ಕರ್ನಾಟಕ

karnataka

ETV Bharat / sports

ಈ ಬಾರಿ ದುಬೈನಲ್ಲಿ ಐಪಿಎಲ್‌ ಹರಾಜು: ದುಬಾರಿ ಆಟಗಾರರು ಯಾರು? - Indian Premier League 2024

IPL 2024 players auction: ಐಪಿಎಲ್ 2024ರ ಹರಾಜು ದುಬೈನಲ್ಲಿ ನಡೆಯಲಿದೆ. 1,000ಕ್ಕೂ ಹೆಚ್ಚು ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಯಾವ ತಂಡ ಎಷ್ಟು ಬಿಡ್ ಮಾಡುತ್ತದೆ ಎಂಬುದು ಕುತೂಹಲದ ವಿಷಯ.

ipl 2024 auction
ipl 2024 auction

By ETV Bharat Karnataka Team

Published : Dec 5, 2023, 7:34 PM IST

ಹೈದರಾಬಾದ್​​: ಐಪಿಎಲ್ 2024ಕ್ಕೆ ಸಿದ್ಧತೆ ಆರಂಭವಾಗಿದೆ. ಇದಕ್ಕಾಗಿ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ದೇಶದ ಹೊರಗೆ ಬಿಡ್ಡಿಂಗ್​ ಮಾಡಲಾಗುತ್ತಿದೆ. ಸುಮಾರು 1,166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 830 ಭಾರತೀಯರಿದ್ದು, 18 ಕ್ಯಾಪ್ಡ್ ಆಟಗಾರರು ಮತ್ತು 336 ವಿದೇಶಿ ಆಟಗಾರರಿದ್ದಾರೆ.

ಕಳೆದ ಏಕದಿನ ವಿಶ್ವಕಪ್​ ಪ್ರದರ್ಶನದ ಆಧಾರದಲ್ಲಿ ಬಿಡ್ಡಿಂಗ್​ ಮಹತ್ವ ಪಡೆಯಲಿದೆ. ಈ ಹರಾಜು 2024ರ ಟಿ20 ವಿಶ್ವಕಪ್‌ಗಾಗಿ ತಂಡದ ಆಯ್ಕೆಗೂ ದಾರಿಯಾಗಲಿದೆ. ಐಪಿಎಲ್​ ಮುಗಿದ ತಿಂಗಳ ಅಂತರದಲ್ಲಿ ಟೂರ್ನಿ ನಡೆಯಲಿದ್ದು, ರಾಷ್ಟ್ರೀಯ ತಂಡದ ಆಯ್ಕೆಗಾರರ ಗಮನ ಸೆಳೆಯಲು ಆಟಗಾರರಿಗೆ ಪ್ರಮುಖ ವೇದಿಕೆಯಾಗಲಿದೆ.

ಬಿಡ್ಡಿಂಗ್​​ನಲ್ಲಿ ಗಮನ ಸೆಳೆಯಲಿರುವ ಆಟಗಾರರು:

ಟ್ರಾವಿಸ್ ಹೆಡ್: ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಇವರು ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿ. ಉತ್ತಮ ಫಾರ್ಮ್‌ನಲ್ಲಿದ್ದು ಭಾರತದ ಪಿಚ್‌ಗಳಲ್ಲಿ ಸ್ಪಿನ್ ಬೌಲರ್‌ಗಳ ವಿರುದ್ಧ ಸಾಕಷ್ಟು ರನ್ ಗಳಿಸಿದ್ದಾರೆ. 23 ಟಿ20 ಪಂದ್ಯಗಳ 22 ಇನ್ನಿಂಗ್ಸ್‌ನಲ್ಲಿ 1 ಅರ್ಧಶತಕದೊಂದಿಗೆ 554 ರನ್ ಕಲೆಹಾಕಿದ್ದಾರೆ. ಈ ಅಂಕಿಅಂಶ ದೊಡ್ಡದಾಗಿ ಕಾಣದಿದ್ದರೂ ವಿಶ್ವಕಪ್​ ಪ್ರದರ್ಶನದಿಂದ ಬೇಡಿಕೆ ಹೆಚ್ಚು ಸಾಧ್ಯತೆ ಇದೆ. ಈ ಆಟಗಾರನ ಮೇಲೆ ಚೆನ್ನೈ, ಬೆಂಗಳೂರು ಮತ್ತು ಗುಜರಾತ್‌ನಂತಹ ತಂಡಗಳು ಭಾರಿ ಮೊತ್ತ ಹೂಡಿಕೆ ಮಾಡಲು ಸಿದ್ಧವಿದೆ.

ರಚಿನ್ ರವೀಂದ್ರ: ನ್ಯೂಜಿಲೆಂಡ್‌ನ ಯುವ ಆಲ್‌ರೌಂಡರ್ ರಚಿನ್ ರವೀಂದ್ರ ಏಕದಿನ ವಿಶ್ವಕಪ್‌ನಲ್ಲಿ ಭಾರತೀಯ ಪಿಚ್‌ಗಳಲ್ಲಿ ಸ್ಪಿನ್ ಬೌಲಿಂಗ್ ವಿರುದ್ಧ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದು, ಶತಕಗಳ ಸುರಿಮಳೆಗೈದರು. ಆರಂಭಿಕರಾಗಿ ಮತ್ತು ಇತರೆ ಸ್ಥಾನದಲ್ಲೂ ಬ್ಯಾಟಿಂಗ್​ ಮಾಡುವ ಸಾಮರ್ಥ್ಯ ಇವರ ಮೇಲಿನ ಬೇಡಿಕೆಗೆ ಕಾರಣ. ಅಲ್ಲದೇ ಸ್ಪಿನ್​ ಬೌಲರ್​ ಆಗಿಯೂ ತಂಡಕ್ಕೆ ಕೊಡುಗೆ ನೀಡುತ್ತಾರೆ. ತಂಡದಲ್ಲಿ ಓರ್ವ ಹೆಚ್ಚುವರಿ ಬೌಲಿಂಗ್​ ಬಲ ಇದ್ದಂತೆಯೂ ಆಗುತ್ತದೆ. ನ್ಯೂಜಿಲೆಂಡ್ ಪರ 18 ಪಂದ್ಯಗಳ 16 ಇನ್ನಿಂಗ್ಸ್‌ಗಳಲ್ಲಿ 145 ರನ್ ಗಳಿಸಿದ್ದಾರೆ. 11 ವಿಕೆಟ್‌ ಪಡೆದಿದ್ದಾರೆ. ಬೆಂಗಳೂರು, ಹೈದರಾಬಾದ್, ಮುಂಬೈ ಫ್ರಾಂಚೈಸಿಗಳು ಇವರ ಮೇಲೆ ಕಣ್ಣಿಟ್ಟಿವೆ.

ಜೆರಾಲ್ಡ್ ಕೋಟ್ಜಿ: ದಕ್ಷಿಣ ಆಫ್ರಿಕಾದ ಅತ್ಯುತ್ತಮ ಬೌಲರ್ ಗೆರಾಲ್ಡ್ ಕೋಟ್ಜಿ ಮೇಲೆ ತಂಡಗಳು ಹೆಚ್ಚಿನ ಬಿಡ್ ಮಾಡಬಹುದು. ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪಿಚ್‌ಗಳಲ್ಲಿ ಎದುರಾಳಿಗೆ ಹೆಚ್ಚು ತಲೆಬಿಸಿ ಉಂಟುಮಾಡಿದ್ದರು. ಕೇವಲ 8 ಪಂದ್ಯಗಳಲ್ಲಿ 20 ವಿಕೆಟ್​ ಪಡೆದಿದ್ದಾರೆ. 2 ಕೋಟಿ ರೂ.ಗಳ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿದ್ದಾರೆ. ಆರ್‌ಸಿಬಿಗೆ ವಿದೇಶಿ ಬೌಲರ್​ನ ಅಗತ್ಯವಿದ್ದು ಇವರ ಮೇಲೆ ದೊಡ್ಡ ಮಟ್ಟದ ಹೂಡಿಕೆ ಮಾಡುವ ಸಾಧ್ಯತೆ ಇದೆ. ಇದುವರೆಗೆ ದಕ್ಷಿಣ ಆಫ್ರಿಕಾ ಪರ 3 ಟಿ20 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ.

ಶಾರ್ದೂಲ್ ಠಾಕೂರ್: 2 ಕೋಟಿ ಮೂಲ ಬೆಲೆಗೆ ಹರಾಜಿಗಿರುವ ಭಾರತೀಯ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಹೆಚ್ಚಿನ ಬಿಡ್​ ಪಡೆಯಬಹುದು ಎಂಬ ನಿರೀಕ್ಷೆ ಇದೆ. ಠಾಕೂರ್​​ ಬ್ಯಾಟ್​ ಮತ್ತು ಬೌಲ್​​ನಲ್ಲಿ ತಂಡಕ್ಕೆ ನೆರವಾಗುತ್ತಾರೆ. ಈ ಹಿಂದೆ ಐಪಿಎಲ್‌ನಲ್ಲಿ ಹಲವು ಅದ್ಭುತ ಇನ್ನಿಂಗ್ಸ್‌ ಆಡಿದ್ದಾರೆ. ಕೆಕೆಆರ್​ ಇವರನ್ನು ಈ ವರ್ಷ ಬಿಡುಗಡೆ ಮಾಡಿದೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ಪರ ಆಡಿದ್ದಾರೆ. ಮತ್ತೊಮ್ಮೆ ಅದೇ ತಂಡಗಳು ಶಾರ್ದೂಲ್​ ಮೇಲೆ ನಂಬಿಕೆ ಇಡುತ್ತಾವಾ ಎಂಬುದನ್ನು ಕಾದುನೋಡಬೇಕಿದೆ. ಐಪಿಎಲ್‌ನಲ್ಲಿ ಒಟ್ಟು 86 ಪಂದ್ಯಗಳಿಂದ 286 ರನ್​ ಗಳಿಸಿದ್ದಾರೆ. 83 ಓವರ್‌ ಬೌಲಿಂಗ್​ ಮಾಡಿರುವ ಇವರು 89 ವಿಕೆಟ್ ಪಡೆದಿದ್ದಾರೆ.

ಮಿಚೆಲ್ ಸ್ಟಾರ್ಕ್/ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್ ಕೂಡ ಈ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯವ ಸಾಧ್ಯತೆ ಹೆಚ್ಚಿದೆ. ಸ್ಟಾರ್ಕ್​ ಐಪಿಎಲ್​ನಲ್ಲಿ ತಮ್ಮ ಬೌಲಿಂಗ್​ ಛಾಪನ್ನು ಈಗಾಗಲೇ ಮೂಡಿಸಿದ್ದಾರೆ. ಕಮಿನ್ಸ್​​ ತಂಡಕ್ಕೆ ಆಲ್​ರೌಂಡರ್​ ಆಗಿ ಕೊಡುಗೆ ನೀಡಬಲ್ಲರು. ಸ್ಟಾರ್ಕ್ 27 ಐಪಿಎಲ್ ಪಂದ್ಯಗಳ 26 ಇನ್ನಿಂಗ್ಸ್‌ಗಳಲ್ಲಿ 34 ವಿಕೆಟ್ ಪಡೆದಿದ್ದಾರೆ. ಪ್ಯಾಟ್ ಕಮ್ಮಿನ್ಸ್ 42 ಪಂದ್ಯಗಳಲ್ಲಿ 45 ವಿಕೆಟ್ ಪಡೆದರೆ, 3 ಅರ್ಧಶತಕಗಳೊಂದಿಗೆ 379 ರನ್ ಪೇರಿಸಿದ್ದಾರೆ.

ಇದನ್ನೂ ಓದಿ:ಎಟಿಪಿ ಶ್ರೇಯಾಂಕ: ಅಗ್ರಪಟ್ಟ ಉಳಿಸಿಕೊಂಡ ನೊವಾಕ್ ಜೊಕೊವಿಚ್​

ABOUT THE AUTHOR

...view details