ಪುಣೆ:ಸೂರ್ಯಕುಮಾರ್ ಯಾದವ್ ಅರ್ಧಶತಕ ಮತ್ತು ಯುವ ಆಟಗಾರರಾದ ಡೆವಾಲ್ಡ್ ಬ್ರೇವಿಸ್ ಹಾಗೂ ತಿಲಕ್ ವರ್ಮಾ ಅವರ ಉಪಯುಕ್ತ ರನ್ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ ಎದುರಾಳಿ ಕೋಲ್ಕತ್ತಾ ತಂಡಕ್ಕೆ 162 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ಇಂದಿನ ಪಂದ್ಯದಲ್ಲಿ ಟಾಸ್ ಬ್ಯಾಟಿಂಗ್ ಆರಂಭಿಸಿತು. ಆದರೆ ಆರಂಭಿಕರಾದ ನಾಯಕ ರೋಹಿತ್ ಶರ್ಮಾ(3) ಮತ್ತು ಇಶಾನ್ ಕಿಶನ್(14) ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರಿಂದ ಮುಂಬೈಗೆ ನಿರೀಕ್ಷಿತ ಆರಂಭ ದೊರೆಯಲಿಲ್ಲ.
ಅಲ್ಲದೆ ಉಮೇಶ್ ಯಾದವ್, ರಸಿಖ್ ಸಲಾಮ್ ನರೈನ್ ತಮ್ಮ ಕರಾರುವಾಕ್ ಬೌಲಿಂಗ್ ದಾಳಿಯಿಂದ ಮುಂಬೈ ರನ್ಗತಿಗೆ ಕಡಿವಾಣ ಹಾಕಿದರು. ಆದರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಪದಾರ್ಪಣೆ ಬ್ಯಾಟರ್ ಬೇಬಿ ಎಬಿಡಿ ಖ್ಯಾತಿಯ ಬ್ರೇವಿಸ್ 19 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 29 ರನ್ ಗಳಿಸಿದರು. ಆದರೆ ಇವರ ಜೊತೆಗೆ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ 21 ಎಸೆತಗಳಲ್ಲಿ ಕೇವಲ 1 ಬೌಂಡರಿ ಸಹಿತ 14 ರನ್ಗಳಿಸಿ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
55ಕ್ಕೆ 3 ವಿಕೆಟ್ ಕಳೇದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿ ತಂಡಕ್ಕೆ ಸೂರ್ಯಕುಮಾರ್ ಯಾದವ್ ಚೇತರಿಕೆ ನೀಡಿದರು. ಅವರು ಯುವ ಬ್ಯಾಟರ್ ತಿಲಕ್ ವರ್ಮಾ ಜೊತೆಗೂಡಿ 4ನೇ ವಿಕೆಟ್ಗೆ 83 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು.