ಬೆಂಗಳೂರು :2022ರ ಮೆಗಾ ಹರಾಜಿನಲ್ಲಿ ಆಲ್ರೌಂಡರ್ಗಳಿಗೆ ಫ್ರಾಂಚೈಸಿಗಳು ಮಣೆ ಹಾಕುತ್ತಿದ್ದು, ಕೋಟಿ ಕೋಟಿ ನೀಡಿ ಖರೀದಿಸುತ್ತಿದ್ದಾರೆ. ಭಾರತ ತಂಡದ ವಾಷಿಂಗ್ಟನ್ ಸುಂದರ್ ಅವರನ್ನು 8.25 ಕೋಟಿ ರೂ. ನೀಡಿ ಸನ್ ರೈಸರ್ಸ್ ಹೈದರಾಬಾದ್, ಶ್ರೀಲಂಕಾದ ವನಿಡು ಹಸರಂಗಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 10.75 ಕೋಟಿ ರೂ. ನೀಡಿ ಖರೀದಿಸಿದೆ.
ಭಾರತ ತಂಡದಿಂದ ಹೊರ ಬಿದ್ದಿರುವ ಕೃನಾಲ್ ಪಾಂಡ್ಯರನ್ನು ಕೆ ಎಲ್ ರಾಹುಲ್ ನಾಯಕತ್ವದ ಲಖನೌ ಫ್ರಾಂಚೈಸಿ 8.25 ಕೋಟಿ ರೂ.ಗೆ ಖರೀದಿಸಿದೆ. ಆಶ್ಚರ್ಯಕರ ಸಂಗತಿಯೆಂದರೆ ಬರೋಡಾ ತಂಡದಲ್ಲಿದ್ದ ವೇಳೆ ಪಾಂಡ್ಯರೊಂದಿಗೆ ಜಗಳವಾಡಿ ತಂಡವನ್ನು ತ್ಯಜಿಸಿ ರಾಜಸ್ಥಾನ್ ತಂಡ ಸೇರಿದ್ದ ದೀಪಕ್ ಹೂಡಾರನ್ನು ಕೂಡ 5.75 ಕೋಟಿ ರೂ.ಗೆ ಖರೀದಿಸಿದೆ.