ನವದೆಹಲಿ:ಟಾಟಾ IPL 2023 ಅಭಿಯಾನ ಮಾರ್ಚ್ 31 ರಿಂದ ಪ್ರಾರಂಭವಾಗುತ್ತಿದ್ದು, ಇದಕ್ಕಾಗಿ ಎಲ್ಲಾ 10 ಫ್ರಾಂಚೈಸಿಗಳು ತಮ್ಮ ತಯಾರಿಯನ್ನು ಆರಂಭಿಸಿವೆ. ಕ್ರಿಕೆಟ್ ಪ್ರೇಮಿಗಳು ಈ ಲೀಗ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ನಿನ್ನೆ ಪಂದ್ಯಾವಳಿಯ ಟಿವಿ ಹಕ್ಕುಗಳನ್ನು ಹೊಂದಿರುವ ಸ್ಟಾರ್ಸ್ಪೋರ್ಟ್ಸ್ ಐಪಿಎಲ್ 2023 ರ ಪ್ರೋಮೋ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಸೇರಿದಂತೆ ಅನೇಕ ಆಟಗಾರರ ಪೋಸ್ಟರ್ಗಳು ಕಾಣಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಆವೃತ್ತಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಐಪಿಎಲ್ 2023ರ ಪ್ರೋಮೋ ವಿಡಿಯೋದಲ್ಲಿ ಐಪಿಎಲ್ 2023 ರ ಬಗ್ಗೆ ಭಾರತೀಯ ಅಭಿಮಾನಿಗಳ ಉತ್ಸಾಹವು ವಿಭಿನ್ನ ಮಟ್ಟದಲ್ಲಿ ಕಂಡುಬರುತ್ತದೆ. ಈ ವಿಡಿಯೋದಲ್ಲಿ ಸ್ಟಾರ್ ಸ್ಪೋರ್ಟ್ಸ್ ತಮ್ಮ ಅಭಿಯಾನವನ್ನು ಪ್ರದರ್ಶಿಸುತ್ತದೆ. 'ಟಾಟಾ ಐಪಿಎಲ್, ಶೋರ್ ಆನ್, ಗೇಮ್ ಆನ್! ಎಂಬ ಟೈಟಲ್ ಅನ್ನು ಸ್ಟಾರ್ಸ್ಪೋರ್ಟ್ಸ್ ಘೋಷಿಸಿದೆ. ಸೂಪರ್‌ಸ್ಟಾರ್‌ಗಳಾದ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಅವರ ಪೋಸ್ಟರ್ಗಳನ್ನು ವಿಡಿಯೋದಲ್ಲಿ ರಾರಾಜಿಸುತ್ತಿವೆ.
ಮುಂಬೈ, ಲಖನೌ ಮತ್ತು ಗುಜರಾತ್‌ನಲ್ಲಿ ಮೂರು ವಿಭಿನ್ನ ಪ್ರದೇಶಗಳಲ್ಲಿ ಈ ವಿಡಿಯೋ ಚಿತ್ರಿಕರಿಸಲಾಗಿದೆ. ಅಲ್ಲಿ ನೆರೆಹೊರೆಯ ಜನರು ಐಪಿಎಲ್ ಹಬ್ಬವನ್ನು ಆಚರಿಸಲು ಒಟ್ಟಿಗೆ ಸೇರುತ್ತಿದ್ದಾರೆ. 'ಟಾಟಾ ಐಪಿಎಲ್, ಶೋರ್ ಆನ್, ಗೇಮ್ ಆನ್!' ಎಂದ ಥೀಮ್ ಒಗ್ಗಟ್ಟಿನ ಸಂಕೇತವಾಗಿದೆ. ರೋಹಿತ್, ಹಾರ್ದಿಕ್ ಮತ್ತು ರಾಹುಲ್ ಅವರ ಕಟೌಟ್‌ಗಳನ್ನು ಹೊತ್ತೊಯುತ್ತಿರುವ ಅಭಿಮಾನಿಗಳ ಜೋರಾದ ಹರ್ಷೋದ್ಗಾರ ಮತ್ತು ಉತ್ಸಾಹವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದು ಕ್ರಿಕೆಟ್ ಅಭಿಮಾನಿಗಳನ್ನ ಬಹಳ ರೋಮಾಂಚನಗೊಳಿಸುತ್ತಿದೆ.
ಐಪಿಎಲ್ 2023 ರ ಮೊದಲ ಪಂದ್ಯ ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವೆ ಮಾರ್ಚ್ 31 ರಂದು ನಡೆಯಲಿದೆ. ಐಪಿಎಲ್ನ ಈ ಸೀಸನ್ನಲ್ಲಿ 10 ತಂಡಗಳ ನಡುವೆ ಒಟ್ಟು 70 ಲೀಗ್ ಪಂದ್ಯಗಳನ್ನು ನಡೆಸಲಾಗುವುದು. ಕೊನೆಯ ಲೀಗ್ ಹಂತದ ಪಂದ್ಯ ಮೇ 21 ರಂದು ನಡೆಯಲಿದ್ದು, ಫೈನಲ್ ಮೇ 28 ರಂದು ನಡೆಯಲಿದೆ. IPL 2023 ರ ಎಲ್ಲಾ ಲೈವ್ ಪಂದ್ಯಗಳನ್ನು Jio ಸಿನಿಮಾದಲ್ಲಿ ನೋಡಬಹುದಾಗಿದೆ.
ಆರ್‌ಸಿಬಿ ಮೊಲದ ಪಂದ್ಯ: ಐಪಿಎಲ್ 2023ರಲ್ಲಿ 12 ವಿವಿಧ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತನ್ನ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಏಪ್ರಿಲ್ 2ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.
ಓದಿ:ಪಂದ್ಯ ವೀಕ್ಷಿಸಿ ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಆಸೀಸ್ ಪಿಎಂ: ರನ್ ಕಲೆಹಾಕುತ್ತಿರುವ ಕಾಂಗರೂ ಪಡೆ