ಕರ್ನಾಟಕ

karnataka

ETV Bharat / sports

ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಮುಂಬೈ - ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್

ಮುಂಬೈ ಇಂಡಿಯನ್ಸ್ ಎರಡು ಬದಲಾವಣೆ ಮಾಡಿಕೊಂಡಿದೆ. ಇಶಾನ್ ಕಿಶನ್ ಬದಲು ಸೌರವ್ ತಿವಾರಿ ಮತ್ತು ಆ್ಯಡಂ ಮಿಲ್ನೆ ಬದಲಿಗೆ ನೇಥನ್ ಕೌಲ್ಟರ್ ನೈಲ್ ಅವರಿಗೆ ಅವಕಾಶ ನೀಡಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಮಯಾಂಕ್ ಅಗರ್​ವಾಲ್ ಬದಲಿಗೆ ಮಂದೀಪ್​ ಸಿಂಗ್ ಕಣಕ್ಕಿಳಿದಿದ್ದಾರೆ.

Mumbai Indians won the toss against punjab
ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್

By

Published : Sep 28, 2021, 7:18 PM IST

ಅಬುಧಾಬಿ: ಪ್ಲೇ ಆಫ್​ ತಲುಪಲು ನಿರ್ಣಾಯಕವಾಗಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ಎರಡು ಬದಲಾವಣೆ ಮಾಡಿಕೊಂಡಿದೆ. ಇಶಾನ್ ಕಿಶನ್ ಬದಲು ಸೌರವ್ ತಿವಾರಿ ಮತ್ತು ಆ್ಯಡಂ ಮಿಲ್ನೆ ಬದಲಿಗೆ ನೇಥನ್ ಕೌಲ್ಟರ್ ನೈಲ್ ಅವರಿಗೆ ಅವಕಾಶ ನೀಡಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಮಯಾಂಕ್ ಅಗರ್​ವಾಲ್ ಬದಲಿಗೆ ಮಂದೀಪ್​ ಸಿಂಗ್ ಕಣಕ್ಕಿಳಿದಿದ್ದಾರೆ.

ಮುಂಬೈ ಮತ್ತು ಪಂಜಾಬ್ ತಂಡಗಳು 14ನೇ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದ್ದು 4 ಗೆಲುವು ಮತ್ತು 6 ಸೋಲುಗಳಿಂದ ತಲಾ 8 ಅಂಕ ಪಡೆದಿವೆ. ರನ್​ ರೇಟ್​ ಆಧಾರದ ಮೇಲೆ ಪಂಜಾಬ್ 5ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 7ನೇ ಸ್ಥಾನದಲ್ಲಿದೆ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೀ), ಸೂರ್ಯಕುಮಾರ್ ಯಾದವ್, ಸೌರವ್ ತಿವಾರಿ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ನೇಥನ್ ಕೌಲ್ಟರ್ ನೈಲ್, ರಾಹುಲ್ ಚಾಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ಪಂಜಾಬ್ ಕಿಂಗ್ಸ್: KL ರಾಹುಲ್ (ನಾಯಕ/ವಿಕೀ), ಮಂದೀಪ್ ಸಿಂಗ್, ಕ್ರಿಸ್ ಗೇಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಹರಪ್ರೀತ್ ಬ್ರಾರ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ನೇಥನ್ ಎಲ್ಲಿಸ್, ಅರ್ಷ್​ದೀಪ್ ಸಿಂಗ್

ABOUT THE AUTHOR

...view details