಿದಿದೆ.

ದುಬೈನಲ್ಲಿ ನಡೆಯುತ್ತಿರುವ ಮಿನಿ ಹರಾಜಿನಲ್ಲಿ ಎರಡು ದುಬಾರಿ ಬಿಡ್​ಗಳು ಈ ವರೆಗೆ ನಡೆದಿವೆ. ಆಸ್ಟ್ರೇಲಿಯಾದ ಏಕದಿನ ಮತ್ತು ಟೆಸ್ಟ್​ ತಂಡದ ನಾಯಕ ಪ್ಯಾಟ್​ ಕಮಿನ್ಸ್ 20.5 ಕೋಟಿಗೆ ಹೈದರಾಬಾದ್​ ತಂಡಕ್ಕೆ ಮಾರಾಟಗೊಂಡಿದ್ದಾರೆ. ಇದು ಈವರೆಗಿನ ಎರಡನೇ ಅತ್ಯಂತ ಹೆಚ್ಚಿನ ಮೊತ್ತವಾಗಿದೆ.

ಬಿಡ್​ ಆಟಗಾರರ ವಿವರ:

ಸೆಟ್​ 4ರ ಕ್ಯಾಪ್ಡ್​ ಸ್ಪಿನ್ನರ್​ ವಿಭಾಗದಲ್ಲಿ ಇದ್ದ, ಮುಜೀಬ್ ಉರ್ ರೆಹಮಾನ್, ತಬ್ರೈಜ್ ಶಮ್ಸಿ, ಇಶ್ ಸೋಧಿ, ಅಕೇಲ್ ಹೋಸೇನ್, ಆದಿಲ್ ರಶೀದ್ ಮತ್ತು ವಕಾರ್ ಸಲಾಂಖೈಲ್ ಮಾರಾಟವಾಗದೇ ಉಳಿದಿದ್ದಾರೆ.

ಸೆಟ್​ 3 ಕ್ಯಾಪ್ಡ್ ವೇಗದ ಬೌಲರ್‌ಗಳು:

ದಿಲ್ಶನ್ ಮಧುಶಂಕ, ಬಿಡ್​ ಮೊತ್ತ - ₹ 4.60 ಕೋಟಿ, ತಂಡ: ಮುಂಬೈ ಇಂಡಿಯನ್ಸ್
ಜಯದೇವ್ ಉನದ್ಕತ್, ಬಿಡ್​ ಮೊತ್ತ - ₹ 1.60 ಕೋಟಿ, ತಂಡ: ಸನ್‌ರೈಸರ್ಸ್ ಹೈದರಾಬಾದ್
ಜೋಶ್ ಹ್ಯಾಜಲ್‌ವುಡ್, ಮಾರಾಟವಾಗಿಲ್ಲ
ಮಿಚೆಲ್ ಸ್ಟಾರ್ಕ್ ಬಿಡ್​ ಮೊತ್ತ - ₹ 24.75 ಕೋಟಿ, ತಂಡ: ಕೋಲ್ಕತ್ತಾ ನೈಟ್ ರೈಡರ್ಸ್
ಶಿವಂ ಮಾವಿ, ಬಿಡ್​ ಮೊತ್ತ - ₹6.40 ಕೋಟಿ, ತಂಡ: ಲಕ್ನೋ ಸೂಪರ್ ಜೈಂಟ್ಸ್
ಉಮೇಶ್ ಯಾದವ್, ಬಿಡ್​ ಮೊತ್ತ - ₹ 5.80 ಕೋಟಿ, ತಂಡ: ಗುಜರಾತ್ ಟೈಟಾನ್ಸ್
ಅಲ್ಜಾರಿ ಜೋಸೆಫ್, ಬಿಡ್​ ಮೊತ್ತ- ₹ 11.5 ಕೋಟಿ, ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಚೇತನ್ ಸಕರಿಯಾ, ಬಿಡ್​ ಮೊತ್ತ - ₹ 50 ಲಕ್ಷ, ತಂಡ: ಕೋಲ್ಕತ್ತಾ ನೈಟ್ ರೈಡರ್ಸ್
ಲಾಕಿ ಫರ್ಗುಸನ್, ಮಾರಾಟ ಆಗಿಲ್ಲ

ಸೆಟ್​​ 3 ವಿಕೆಟ್‌ಕೀಪರ್‌ಗಳು:
ಕುಸಾಲ್ ಮೆಂಡಿಸ್, ಮಾರಾಟ ಆಗಿಲ್ಲ
ಜೋಶ್ ಇಂಗ್ಲಿಸ್, ಮಾರಾಟ ಆಗಿಲ್ಲ
ಕೆಎಸ್ ಭರತ್, ಬಿಡ್​ ಮೊತ್ತ - ₹ 50 ಲಕ್ಷ, ತಂಡ: ಕೋಲ್ಕತ್ತಾ ನೈಟ್ ರೈಡರ್ಸ್
ಟ್ರಿಸ್ಟಾನ್ ಸ್ಟಬ್ಸ್, ಬಿಡ್​ ಮೊತ್ತ - ₹50 ಲಕ್ಷ, ತಂಡ: ಡೆಲ್ಲಿ ಕ್ಯಾಪಿಟಲ್ಸ್
ಫಿಲಿಪ್ ಸಾಲ್ಟ್, ಮಾರಾಟ ಆಗಿಲ್ಲ

ಸೆಟ್​​2 ಕ್ಯಾಪ್ಡ್ ಆಲ್ ರೌಂಡರ್ಸ್:
ಕ್ರಿಸ್ ವೋಕ್ಸ್, ಬಿಡ್​ ಮೊತ್ತ - ₹4.20 ಕೋಟಿ, ತಂಡ: ಪಂಜಾಬ್ ಕಿಂಗ್ಸ್
ಡ್ಯಾರಿಲ್ ಮಿಚೆಲ್, ಬಿಡ್​ ಮೊತ್ತ - ₹14 ಕೋಟಿ, ತಂಡ: ಚೆನ್ನೈ ಸೂಪರ್ ಕಿಂಗ್ಸ್
ಹರ್ಷಲ್ ಪಟೇಲ್, ಬಿಡ್​ ಮೊತ್ತ - ₹11.75 ಕೋಟಿ, ತಂಡ: ಪಂಜಾಬ್ ಕಿಂಗ್ಸ್
ಜೆರಾಲ್ಡ್ ಕೋಟ್ಜಿ, ಬಿಡ್​ ಮೊತ್ತ - ₹5 ಕೋಟಿ, ತಂಡ: ಮುಂಬೈ ಇಂಡಿಯನ್ಸ್
ಪ್ಯಾಟ್ ಕಮ್ಮಿನ್ಸ್, ಬಿಡ್​ ಮೊತ್ತ - ₹20.50 ಕೋಟಿ, ತಂಡ: ಸನ್‌ರೈಸರ್ ಹೈದರಾಬಾದ್​
ಅಜ್ಮತುಲ್ಲಾ ಒಮರ್ಜಾಯ್, ಬಿಡ್​ ಮೊತ್ತ - ₹ 50 ಲಕ್ಷ, ತಂಡ: ಗುಜರಾತ್ ಟೈಟಾನ್ಸ್
ಶಾರ್ದೂಲ್ ಠಾಕೂರ್, ಬಿಡ್​ ಮೊತ್ತ - ₹4.00 ಕೋಟಿ, ತಂಡ: ಚೆನ್ನೈ ಸೂಪರ್ ಕಿಂಗ್ಸ್
ರಚಿನ್ ರವೀಂದ್ರ, ಬಿಡ್​ ಮೊತ್ತ - ₹1.80 ಕೋಟಿ, ತಂಡ: ಚೆನ್ನೈ ಸೂಪರ್ ಕಿಂಗ್ಸ್
ವನಿಂದು ಹಸರಂಗ, ಬಿಡ್​ ಮೊತ್ತ - ₹1.50 ಕೋಟಿ, ತಂಡ: ಸನ್‌ರೈಸರ್ಸ್ ಹೈದರಾಬಾದ್

ಸೆಟ್​ 1 ಕ್ಯಾಪ್ಡ್ ಬ್ಯಾಟರ್​​ಗಳು:
ಮನೀಶ್ ಪಾಂಡೆ, ಮಾರಾಟ ಆಗಿಲ್ಲ
ಸ್ಟೀವ್ ಸ್ಮಿತ್, ಮಾರಾಟ ಆಗಿಲ್ಲ
ಕರುಣ್ ನಾಯರ್, ಮಾರಾಟ ಆಗಿಲ್ಲ
ಟ್ರಾವಿಸ್ ಹೆಡ್, ಬಿಡ್​ ಮೊತ್ತ - ₹6.80 ಕೋಟಿ, ತಂಡ: ಸನ್‌ರೈಸರ್ಸ್ ಹೈದರಾಬಾದ್
ಹ್ಯಾರಿ ಬ್ರೂಕ್, ಬಿಡ್​ ಮೊತ್ತ - ₹4.00 ಕೋಟಿ, ತಂಡ: ಡೆಲ್ಲಿ ಕ್ಯಾಪಿಟಲ್ಸ್
ರಿಲೀ ರೋಸೌವ್, ಮಾರಾಟ ಆಗಿಲ್ಲ
ರೋವ್‌ಮನ್ ಪೊವೆಲ್, ಬಿಡ್​ ಮೊತ್ತ - ₹7.40 ಕೋಟಿ, ತಂಡ: ರಾಜಸ್ಥಾನ್ ರಾಯಲ್ಸ್

ತಂಡಗಳ ಬಲಿ ಬಿಡ್​​ಗೆ ಇದ್ದ ಮೊತ್ತ:

ಗುಜರಾತ್ ಟೈಟಾನ್ಸ್ (ಜಿಟಿ) - 38.15 ಕೋಟಿ ರೂ.

ಚೆನ್ನೈ ಸೂಪರ್ ಕಿಂಗ್ಸ್ (CSK) - 31.4 ಕೋಟಿ ರೂ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) - 23.25 ಕೋಟಿ ರೂ.

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) - 32.7 ಕೋಟಿ ರೂ.

ಲಕ್ನೋ ಸೂಪರ್ ಜೈಂಟ್ಸ್ (LSG) - 13.15 ಕೋಟಿ ರೂ.

ಮುಂಬೈ ಇಂಡಿಯನ್ಸ್ (MI) - 17.75 ಕೋಟಿ ರೂ.

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) - 29.1 ಕೋಟಿ ರೂ.

ರಾಜಸ್ಥಾನ್ ರಾಯಲ್ಸ್ (RR) - 14.5 ಕೋಟಿ ರೂ.

ಸನ್‌ರೈಸರ್ಸ್ ಹೈದರಾಬಾದ್ (SRH) - 34 ಕೋಟಿ ರೂ.

ದೆಹಲಿ ಕ್ಯಾಪಿಟಲ್ಸ್ - 28.95 ಕೋಟಿ ರೂ.

ಇದನ್ನೂ ಓದಿ:ಕುಂಬ್ಳೆ ಸಾಲಿಗೆ ಸೇರಲಿದ್ದಾರೆ ರವಿಚಂದ್ರನ್ : ಹರಿಣಗಳ ವಿರುದ್ಧ ಟೆಸ್ಟ್​​ನಲ್ಲಿ ಅಶ್ವಿನ್ ತಲುಪುವರೇ ಈ ಮೈಲಿಗಲ್ಲು?

Last Updated : Dec 19, 2023, 4:48 PM IST

ABOUT THE AUTHOR

...view details