ಬೆಂಗಳೂರು :ಮೊದಲ ದಿನದ ಹರಾಜಿನಲ್ಲಿ ದುಂದು ವೆಚ್ಚ ಮಾಡಿದ ಟೀಕೆಗೆ ಗುರಿಯಾಗಿದ್ದ ಆರ್ಸಿಬಿ 2ನೇ ದಿನ ಯುವ ಆಟಗಾರರನ್ನು ಖರೀದಿಸುವ ಮೂಲಕ ತಂಡವನ್ನು ಸಮತೋಲನಕ್ಕೆ ತರುವಲ್ಲಿ ಕೊಂಚ ಯಶಸ್ವಿಯಾಗಿದೆ.
ಆರ್ಸಿಬಿಗೆ ಬಂದ ಸ್ಫೋಟಕ ಬ್ಯಾಟರ್ ಫಿನ್ ಅಲೆನ್, ಲಾಮ್ರೋರ್, ರುದರ್ಫೋಡ್ - ಐಪಿಎಲ್ 2022 ಲೈವ್ ಅಪ್ಡೇಟ್ಸ್
ಇತ್ತೀಚಿಗಷ್ಟೇ ನ್ಯೂಜಿಲ್ಯಾಂಡ್ ತಂಡಕ್ಕೆ ಪದಾರ್ಪಣೆ ಮಾಡಿರುವ ಆರಂಭಿಕ ಬ್ಯಾಟರ್ ದೇಶಿ ಕ್ರಿಕೆಟ್ನಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ಆವೃತ್ತಿಯಲ್ಲೂ ಆರ್ಸಿಬಿಯಲ್ಲಿದ್ದರಾದರೂ ಒಂದೂ ಪಂದ್ಯದಲ್ಲಿ ಆಡುವ ಅವಕಾಶ ಸಕ್ಕಿರಲಿಲ್ಲ, ಇದೀಗ ಮತ್ತೆ 80 ಲಕ್ಷ ರೂ.ಗಳಿಗೆ ಆರ್ಸಿಬಿಗೆ ಮರಳಿದ್ದಾರೆ..
ಆರ್ಸಿಬಿ
ಇತ್ತೀಚಿಗಷ್ಟೇ ನ್ಯೂಜಿಲ್ಯಾಂಡ್ ತಂಡಕ್ಕೆ ಪದಾರ್ಪಣೆ ಮಾಡಿರುವ ಆರಂಭಿಕ ಬ್ಯಾಟರ್ ದೇಶಿ ಕ್ರಿಕೆಟ್ನಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ಆವೃತ್ತಿಯಲ್ಲೂ ಆರ್ಸಿಬಿಯಲ್ಲಿದ್ದರಾದರೂ ಒಂದೂ ಪಂದ್ಯದಲ್ಲಿ ಆಡುವ ಅವಕಾಶ ಸಕ್ಕಿರಲಿಲ್ಲ, ಇದೀಗ ಮತ್ತೆ 80 ಲಕ್ಷ ರೂ.ಗಳಿಗೆ ಆರ್ಸಿಬಿಗೆ ಮರಳಿದ್ದಾರೆ.
- ವೆಸ್ಟ್ ಇಂಡೀಸ್ ತಂಡದಲ್ಲಿರುವ ಸ್ಫೋಟಕ ಬ್ಯಾಟರ್ ಶೆರ್ಫಾನ್ ರುದರ್ಫೋಡ್ ಅವರನ್ನು ಮೂಲಬೆಲೆ 1 ಕೋಟಿ ರೂ.ಗಳಿಗೆ ಖರೀದಿಸಿದೆ.
- ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ನಲ್ಲಿ ಆಡಿದ್ದ ಮಹಿಪಾಲ್ ಲೊಮ್ರೊರ್ರನ್ನು ಕೂಡ ₹95 ಲಕ್ಷಗಳಿಗೆ ಖರೀದಿಸಿದೆ.
- ಆಸ್ಟ್ರೇಲಿಯಾದ ವೇಗದ ಬೌಲರ್ ಜೇಸನ್ ಬೆಹ್ರೆನ್ಡ್ರಾಫ್ ಅವರನ್ನು ₹75 ಲಕ್ಷಕ್ಕೆ ಖರೀದಿಸಿದೆ.
- ಮೆಗಾ ಹರಾಜಿನಲ್ಲಿ ಆರ್ಸಿಬಿ ಖರೀದಿಸಿರುವ ಆಟಗಾರರು
- ಫಾಫ್ ಡು ಪ್ಲೆಸಿಸ್ ಸಾಗರೋತ್ತರ ಬ್ಯಾಟ್ಸ್‌ಮನ್ ₹7,00,00,000
- ವನಿಂದು ಹಸರಂಗ ಸಾಗರೋತ್ತರ ಆಲ್ ರೌಂಡರ್ ₹10,75,00,000
- ಹರ್ಷಲ್ ಪಟೇಲ್ ಭಾರತೀಯ ಆಲ್ ರೌಂಡರ್ ₹10,75,00,000
- ದಿನೇಶ್ ಕಾರ್ತಿಕ್ ಭಾರತೀಯ ವಿಕೆಟ್ ಕೀಪರ್ ₹5,50,00,000
- ಜೋಶ್ ಹ್ಯಾಜಲ್‌ವುಡ್ ಸಾಗರೋತ್ತರ ಬೌಲರ್ ₹7,75,00,000
- ಶಹಬಾಜ್ ಅಹಮದ್ ಭಾರತೀಯ ಆಲ್ ರೌಂಡರ್ ₹2,40,00,000
- ಅನುಜ್ ರಾವತ್ ಭಾರತೀಯ ವಿಕೆಟ್ ಕೀಪರ್ ₹3,40,00,000
- ಆಕಾಶ್ ದೀಪ್ ಇಂಡಿಯನ್ ಬೌಲರ್ ₹20,00,000
- ಮಹಿಪಾಲ್ ಲೊಮ್ರೋರ್ ಭಾರತೀಯ ಆಲ್ ರೌಂಡರ್ ₹95,00,000
- ಫಿನ್ ಅಲೆನ್ ಸಾಗರೋತ್ತರ ಬ್ಯಾಟ್ಸ್‌ಮನ್ ₹80,00,000
- ಶೆರ್ಫೇನ್ ರುದರ್‌ಫೋರ್ಡ್ ಸಾಗರೋತ್ತರ ಆಲ್‌ರೌಂಡರ್ ₹1,00,00,000
- ಜೇಸನ್ ಬೆಹ್ರೆಂಡಾರ್ಫ್ ಸಾಗರೋತ್ತರ ಬೌಲರ್ ₹75,00,000