ಐಪಿಎಲ್ ಮಿನಿ ಹರಾಜು: 87 ಸ್ಥಾನಕ್ಕೆ 405 ಆಟಗಾರರ ಪೈಪೋಟಿ - ETV Bharath Kannada news
2023ರ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಇಂದು ಮಧ್ಯಾಹ್ನ ಕೊಚ್ಚಿಯಲ್ಲಿ ನಡೆಯಲಿದ್ದು, 273 ಭಾರತೀಯರು ಸೇರಿದಂತೆ 405 ಆಟಗಾರರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಐಪಿಎಲ್ ಮಿನಿ ಹರಾಜು
By
Published : Dec 23, 2022, 11:22 AM IST
ಕೊಚ್ಚಿ:2023ರ ಐಪಿಎಲ್ ಋತುವಿನಲ್ಲಿ ಮಿನಿ ಹರಾಜು ಪ್ರಕ್ರಿಯೆ ಇಂದು ಮಧ್ಯಾಹ್ನ ನಡೆಯಲಿದೆ. ಒಂದು ತಂಡ 25 ಆಟಗಾರರನ್ನು ಹೊಂದಬಹುದಾಗಿದ್ದು, ಅದರಲ್ಲಿ ವಿದೇಶಿ 8 ಆಟಗಾರರನ್ನು ಒಳಗೊಳ್ಳಬೇಕಿದೆ. ಇಂದಿನ ಹರಾಜಿನಲ್ಲಿ ಒಟ್ಟು 405 ಆಟಗಾರರಿದ್ದು, ಅದರಲ್ಲಿ 273 ಭಾರತೀಯ ಪ್ಲೇಯರ್ಗಳಾಗಿದ್ದಾರೆ. 10 ತಂಡಗಳಲ್ಲಿ ಕೇವಲ 87 ಸ್ಥಾನಗಳು ಮಾತ್ರ ಖಾಲಿ ಇದೆ. ಇದರಲ್ಲಿ 30 ವಿದೇಶಿ ಆಟಗಾರರಿಗೆ ಮೀಸಲಾಗಿದೆ.
ಮಮಾಂಕ್ ಅಗರ್ವಾಲ್, ಬೆನ್ಸ್ಟೋಕ್ಸ್, ಸ್ಯಾಮ್ ಕರನ್, ಹ್ಯಾರಿ ಬ್ರೂಕ್, ಕ್ಯಾಮರೋನ್ ಗ್ರೀನ್ ಮತ್ತು ಎನ್. ಜಗದೀಶನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಇವರ ಮೇಲೆ ಕೋಟಿಗಳಲ್ಲಿ ಹೂಡಿಕೆ ಆಗುವ ನಿರೀಕ್ಷೆ ವ್ಯಕ್ತವಾಗಿದೆ. 10 ತಂಡಗಳೂ ಪ್ರಮುಖ ಆಟಗಾರರ ಬೇಟೆಗೆ ಇಂದಿನ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅಮಿತ್ ಮಿಶ್ರಾ ಹೆಸರಿನಲ್ಲಿ ವಿಶೇಷ ದಾಖಲೆ: 40ರ ಹರೆಯದ ಅಮಿತ್ ಮಿಶ್ರಾ ಮೂರು ಬೇರೆ ಬೇರೆ ತಂಡಗಳಲ್ಲಿ ಆಡುವಾಗ 3 ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಡೆಲ್ಲಿ ಡೇರ್‌ಡೆವಿಲ್ಸ್ (2008), ಡೆಕ್ಕನ್ ಚಾರ್ಜರ್ಸ್ (2011) ಮತ್ತು ಸನ್‌ರೈಸರ್ಸ್ ಹೈದರಾಬಾದ್ (2013) ಗಾಗಿ ಮೂರು ಹ್ಯಾಟ್ರಿಕ್‌ಗಳನ್ನು ಪಡೆದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ.
ಹಾಗೇ ಈ ಐಪಿಎಲ್ ಹರಾಜಿನ ಅತೀ ಹಿರಿಯ ವ್ಯಕ್ತಯಾಗಿದ್ದಾರೆ. ಅದೇ ರೀತಿಯಲ್ಲಿ ಅಫ್ಘಾನಿಸ್ತಾನದ ಅಲ್ಲಾಹ್ ಮಹಮ್ಮದ್(15 ವರ್ಷ) ಅತೀ ಕಿರಿಯ ಆಟಗಾರರಾಗಿದ್ದಾರೆ. ಇಂಗ್ಲೆಂಡ್‌ನ ಅತ್ಯಂತ ಕಿರಿಯ ಟೆಸ್ಟ್ ಕ್ರಿಕೆಟಿಗಾರ ಸ್ಪಿನ್ನರ್ ರೆಹಾನ್ ಅಹ್ಮದ್ ಐಪಿಎಲ್ 2023 ಹರಾಜಿನಿಂದ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಕೌಂಟಿ ಕ್ರಿಕೆಟ್ ಆಡುವತ್ತ ಗಮನಹರಿಸುವ ಸಲುವಾಗಿ ಅವರು ಐಪಿಎಲ್ನಿಂದ ಹೊರಗುಳಿಯುವುದಾಗಿ ಹೇಳಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಅಂತರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
ತಂಡಗಳ ವಿವರ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ಆಟಗಾರರಿಗೆ 86.25 ಕೋಟಿ ರೂ.ಗಳನ್ನು 8.75 ಕೋಟಿ ರೂ. ತಂಡದಲ್ಲಿ 2 ವಿದೇಶಿ ಮತ್ತು 5 ಭಾರತೀಯ ಆಟಗಾರರನ್ನು ಖರೀದಿಸಲು ಅವಕಾಶವಿದೆ. ಇದು ಮಯಾಂಕ್ ಅಗರ್ವಾಲ್, ನಾರಾಯಣ್ ಜಗದೀಶ್, ಅಜಿಂಕ್ಯ ರಹಾನೆ, ನಾಥನ್ ಕೌಲ್ಟರ್-ನೈಲ್, ಜ್ಯೆ ರಿಚರ್ಡ್ಸನ್, ರಿಲೆ ಮೆರೆಡಿತ್, ಆಡಮ್ ಮಿಲ್ನೆ, ರೀಸ್ ಟೋಪ್ಲೆ, ಶಕೀಬ್ ಅಲ್ ಹಸನ್, ಮೊಹಮ್ಮದ್ ನಬಿ, ಶ್ರೇಯಸ್ ಗೋಪಾಲ್ ಅವರಂತಹ ಆಟಗಾರರನ್ನು ಗುರಿಯಾಗಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರ ಪರ್ಸ್‌ನಲ್ಲಿ ಕೇವಲ 7.05 ಕೋಟಿ ರೂಪಾಯಿ ಮಾತ್ರ ಉಳಿದಿದೆ. ಹರಾಜಿಗೂ ಮುನ್ನ ತಂಡವು ಶಾರ್ದೂಲ್ ಠಾಕೂರ್, ಲಾಕಿ ಫರ್ಗುಸನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಅವರನ್ನು ಟ್ರೇಡ್ ಮಾಡಿ ಅವರನ್ನು ಸೇರಿಸಿಕೊಂಡಿದೆ. ಈ ಕಾರಣದಿಂದಾಗಿ ತಂಡವು 14 ಆಟಗಾರರನ್ನು ಹೊಂದಿದೆ. 8 ಭಾರತೀಯ ಮತ್ತು 3 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಲು ಅವರಿಗೆ ಅವಕಾಶ ಇದೆ. ಇದರಲ್ಲಿ ಮಯಾಂಕ್ ಅಗರ್ವಾಲ್, ನಾರಾಯಣ್ ಜಗದೀಶ್‌ರನ್ನು ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ತೆಗೆದುಕೊಳ್ಳಬಹುದು ಅಥವಾ ಮನೀಶ್ ಪಾಂಡೆ, ಮನ್‌ದೀಪ್ ಸಿಂಗ್, ರಿಲೆ ರುಸ್ಸೋ ಮತ್ತು ಹೆನ್ರಿಚ್ ಕ್ಲಾಸೆನ್ ಅವರನ್ನು ತಮ್ಮ ಅಂಕಣದಲ್ಲಿ ಇರಿಸಲು ಪ್ರಯತ್ನಿಸಬಹುದು.
ರಾಜಸ್ಥಾನ್ ರಾಯಲ್ಸ್ 13.22 ಕೋಟಿ ವೆಚ್ಚದಲ್ಲಿ 4 ವಿದೇಶಿ ಮತ್ತು 5 ಭಾರತೀಯ ಆಟಗಾರರನ್ನು ಖರೀದಿಸಬಹುದು. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಕಳೆದ ಋತುವಿನ ರನ್ನರ್ ಅಪ್ ತಂಡವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸ್ಯಾಮ್ ಕರಣ್, ಬೆನ್ ಸ್ಟೋಕ್ಸ್, ಕ್ಯಾಮೆರಾನ್ ಗ್ರೀನ್, ಶಕೀಬ್ ಅಲ್ ಹಸನ್, ಶಹಬಾಜ್ ನದೀಮ್, ಮೊಹಮ್ಮದ್ ನಬಿ ಅವರಂತಹ ಆಟಗಾರರನ್ನು ಆಲ್ ರೌಂಡರ್‌ಗಳಾಗಿ ಸೇರಿಸಿಕೊಳ್ಳಬಹುದು.
ಗುಜರಾತ್ ಟೈಟಾನ್ಸ್ 19.25 ಕೋಟಿ ರೂ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗುವ ಮೂಲಕ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಅವರು 3 ವಿದೇಶಿ ಮತ್ತು 2 ಭಾರತೀಯ ಆಟಗಾರರನ್ನು ಖರೀದಿಸಬಹುದು. ಬೌಲರ್‌ಗಳಾದ ರೀಸ್ ಟೋಪ್ಲಿ, ಆಡಮ್ ಮಿಲ್ನೆ, ಕ್ರಿಸ್ ಜೋರ್ಡಾನ್, ಆಲ್‌ರೌಂಡರ್‌ಗಳಾದ ಸ್ಯಾಮ್ ಕರ್ರಾನ್, ಡೇನಿಯಲ್ ಸೈಮ್ಸ್, ಬೆನ್ ಸ್ಟೋಕ್ಸ್ ತಮ್ಮ ಅಂಗಣದಲ್ಲಿ ಕೆಲವು ಆಟಗಾರರ ಖರೀದಿಗೆ ಎದುರು ನೋಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ನಾಯಕತ್ವದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 2020 ಮತ್ತು 2021 ಸೀಸನ್‌ಗಳಲ್ಲಿ ಪ್ಲೇಆಫ್ ತಲುಪಿದೆ. ಅವರು ಹರಾಜಿನಲ್ಲಿ 5 ಆಟಗಾರರನ್ನು ಬಿಟ್ಟಿದ್ದಾರೆ. ಡೆಲ್ಲಿ 2 ವಿದೇಶಿ ಮತ್ತು 3 ಭಾರತೀಯ ಆಟಗಾರರನ್ನು ಖರೀದಿಸಲು 19.45 ಕೋಟಿ ಬಾಕಿ ಇದೆ. ಮೊದಲ ಬಾರಿಗೆ ಐಪಿಎಲ್ ಗೆಲ್ಲಲು, ಕೆಲವು ಮ್ಯಾಚ್ ವಿನ್ನರ್‌ಗಳು ತಂಡಕ್ಕೆ ಸೇರ್ಪಡೆಗೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ತಂಡವು ರಿಲೆ ರುಸ್ಸೋ, ರಾಸಿ ವ್ಯಾನ್ ಡೆರ್ ಡಸ್ಸೆನ್, ಮನೀಶ್ ಪಾಂಡೆ, ಹ್ಯಾರಿ ಬ್ರೂಕ್, ಸ್ಯಾಮ್ ಬಿಲ್ಲಿಂಗ್ಸ್, ಆಲ್ ರೌಂಡರ್ ಜಿಮ್ಮಿ ನೀಶಮ್, ಸ್ಯಾಮ್ ಕರಣ್, ಬೆನ್ ಸ್ಟೋಕ್ಸ್, ಶಕೀಬ್ ಅಲ್ ಹಸನ್, ಮೊಹಮ್ಮದ್ ನಬಿ ಗಾಳ ಹಾಕುವ ಚಿಂತನೆ ಮಾಡುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ಬಳಿ 20.45 ಕೋಟಿ ಉಳಿದಿದೆ. ಹರಾಜಿಗೂ ಮುನ್ನ ಡ್ವೇನ್ ಬ್ರಾವೋ ಸೇರಿದಂತೆ ಕೆಲ ಆಟಗಾರರನ್ನು ಬಿಡುಗಡೆ ಮಾಡುವ ಮೂಲಕ 2 ವಿದೇಶಿ ಹಾಗೂ 5 ಭಾರತೀಯ ಆಟಗಾರರನ್ನು ಖರೀದಿಸಲು ಸಿದ್ಧತೆ ನಡೆಸಿದ್ದಾರೆ. ಪ್ರಸ್ತುತ, ತಂಡವು ವೇಗದ ಬೌಲರ್‌ಗಳಾದ ವರುಣ್ ಆರೋನ್, ಬಾಸಿಲ್ ಥಂಪಿ, ಜೋಶ್ ಲಿಟಲ್ ಜೊತೆಗೆ ಸ್ಪಿನ್ನರ್ ಮಯಾಂಕ್ ಮಾರ್ಕಾಂಡೆ, ಮೊಹಮ್ಮದ್ ನಬಿ ಯಾರನ್ನಾದರೂ ಖರೀದಿಸಬಹುದು. ಸ್ಯಾಮ್ ಬಿಲ್ಲಿಂಗ್ಸ್, ನಾರಾಯಣ್ ಜಗದೀಶ್, ಸ್ಯಾಮ್ ಕರಣ್, ಕ್ಯಾಮೆರಾನ್ ಗ್ರೀನ್, ಜಿಮ್ಮಿ ನೀಶಮ್, ಜೇಸನ್ ಹೋಲ್ಡರ್ ಅವರಂತಹ ಆಟಗಾರರ ಮೇಲೂ ಹೂಡಿಕೆ ಮಾಡಬಹುದು.
ಮುಂಬೈ ಇಂಡಿಯನ್ಸ್ ತಮ್ಮ ಪರ್ಸ್‌ನಲ್ಲಿ 20.55 ಕೋಟಿ ರೂಪಾಯಿಗಳನ್ನು ಹೊಂದಿದ್ದು, ಇದರಿಂದ ತಂಡವು 3 ವಿದೇಶಿ ಮತ್ತು 6 ಭಾರತೀಯ ಆಟಗಾರರನ್ನು ಖರೀದಿಸಬಹುದು. ಹರಾಜಿನ ಮೊದಲು ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು ತಂಡಕ್ಕೆ ಸೇರಿಸಿದೆ. ತಂಡವು ಆಲ್‌ರೌಂಡರ್‌ಗಳಾದ ಬೆನ್ ಸ್ಟೋಕ್ಸ್, ಕ್ಯಾಮರೂನ್ ಗ್ರೀನ್, ಸ್ಯಾಮ್ ಕರನ್, ಜೇಸನ್ ಹೋಲ್ಡರ್ ಜೊತೆಗೆ ಸ್ಪಿನ್ನರ್‌ಗಳಾದ ಆಡಮ್ ಝಂಪಾ, ಆದಿಲ್ ರಶೀದ್, ಶಕೀಬ್ ಅಲ್ ಹಸನ್, ಮೊಹಮ್ಮದ್ ನಬಿ ಅಥವಾ ನಾರಾಯಣ ಜಗದೀಶ್ ಅವರ ಖರೀದಿಗೆ ಎದುರು ನೋಡುತ್ತಿದೆ.
ಲಕ್ನೋ ಸೂಪರ್‌ಜೈಂಟ್ಸ್ 4 ವಿದೇಶಿ ಮತ್ತು 6 ಭಾರತೀಯ ಆಟಗಾರರನ್ನು 23.35 ಕೋಟಿ ರೂ.ಗೆ ಖರೀದಿಸಲು ಸಿದ್ಧತೆ ನಡೆಸಿದೆ. ಸಮಾನ್ಯ ಹೊಸ ತಂಡವನ್ನೇ ಕಟ್ಟಲು ಸಿದ್ಧತೆ ನಡೆಸುತ್ತಿದ್ದು, ಆಲ್ ರೌಂಡರ್ ಬೆನ್ ಸ್ಟೋಕ್ಸ್, ಸ್ಯಾಮ್ ಕರನ್, ಕ್ಯಾಮೆರಾನ್ ಗ್ರೀನ್, ಶಿವಂ ಮಾವಿ, ಸಿಕಂದರ್ ರಜಾ, ಜಿಮ್ಮಿ ನೀಶಮ್, ಶಕೀಬ್ ಅಲ್ ಹಸನ್ ಅವರಂತಹ ಆಟಗಾರರ ಮೇಲೆ ಗಮನ ಹರಿಸಬಹುದು.
ಪಂಜಾಬ್ ಕಿಂಗ್ಸ್ ಜೇಬಿನಲ್ಲಿ 32.2 ಕೋಟಿ ರೂ.ಗಳಿದ್ದು, ಇದರಿಂದ 3 ವಿದೇಶಿ ಹಾಗೂ 6 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಪಂಜಾಬ್ ಕಿಂಗ್ಸ್ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಹೊಸ ನಾಯಕನನ್ನಾಗಿ ಮಾಡಿದೆ. ಹಳೆ ನಾಯಕ ಮಯಾಂಕ್ ಅಗರ್ವಾಲ್ ಸೇರಿದಂತೆ 9 ಆಟಗಾರರನ್ನು ಕೈ ಬಿಟ್ಟಿದೆ. ಪ್ರಸ್ತುತ, ತಂಡವು ಕೇನ್ ವಿಲಿಯಮ್ಸನ್, ರಿಲೆ ರುಸ್ಸೋ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಮನೀಶ್ ಪಾಂಡೆ, ನಿಕೋಲಸ್ ಪೂರನ್, ಸ್ಯಾಮ್ ಬಿಲ್ಲಿಂಗ್ಸ್, ನಾರಾಯಣ್ ಜಗದೀಶನ್ ಜೊತೆಗೆ ಶಕೀಬ್ ಅಲ್ ಹಸನ್, ಸ್ಯಾಮ್ ಕರಣ್, ಬೆನ್ ಸ್ಟೋಕ್ಸ್, ಕ್ಯಾಮರೂನ್ ಗ್ರೀನ್, ಶಿವಂ ಮಾವಿ ಅವರಂತಹ ಆಟಗಾರರ ಮೇಲೆ ಕಣ್ಣಿರಿಸಿದೆ.
ಸನ್‌ರೈಸರ್ಸ್ ಹೈದರಾಬಾದ್ ಅತಿ ಹೆಚ್ಚು 42.25 ಕೋಟಿ ರೂ.ಗಳನ್ನು ಹೊಂದಿದೆ, ತಂಡವು 4 ವಿದೇಶಿ ಮತ್ತು 9 ಭಾರತೀಯ ಆಟಗಾರರನ್ನು ಖರೀದಿಸಬಹುದು. ಹರಾಜಿನ ಮೊದಲು ತಂಡವು ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ 12 ಆಟಗಾರರನ್ನು ತಂಡದಿಂದ ಬಿಟ್ಟಿದೆ. ತಂಡಕ್ಕೆ ಹೊಸ ನಾಯಕನ ಹುಡುಕಾಟವೂ ಆಗುತ್ತಿದೆ. ಆಲ್ ರೌಂಡರ್ಗಳನ್ನು ಖರೀದಿಸಲು ತಂಡ ಒತ್ತಾಯಿಸಲಿದ್ದು, ಇದರಲ್ಲಿ ಸ್ಯಾಮ್ ಕರಣ್, ಬೆನ್ ಸ್ಟೋಕ್ಸ್, ಕ್ಯಾಮೆರಾನ್ ಗ್ರೀನ್ ಹೊರತಾಗಿ ನಾರಾಯಣ್ ಜಗದೀಶನ್, ಕೆಎಸ್ ಭರತ್, ಹ್ಯಾರಿ ಬ್ರೂಕ್, ನಜಿಬುಲ್ಲಾ ಜದ್ರಾನ್, ಸ್ಯಾಮ್ ಬಿಲ್ಲಿಂಗ್ಸ್ ಅವರಂತಹ ಆಟಗಾರರನ್ನು ಸೇರಿಸಿಕೊಳ್ಳಬಹುದು.
ಹಾರಾಜು ಪ್ರಕ್ರಿಯೆ 2:30ಕ್ಕೆ ಆರಂಭವಾಗಲಿದ್ದು, ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ನಲ್ಲಿ ವೀಕ್ಷಿಸಬಹುದಾಗಿದೆ.