ಕರ್ನಾಟಕ

karnataka

ETV Bharat / sports

ಹಾರ್ದಿಕ್ ಪಾಂಡ್ಯ ಅರ್ಧಶತಕ; ಹೈದರಾಬಾದ್​ಗೆ 163ರನ್​ಗಳ ಗುರಿ ನೀಡಿದ ಗುಜರಾತ್ - ಶುಬ್ಮನ್ ಗಿಲ್

ಹಾರ್ದಿಕ್ ಪಾಂಡ್ಯ ಅರ್ಧಶತಕ ಮತ್ತು ಕರ್ನಾಟಕದ ಯುವ ಬ್ಯಾಟರ್ ಅಭಿನವ್ ಮನೋಹರ್​ 35 ರನ್​ಗಳ ನೆರವಿನಿಂದ ಗುಜರಾತ್ ಟೈಟನ್ಸ್​ ಆರಂಭಿಕ ಆಘಾತದ ನಡುವೆಯೂ 162 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

Gujarat Titans vs Sunrisers Hyderabad
Gujarat Titans vs Sunrisers Hyderabad

By

Published : Apr 11, 2022, 7:15 PM IST

Updated : Apr 11, 2022, 9:31 PM IST

ಮುಂಬೈ: ನಾಯಕ ಹಾರ್ದಿಕ್ ಪಾಂಡ್ಯ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟನ್ಸ್​ ತಂಡ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ 163 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್​ ಟೈಟನ್ಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕಳೆದ ಎರಡು ಪಂದ್ಯಗಳಲ್ಲಿ ಮಿಂಚಿದ್ದ ಶುಬ್ಮನ್​ ಗಿಲ್​(7), ಸಾಯಿ ಸುದರ್ಶನ್​(11) ವಿಕೆಟ್ ಬೇಗ ಕಳೆದುಕೊಂಡಿತು. ಮ್ಯಾಥ್ಯೂ ವೇಡ್​ ಕೂಡ 19 ರನ್​ಗಳಿಸಿ 8 ಓವರ್​ಗಳ ಒಳಗೆ ವಿಕೆಟ್​ ಒಪ್ಪಿಸಿದರು.

ನಂತರ ಬಂದಂತಹ ಡೇವಿಡ್​ ಮಿಲ್ಲರ್​ ಕ್ರೀಸ್​ನಲ್ಲೇ ಸಮಯ ಕಳೆದರೇ ವಿನಃ ರನ್​ಗಳಿಸುವಲ್ಲಿ ವಿಫಲರಾದರು. ಅವರು 15 ಎಸೆತಗಳಲ್ಲಿ ಕೇವಲ 12 ರನ್​ಗಳಿಸಿದರು. ಈ ಹಂತದಲ್ಲಿ ನಾಯಕ ಹಾರ್ದಿಕ್ ಜೊತೆಗೂಡಿದ ಕರ್ನಾಟಕದ ಬ್ಯಾಟರ್ ಅಭಿನವ್ ಮನೋಹರ್​ 5ನೇ ವಿಕೆಟ್​ಗೆ 50 ರನ್​ ಸೇರಿಸಿದರು. ಅವರು 21 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 35 ರನ್​ಗಳಿಸಿದರು. ನಾಯಕನ ಆಟವಾಡಿದ ಹಾರ್ದಿಕ್ ಪಾಂಡ್ಯ 42 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 50 ರನ್​ಗಳಿಸಿದರು.

ಸನ್​ರೈಸರ್ಸ್ ಹೈದರಾಬಾದ್​ ಪರ ಟಿ. ನಟರಾಜನ್​ 34ಕ್ಕೆ2, ಭುವನೇಶ್ವರ್ ಕುಮಾರ್ 37ಕ್ಕೆ 2 ಹಾಗೂ ಉಮರ್ ಮಲಿಕ್​ ಮತ್ತು ಮಾರ್ಕೊ ಜಾನ್ಸನ್​ ತಲಾ ಒಂದು ವಿಕೆಟ್ ಪಡೆದರು.

ಟಾಸ್​ ಅಪ್​ಡೇಟ್:​ ಎರಡೂ ತಂಡಗಳು ಕಳೆದ ಪಂದ್ಯದಲ್ಲಿ ಕಣಕ್ಕಿಳಿಸಿದ್ದ ತಂಡದ ಜೊತೆಗೆ ಆಡುತ್ತಿವೆ. ಸನ್​ರೈಸರ್ಸ್​ ಹೈದರಾಬಾದ್​ ತಂಡ ಮೊದಲ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್​ ತಂಡದ ವಿರುದ್ಧ ಸೋಲು ಕಂಡಿತ್ತು. ಆದರೆ ಸಿಎಸ್​ಕೆ ವಿರುದ್ಧ ಕೊನೆಗೂ ಚೇಸ್​ ಮಾಡುವ ಮೂಲಕ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಇತ್ತ ಟೈಟನ್ಸ್ ಆಡಿರುವ ಮೂರು ಪಂದ್ಯಗಳಲ್ಲೂ ಅದ್ಭುತ ಜಯ ಸಾಧಿಸಿದೆ. ಉತ್ತಮ ಆರಂಭ ಪಡೆಯಲು ವಿಫಲರಾದರೂ, ಗಿಲ್ ಕಳೆದ 2 ಪಂದ್ಯಗಳಲ್ಲಿ 84 ಮತ್ತು 96 ರನ್​ ಸಿಡಿಸಿ ತಂಡದ ಬಹುಪಾಲು ರನ್​ಗಳನ್ನು ತಾವೇ ಸಿಡಿಸಿದ್ದಾರೆ. ನಾಯಕ ಹಾರ್ದಿಕ್​, ರಾಹುಲ್ ತೆವಾಟಿಯಾ ಉತ್ತಮ ಫಾರ್ಮ್​ನಲ್ಲಿದ್ದಾರೆ. ಒಟ್ಟಾರೆ ತಂಡವಾಗಿ ಉತ್ತಮ ಸಂಯೋಜನೆ ಹೊಂದಿರುವ ಗುಜರಾತ್​ ತನ್ನ ಅಜೇಯ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ.

ಸನ್​ರೈಸರ್ಸ್​ ಹೈದರಾಬಾದ್​ : ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಟಿ ನಟರಾಜನ್, ಉಮ್ರಾನ್ ಮಲಿಕ್

ಗುಜರಾತ್ ಟೈಟನ್ಸ್​​:ಶುಭಮನ್ ಗಿಲ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ, ದರ್ಶನ್ ನಲ್ಕಂಡೆ

Last Updated : Apr 11, 2022, 9:31 PM IST

ABOUT THE AUTHOR

...view details