ನವದೆಹಲಿ: ಪಂಜಾಬ್ ಕಿಂಗ್ಸ್ ತಂಡ ಶಿಖರ್ ಧವನ್ ನಾಯಕತ್ವದಲ್ಲಿ ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸಲಿದೆ. ಇತ್ತೀಚಿನ ದಿನಗಳಲ್ಲಿ ಶಿಖರ್ ಧವನ್ ಅವರ ಪೊಲೀಸ್ ಶೈಲಿಯು ಭಾರಿ ಚರ್ಚೆಯಲ್ಲಿದೆ, ಇದರಲ್ಲಿ ಅವರು ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ದಬಾಂಗ್ ಶಿಖರ್ ಶೈಲಿಯು ಪಂಜಾಬ್ ಭವಿಷ್ಯವನ್ನು ಬದಲಾಯಿಸುತ್ತದೆಯೇ? ಎಂಬುದು ಪ್ರಶ್ನೆಯಾಗಿದೆ.
ಐಪಿಎಲ್ ಇತಿಹಾಸದಲ್ಲಿ, ಪಂಜಾಬ್ ಕಿಂಗ್ಸ್ ತಂಡವು ಕೇವಲ ಎರಡು ಬಾರಿ ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದೆ. ಅದರಲ್ಲಿ ಒಮ್ಮೆ ಫೈನಲ್ ತಲುಪಿ ರನ್ನರ್ ಅಪ್ ಆಗಿದ್ದಾರೆ. 2008 ರಲ್ಲಿ ಸೆಮಿಫೈನಲ್ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತು. 2014ರಲ್ಲಿ ಚಾಂಪಿಯನ್ ಆಗುವ ಕನಸನ್ನು ಭಗ್ನಗೊಳಿಸಿದ ಅದೇ ಕೆಕೆಆರ್‌ನೊಂದಿಗೆ ಈ ಬಾರಿ ಪಂಜಾಬ್ ತಂಡವು ತನ್ನ ಮೊಲದ ಪಂದ್ಯವನ್ನು 1 ಏಪ್ರಿಲ್ 2023 ರಂದು ಮೊಹಾಲಿಯಲ್ಲಿ ಆಡಲಿದೆ.
2008 ಮತ್ತು 2014 ರಲ್ಲಿ ಅತ್ಯುತ್ತಮ ದಾಖಲೆ:2014 ರಲ್ಲಿ ಫೈನಲ್ ತಲುಪಿದ ಪಂಜಾಬ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತಿತು. 2014 ರಲ್ಲಿ ರನ್ನರ್ ಅಪ್ಗೆ ತೃಪ್ತಿಪಡಬೇಕಾಯಿತು, ಆದರೆ 2008 ರಲ್ಲಿ ಆಡಿದ ಮೊದಲ ಐಪಿಎಲ್ನಲ್ಲಿ ಪಂಜಾಬ್ ತಂಡ ಸೆಮಿಸ್ನಲ್ಲಿ ಸೋಲನುಭವಿಸಿತು. ಈ ಎರಡು ವರ್ಷ ಮಾತ್ರ ತಂಡದಿಂದ ಅದ್ಭುತ ಪ್ರದರ್ಶನ ಕಂಡುಬಂದಿತು. ಈ ಎರಡು ಋತುಗಳನ್ನು ಬಿಟ್ಟರೆ, ಪಂಜಾಬ್ ಕಿಂಗ್ಸ್ ಪ್ರಯಾಣ ಯಾವಾಗಲೂ 5 ರಿಂದ 8 ನೇ ಸ್ಥಾನಕ್ಕೆ ಸೀಮಿತವಾಗಿರುತ್ತದೆ.