ಬೆಂಗಳೂರು:ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿನಲ್ಲಿ ಭಾಗವಹಿಸಿಲ್ಲ ಆದರೆ, ಎಸ್‌ಆರ್‌ಕೆ ಪರ ಅವರ ಪುತ್ರ ಆರ್ಯನ್ ಖಾನ್ ಮತ್ತು ಮಗಳು ಸುಹಾನಾ ಖಾನ್ ಭಾಗವಹಿಸಿದ್ದಾರೆ . ಖಾನ್ ಪುತ್ರ- ಪುತ್ರಿಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೂರ್ವ ಹರಾಜು ಕಾರ್ಯಕ್ರಮದ ಕೆಲವು ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಒಂದು ಚಿತ್ರದಲ್ಲಿ, ಆರ್ಯನ್ ತನ್ನ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿಯೊಂದಿಗೆ ಸಂಭಾಷಣೆಯಲ್ಲಿ ಕಾಣಿಸಿಕೊಂಡಿದ್ದರೆ, ಸುಹಾನಾ ಅವನ ಪಕ್ಕದಲ್ಲಿ ಆಸೀನರಾಗಿರುವುದನ್ನು ಕಾಣಬಹುದಾಗಿದೆ.
ಆರ್ಯನ್ ಎರಡನೇ ಬಾರಿಗೆ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದರೆ, ಸುಹಾನಾ ಮೊದಲ ಬಾರಿಗೆ ಐಪಿಎಲ್ 2022 ರ ಮೆಗಾ ಹರಾಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ 370 ಭಾರತೀಯ ಮತ್ತು 220 ವಿದೇಶಿ ಸೇರಿ ಒಟ್ಟು 590 ಆಟಗಾರರ ಹರಾಜು ನಡೆಯಲಿದೆ.