ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಗೋಸ್ಕರ ಇಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು, 10 ಫ್ರಾಂಚೈಸಿಗಳು ಮೊದಲ ದಿನವೇ ತಮ್ಮಿಷ್ಟದ ಪ್ಲೇಯರ್ಸ್ಗಳನ್ನ ಖರೀದಿ ಮಾಡಿವೆ. ಇದರ ಮಧ್ಯೆ ಕೆಲವೊಂದಿಷ್ಟು ಹೊಸ ಪ್ರತಿಭೆಗಳಿಗೆ ಜಾಕ್ಪಾಟ್ ಹೊಡೆದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ಗೆ ಬ್ಯಾಕ್ ಅಪ್ ಆಗಿ ಮತ್ತೋರ್ವ ಯಂಗ್ ವಿಕೆಟ್ ಕೀಪರ್ಗೆ ಖರೀದಿ ಮಾಡಿದ್ದು, ಉತ್ತರಾಖಂಡ ರಾಮನಗರ್ದ ಅನುಜ್ ರಾವತ್ಗೆ ಖರೀದಿ ಮಾಡಿದೆ. 20 ಲಕ್ಷ ರೂ. ಮೂಲ ಬೆಲೆಯ ಅನ್ಕ್ಯಾಪ್ಡ್ ಪ್ಲೇಯರ್ ರಾವತ್ಗೆ ದಾಖಲೆಯ 3.40 ಕೋಟಿ ರೂ. ನೀಡಿ ಖರೀದಿ ಮಾಡಿದೆ.
1999ರಲ್ಲಿ ಉತ್ತರಾಖಂಡದಲ್ಲಿ ಜನಿಸಿರುವ ಅನುಜ್ ದೆಹಲಿ ಪರ 2017-18ರಲ್ಲಿ ರಣಜಿ ಟೂರ್ನಿ ಆಡಿದ್ದು, 2018-19ರಲ್ಲಿ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಲಿಸ್ಟ್ ಎ ಕ್ರಿಕೆಟ್ನಲ್ಲೂ ಗಮನ ಸೆಳೆದಿರುವ ಈ ಪ್ಲೇಯರ್ 2020ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇಲ್ ಆಗಿದ್ದರು. ಆದರೆ, ಈ ಸಲ ಈತನ ಖರೀದಿ ಮಾಡುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ.
ಇದನ್ನೂ ಓದಿರಿ:2008 ರಿಂದ 2022.. ಐಪಿಎಲ್ ಪ್ರತಿ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಆಟಗಾರರಿವರು..
2021ರ ಐಪಿಎಲ್ನಲ್ಲಿ ರಾಜಸ್ಥಾನ ತಂಡದಲ್ಲಿದ್ದ ಅನುಜ್ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಆದರೆ,ಬ್ಯಾಟಿಂಗ್ ಮಾಡುವ ಅವಕಾಶ ಮಾತ್ರ ಸಿಕ್ಕಿರಲಿಲ್ಲ. ಈ ಸಲದ ಹರಾಜು ಪ್ರಕ್ರಿಯೆಯಲ್ಲಿ 22 ವರ್ಷದ ಈ ವಿಕೆಟ್ ಕೀಪರ್, ಬ್ಯಾಟರ್ ಖರೀದಿ ಮಾಡಲು ಸನ್ರೈಸರ್ಸ್ ಹೈದರಾಬಾದ್, ಗುಜರಾತ್ ಸಹ ಪೈಪೋಟಿ ನಡೆಸಿದ್ದವು, ಆದರೆ, ಕೊನೆಯದಾಗಿ ಆರ್ಸಿಬಿ ತನ್ನ ಬಲೆಗೆ ಹಾಕಿಕೊಂಡಿದೆ.