ಮುಂಬೈ (ಮಹಾರಾಷ್ಟ್ರ) :ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಆರಂಭಕ್ಕೂ ಮುನ್ನ 10ತಂಡಗಳು ತಮ್ಮ ಆಟಗಾರರನ್ನು ಉಳಿಸಿಕೊಂಡಿರುವ ಪಟ್ಟಿಯನ್ನು ನಿನ್ನೆ (ಭಾನುವಾರ) ಬಿಡುಗಡೆ ಮಾಡಿದೆ. ಇದರಲ್ಲಿ ಸಾಕಷ್ಟು ಸ್ಟಾರ್ ಆಟಗಾರರನ್ನು ತಂಡಗಳು ಕೈ ಬಿಟ್ಟಿದ್ದು, ಹರಾಜು ಪ್ರಕ್ರಿಯೆಯಲ್ಲಿದ್ದಾರೆ. ಈ ನಡುವೆ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮರಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿದ್ದಾರೆ. ಇತ್ತ ಭಾರತ ತಂಡದ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಗುಜರಾತ್ ಟೈಟಾನ್ಸ್ ನಾಯಕನಾಗಿ ನೇಮಕ ಮಾಡಿದೆ.
ಕೆಲ ದಿನಗಳಿಂದ ಕ್ರಿಕೆಟ್ ಗಲ್ಲಿಯಲ್ಲಿ ಸತತ ಎರಡು ಬಾರಿ ಫೈನಲ್ ಪ್ರವೇಶಿಸಿ ಒಂದು ಬಾರಿ ಚಾಂಪಿಯನ್ಸ್, ಮತ್ತೊಂದು ಬಾರಿ ರನ್ನರ್ ಆಪ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮರಳಿ ಮುಂಬೈ ಇಂಡಿಯನ್ಸ್ ಸೇರಲಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡುತ್ತಿತ್ತು. ಆಟಗಾರರನ್ನು ಉಳಿಸಿಕೊಳ್ಳುವ ಕೊನೆ ದಿನವಾಗಿದ್ದರಿಂದ ಗುಜರಾತ್ ತಾನು ಉಳಿಸಿಕೊಂಡ ಆಟಗಾರ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಹೆಸರನ್ನು ಬಹಿರಂಗಪಡಿಸಿತ್ತು. ಆದರೇ ಸ್ವಲ್ಪ ಸಮಯದ ನಂತರ ಪಾಂಡ್ಯ ಮುಂಬೈ ಸೇರಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಹೀಗಾಗಿ ಗುಜರಾತ್ ಟೈಟಾನ್ಸ್ ತಂಡದ ಹೊಣೆಗಾರಿಕೆಯನ್ನು ಯಂಗ್ ಫ್ಲೇಯರ್ ಶುಭಮನ್ ಗಿಲ್ ಅವರ ಹೆಗಲ ಮೇಲಿಟ್ಟಿದೆ. ಈ ಬಗ್ಗೆ ತನ್ನ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿದೆ. ಗಿಲ್ ಕೂಡ ಕಳೆದ ಎರಡು ಆವೃತ್ತಿಗಳಿಂದ ಟೈಟಾನ್ಸ್ ಪರ ಆಡುತ್ತಿದ್ದರು. ತಂಡ ಫೈನಲ್ ಪ್ರಶಿಸುವುದಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಗಿಲ್ ಗುಜರಾತ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.