ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್ 2023) 16 ನೇ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಜನರು ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕ ಮಹೇಂದ್ರ ಸಿಂಗ್ ಧೋನಿ ಮೇಲೆ ಎಲ್ಲರ ಕಣ್ಣಿದೆ. ಅದಕ್ಕೆ ಕಾರಣ ಧೋನಿಯ ಕೊನೆಯ ಐಪಿಎಲ್ ಇದು ಎಂದು ಹೇಳಲಾಗುತ್ತಿರುವುದು. ಐಪಿಎಲ್ ಆರಂಭವಾದಾಗಿನಿಂದ ಒಂದೇ ತಂಡವನ್ನು ಮುನ್ನಡಿಸಿದ ಖ್ಯಾತಿ ಎಂಎಸ್ಡಿಯದ್ದು. ಇದು ಕೊನೆಯ ಆವೃತ್ತಿ ಎಂದು ಹೇಳಲಾಗುತ್ತಿರುವುದರಿಂದ ಸಿಎಸ್‌ಕೆ ಮೇಲೆ ನಿರೀಕ್ಷೆಗಳು ಹೆಚ್ಚಿದೆ.
ಐಪಿಎಲ್‌ನಲ್ಲಿನ ತನ್ನ 16 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ, ಧೋನಿ 4 ಬಾರಿ ತಂಡಕ್ಕೆ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ನಡುವೆ ಎರಡು ವರ್ಷಗಳ ಕಾಲ ಬೆಟ್ಟಿಂಗ್ ಆರೋಪಕ್ಕೆ ಒಳಗಾಗಿ ತಂಡ ನಿಷೇಧಕ್ಕೆ ಒಳಗಾಗಿತ್ತು. ಎರಡು ವರ್ಷದ ನಂತರ ಮತ್ತೆ ಸಿಎಸ್‌ಕೆಯ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಲಾಗಿತ್ತು. ಆದರೆ ಕಳೆದ ಸೀಸನ್ನ ಸತತ ಸೋಲಿನ ಕಾರಣ ಮತ್ತೆ ನಾಯಕನ ಸ್ಥಾನ ಧೋನಿ ಹೆಗಲಿಗೆ ಬಂದಿತ್ತು.
ನಾಲ್ಕು ಕಪ್ಗಳನ್ನು ತಂಡಕ್ಕೆ ಗೆದ್ದು ಕೊಟ್ಟ ಧೋನಿಯ ಚಾಂಪಿಯನ್ ಆಟ ಈ ವರ್ಷಕ್ಕೆ ಕೊನೆ ಎಂದು ವರದಿಗಳು ಬರುತ್ತಿವೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಪಾಳಯದಿಂದ ಅಥವಾ ಧೋನಿಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಐಪಿಎಲ್‌ನಿಂದ ಅವರ ನಿವೃತ್ತಿಯ ಕೆಲವು ಸ್ಪಷ್ಟ ಚಿಹ್ನೆಗಳು ಖಂಡಿತವಾಗಿಯೂ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ.
ಕಳೆದ ವರ್ಷ ಜಡೇಜಾಗೆ ನಾಯಕತ್ವವನ್ನು ಹಸ್ತಾಂತರಿಸಿದ್ದು, ಭಾರತದ ಮಾಜಿ ನಾಯಕ ಚೆನ್ನೈ ಮೂಲದ ಫ್ರಾಂಚೈಸಿಯಲ್ಲಿ ತಮ್ಮ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದಾರೆ ಎಂಬುದಕ್ಕೆ ದೊಡ್ಡ ಸೂಚನೆಯಾಗಿದೆ. ಸ್ಟಾರ್ ಆಲ್ ರೌಂಡರ್ ಒತ್ತಡವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದ ಕಾರಣ ಮತ್ತೆ ಧೋನಿಗೆ ನೀಡಲಾಗಿತ್ತು. ಧೋನಿ ನಂತರ ಬೆನ್ ಸ್ಟೋಕ್ಸ್ ಮುಂದಾಳತ್ವ ವಹಿಸುವ ಸಾಧ್ಯತೆ ಇದೆ.
ಮಾರ್ಚ್ 31 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ಈ ಬಾರಿ ನಾಯಕತ್ವ ಧೋನಿಯೇ ವಹಿಸಲಿದ್ದಾರ ಎಂಬುದು ಸಹ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಾರಿ ಧೋನಿ ಮುಂದಾಳತ್ವದಲ್ಲಿ ಮತ್ತೆ ಪ್ರಶಸ್ತಿ ಗೆದ್ದು ವಿದಾಯ ಹೇಳುತ್ತಾರೆ ಎಂಬುದನ್ನು ಸಹ ಕಾದು ನೋಡಬೇಕಿದೆ.
ಮೇ 14 ಕೊನೆಯ ಪಂದ್ಯ:ಚೆನ್ನೈನ ಚೆಪಾಕ್ ಸ್ಟೇಡಿಯಂ ಧೋನಿ ವಿದಾಯದ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಮೇ 14 ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಐಪಿಎಲ್ 2023 ರ ಸಿಎಸ್‌ಕೆಯ ಕೊನೆಯ ಹೋಮ್ ಪಂದ್ಯವಾಗಿಲಿದೆ. ಆದ್ದರಿಂದ ಅವರು ಪ್ಲೇಆಫ್‌ಗೆ ಅರ್ಹತೆ ಪಡೆಯದಿದ್ದರೆ, ಫ್ರಾಂಚೈಸಿಗೆ ಇದು ಧೋನಿಯ ಕೊನೆಯ ಪಂದ್ಯವಾಗಿದೆ.
ಚೆನ್ನೈನಲ್ಲಿ ನನ್ನ ಕೊನೆಯ ಟಿ20:ಧೋನಿ ನವೆಂಬರ್ 2021 ರಲ್ಲಿ ತನ್ನ ಕೊನೆಯ ಟಿ20 ಪಂದ್ಯವನ್ನು ಚೆನ್ನೈನಲ್ಲಿ ಆಡುವುದು ಎಂದು ಹೇಳಿದ್ದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡುವಾಗ ಧೋನಿ ಒಮ್ಮೆ," ಏಕದಿನ ಕ್ರಿಕೆಟ್ನ ನನ್ನ ಕೊನೆಯ ಪಂದ್ಯ ನನ್ನ ತವರು ರಾಂಚಿಯಲ್ಲಿ ಆಡಲಾಯಿತು. ಟಿ20ಯ ಕೊನೆಯ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ" ಎಂದಿದ್ದರು. ಅದರಂತೆ ಮೇ 14ರಂದು ಚೆನ್ನೈನಲ್ಲಿ ಕೊನೆಯ ಪಂದ್ಯ ನಡೆಯಲಿದೆ ಎನ್ನಲಾಗುತ್ತಿದೆ.
ಸಿಎಸ್‌ಕೆ: ಎಂಎಸ್ ಧೋನಿ, ಡೆವೊನ್ ಕಾನ್ವೇ, ಅಂಬಟಿ ರಾಯುಡು, ರುತುರಾಜ್ ಗಾಯಕ್‌ವಾಡ್, ಅಜಿಂಕ್ಯ ರಹಾನೆ, ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಮೊಯಿನ್ ಅಲಿ, ನಿಶಾಂತ್ ಸಿಂಧು, ಬೆನ್ ಸ್ಟೋಕ್ಸ್, ಶಿವಂ ದುಬೆ, ರವೀಂದ್ರ ಜಡೇಜಾ, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಚಾಂಟ್ ವರ್ಮಾ, ಭಕ್‌ಗಾತ್ ವರಮ ತುಷಾರ್ ದೇಶಪಾಂಡೆ, ರಾಜವರ್ಧನ್ ಹಂಗರ್ಗೇಕರ್, ಕೈಲ್ ಜೇಮಿಸನ್, ಅಜಯ್ ಮಂಡಲ್, ಮುಖೇಶ್ ಚೌಧರಿ, ಮಥೀಶ ಪತಿರಣ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ
ಇದನ್ನೂ ಓದಿ:ಸುನಿಲ್ ನರೈನ್ vs ಶಾರ್ದೂಲ್ ಠಾಕೂರ್: ಕೆಕೆಆರ್ ನಾಯಕತ್ವ ಯಾರಿಗೆ?