ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಹರಾಜು ಮಂಗಳವಾರ ಇಲ್ಲಿನ ಕೋಕಾ ಕೋಲಾ ಅರೆನಾದಲ್ಲಿ ನಡೆಯುತ್ತಿದೆ. ಬಿಡ್ನಲ್ಲಿ ಅನ್‌ಕ್ಯಾಪ್ಡ್ ಬ್ಯಾಟರ್ ಸಮೀರ್ ರಿಜ್ವಿ ಅವರನ್ನು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 8.40 ಕೋಟಿ ರೂ.ಗೆ ಖರೀದಿಸಿದರೆ, ವಿದರ್ಭದ ಅನ್‌ಕ್ಯಾಪ್ಡ್ ಶುಭಂ ದುಬೆ ಅವರಿಗೆ ರಾಜಸ್ಥಾನ್ ರಾಯಲ್ಸ್ 5.80 ಕೋಟಿ ರೂ. ಕೊಟ್ಟಿದೆ.
ಮೀರತ್‌ನಲ್ಲಿ ಜನಿಸಿದ 20 ವರ್ಷದ ಸಮೀರ್ ರಿಜ್ವಿ ಉತ್ತರ ಪ್ರದೇಶಕ್ಕಾಗಿ ದೇಶೀಯ ಕ್ರಿಕೆಟ್ ಆಡುತ್ತಾರೆ. ಅವರು ತಮ್ಮ ಆರಂಭಿಕ ವೃತ್ತಿಜೀವನದಲ್ಲಿ ಇದುವರೆಗೆ ಕೇವಲ 11 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು ಅನೇಕ ಟಿ-20 ಪಂದ್ಯಗಳನ್ನು ಆಡಿದ್ದಾರೆ. ಸಮೀರ್ ರಿಜ್ವಿ ಬಲಗೈ ಬ್ಯಾಟರ್ ಆಗಿದ್ದು, ಟಿ20 ಕ್ರಿಕೆಟ್‌ನಲ್ಲಿ 295 ರನ್ ಗಳಿಸಿದ್ದಾರೆ, ಅಜೇಯ 75 ರನ್ ಅವರ ಅತ್ಯುತ್ತಮ ಮೊತ್ತವಾಗಿದೆ. ಅವರು ಜನವರಿ 2020ರಲ್ಲಿ ಇಂದೋರ್‌ನಲ್ಲಿ ಮಧ್ಯಪ್ರದೇಶದ ವಿರುದ್ಧ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯವನ್ನು ಆಡಿದರು. ಅಕ್ಟೋಬರ್ 2022 ರಲ್ಲಿ ಜೈಪುರದಲ್ಲಿ ಮಣಿಪುರದ ವಿರುದ್ಧ ಮೊದಲ ಟಿ20ಪಂದ್ಯವನ್ನು ಆಡಿದರು.
ಶುಭಂ ದುಬೆಗೆ 5.80 ಕೊಟ್ಟ ರಾಜಸ್ಥಾನ:ವಿದರ್ಭದ ಅನ್‌ಕ್ಯಾಪ್ಡ್ ಶುಭಂ ದುಬೆ ಅವರಗೆ ರಾಜಸ್ಥಾನ್ ರಾಯಲ್ಸ್ 5.80 ಕೋಟಿ ರೂ. ಕೊಟ್ಟಿದೆ. ಇದು ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಎರಡನೇ ದುಬಾರಿ ಆಯ್ಕೆ ಆಗಿದೆ. ಎಡಗೈ ಬ್ಯಾಟರ್ ಮತ್ತು ಆಫ್-ಬ್ರೇಕ್ ಬೌಲರ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಬಿಡ್ಡಿಂಗ್ ವಾರ್ ಏರ್ಪಟ್ಟಿತು. ಇದರಿಂದ 5.80 ಕೋಟಿ ಬೆಲೆಗೆ ಮಾರಾಟವಾದರು.
ಟಾಪ್ 10 ಬಿಡ್ಗಳು:
ಮಿಚೆಲ್ ಸ್ಟಾರ್ಕ್ - 24.75 ಕೋಟಿ -ಕೋಲ್ಕತ್ತಾ ನೈಟ್ ರೈಡರ್ಸ್
ಪ್ಯಾಟ್ ಕಮಿನ್ಸ್ - 20.50 ಕೋಟಿ - ಸನ್ರೈಸರ್ಸ್ ಹೈದರಾಬಾದ್
ಡೇರಿಯಲ್ ಮಿಚೆಲ್ - 14 ಕೋಟಿ - ಚೆನ್ನೈ ಸೂಪರ್ ಕಿಂಗ್ಸ್
ಹರ್ಷಲ್ ಪಟೇಲ್ - 11.75 ಕೋಟಿ- ಪಂಜಾಬ್ ಕಿಂಗ್ಸ್
ಅಲ್ಜಾರಿ ಜೋಸೆಫ್ - 11.50 ಕೋಟಿ - ರಾಯಲ್ ಚಾಲೆಂಜರ್ಸ್ ಬೆಂಗಳೂರು
ಸಮೀರ್ ರಿಜ್ವಿ - 8.40 ಕೋಟಿ - ಚೆನ್ನೈ ಸೂಪರ್ ಕಿಂಗ್ಸ್
ಶಾರುಖ್ ಖಾನ್ - 7.40ಕೋಟಿ - ಗುಜರಾತ್ ಟೈಟಾನ್ಸ್
ರೋವ್‌ಮನ್ ಪೊವೆಲ್ 7.40 ಕೋಟಿ - ರಾಜಸ್ಥಾನ ರಾಯಲ್ಸ್
ಟ್ರಾವಿಸ್ ಹೆಡ್ - 6.80 ಕೋಟಿ - ಸನ್ರೈಸರ್ಸ್ ಹೈದರಾಬಾದ್
ಶಿವಂ ಮಾವಿ - 6.40 ಕೋಟಿ- ಲಕ್ನೋ ಸೂಪರ್ ಜೈಂಟ್ಸ್
ಇದನ್ನೂ ಓದಿ:ನಾಯಕ ಕಮಿನ್ಸ್ ಮೀರಿಸಿದ ಸ್ಟಾರ್ಕ್: ಮಿಚೆಲ್ ಮೇಲೆ ಕೆಕೆಆರ್ ಐತಿಹಾಸಿಕ ಬಿಡ್.. ಖರೀದಿಸಿದ್ದು ಎಷ್ಟಕ್ಕೆ ಗೊತ್ತಾ?