ಕೊಚ್ಚಿ (ಕೇರಳ):ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಕ್ರಿಕೆಟಿಗ ವಿವ್ರಾಂತ್ ಶರ್ಮಾ ಅನ್‌ಕ್ಯಾಪ್ಡ್ ಆಟಗಾರರಾಗಿ ಬಾರಿ ಬೆಲೆಗೆ ಮಾರಾಟವಾಗಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಶರ್ಮಾ ಅವರನ್ನು 2.6 ಕೋಟಿ ರೂ ಕೊಟ್ಟು ಖರೀದಿಸಿದೆ.
ಕೇರಳದ ಕೊಚ್ಚಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಉತ್ತರ ಪ್ರದೇಶದ ಶಿವಂ ಮಾವಿ ಅನ್‌ಕ್ಯಾಪ್ಡ್ ವಿಭಾಗದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಶಿವಂ ಅವರ ಮೂಲ ಬೆಲೆ 40 ಲಕ್ಷ ರೂಪಾಯಿ ಆಗಿತ್ತು. ಆದರೆ, ಗುಜರಾತ್ ಟೈಟಾನ್ಸ್ ಅವರ ಬೆಲೆಯನ್ನು 15 ಪಟ್ಟು ಹೆಚ್ಚಿಸಿ 6 ಕೋಟಿ ರೂಪಾಯಿಗೆ ಕೊಂಡುಕೊಂಡಿತು.
ಇದೇ ವೇಳೆ ಪಶ್ಚಿಮ ಬಂಗಾಳದ ವೇಗಿ, ಅನ್‌ಕ್ಯಾಪ್ಡ್ ಆಟಗಾರ ಮುಖೇಶ್ ಕುಮಾರ್ ಸಹ ದುಬಾರಿ ಬೆಲೆಗೆ ಬಿಕರಿಯಾಗಿದ್ದು, ಡೆಲ್ಲಿ ತಂಡ 5.50 ಕೋಟಿ ರೂ.ಗೆ ಖರೀದಿಸಿದೆ. ಅದೇ ರೀತಿ ಜಮ್ಮುವಿನ ವಿವ್ರಾಂತ್ ಶರ್ಮಾ ಅನ್‌ಕ್ಯಾಪ್ಡ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೂರನೇ ದುಬಾರಿ ಆಟಗಾರರಾಗಿದ್ದಾರೆ.
ಇದನ್ನೂ ಓದಿ:₹2.4 ಕೋಟಿಗೆ ಡೆಲ್ಲಿ ಪಾಲಾದ ಮನೀಶ್ ಪಾಂಡೆ; ಮಿನಿ ಹರಾಜಿನಲ್ಲಿ ಆರ್ಸಿಬಿಗೆ ಯಾರೆಲ್ಲಾ?