ಕರ್ನಾಟಕ

karnataka

ETV Bharat / sports

IPL 2022 : ರಾಜಸ್ಥಾನ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಹೈದರಾಬಾದ್​ - ಸನ್​ರೈಸರ್ಸ್ ಹೈದರಾಬಾದ್ ತಂಡ

Hyderabad vs Rajasthan : ಇಂಡಿಯನ್​ ಪ್ರೀಮಿಯರ್ ಲೀಗ್​ನ 15ನೇ ಆವೃತ್ತಿಯ ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಿವೆ..

Hyderabad vs Rajasthan
Hyderabad vs Rajasthan

By

Published : Mar 29, 2022, 7:23 PM IST

ಪುಣೆ :ಇಂಡಿಯನ್​ ಪ್ರೀಮಿಯರ್ ಲೀಗ್​ನ ಇಂದಿನ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ಮತ್ತು ರಾಜಸ್ಥಾನ ರಾಯಲ್ಸ್​ ಮುಖಾಮುಖಿಯಾಗಲಿವೆ. ಟಾಸ್​ ಗೆದ್ದಿರುವ ಹೈದರಾಬಾದ್ ತಂಡದ ಕ್ಯಾಪ್ಟನ್ ಕೇನ್​ ವಿಲಿಯಮ್ಸನ್​ ಬೌಲಿಂಗ್​ ಆಯ್ದುಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಉಭಯ ತಂಡಗಳಿಗೂ ಇದು ಮೊದಲ ಪಂದ್ಯವಾಗಿರುವ ಕಾರಣ ಗೆಲುವಿನೊಂದಿಗೆ ಶುಭಾರಂಭ ಮಾಡುವ ಇರಾದೆ ಇಟ್ಟುಕೊಂಡಿವೆ.

ಸನ್​ರೈಸರ್ಸ್ ಹೈದರಾಬಾದ್ ತಂಡವನ್ನ ಅನುಭವಿ ಕೇನ್ ವಿಲಿಯಮ್ಸನ್ ಮುನ್ನಡೆಸುತ್ತಿದ್ದಾರೆ. ರಾಜಸ್ಥಾನ ತಂಡಕ್ಕೆ ಯಂಗ್​ ಕ್ಯಾಪ್ಟನ್ ಸಂಜು ಸ್ಯಾಮ್ಸನ್​​​ ನಾಯಕತ್ವವಿದೆ. ಉಭಯ ತಂಡಗಳ ನಡುವೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಷಿಯೇಷನ್​ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಯುವ ಪಡೆಗಳಿಂದ ಕೂಡಿರುವ ರಾಜಸ್ಥಾನ ರಾಯಲ್ಸ್​ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಏಳು ಪ್ಲೇಯರ್ಸ್​ ಇಂದಿನ ಪಂದ್ಯದಲ್ಲಿ ಪದಾರ್ಪಣೆ ಮಾಡುತ್ತಿದ್ದಾರೆ.

ರಾಜಸ್ಥಾನ ರಾಯಲ್ಸ್​​ ತಂಡ :ಯಶಸ್ವಿ ಜೈಸ್ವಾಲ್​, ಜೋಶ್ ಬಟ್ಲರ್​, ದೇವದತ್​ ಪಡಿಕ್ಕಲ್​, ಸಂಜು ಸ್ಯಾಮ್ಸನ್​, ಶಿಮ್ರಾನ್ ಹೆಟ್ಮಾಯರ್​, ರಿಯಾನ್ ಪರಾಗ್, ಆರ್​. ಅಶ್ವಿನ್​, ನೆಥಾನ್ ಕೌಲ್ಟರ್ ನೆಲ್​,ಯುಜುವೇಂದ್ರ ಚಹಾಲ್​, ಬೌಲ್ಟ್​, ಪ್ರಸಿದ್ಧ ಕೃಷ್ಣ

ಸನ್​ರೈಸರ್ಸ್ ಹೈದರಾಬಾದ್​ :ಅಭಿಷೇಕ್ ಶರ್ಮಾ, ರಾಹುಲ್​ ತ್ರಿಪಾಠಿ, ಕೇನ್ ವಿಲಿಯಮ್ಸನ್(ಕ್ಯಾಪ್ಟನ್​), ನಿಕೂಲಸ್ ಪೂರನ್​(ವಿ.ಕೀ), ಮಕ್ರಾಮ್​, ಅಬ್ದುಲ್ ಸಮದ್​, ವಾಷಿಂಗ್ಟನ್ ಸುಂದರ್, ಸೆಪಾರ್ಡ್​, ಭುವನೇಶ್ವರ್ ಕುಮಾರ್, ಟಿ. ನಟರಾಜನ್​, ಉಮ್ರಾನ್ ಮಲಿಕ್

ಈವರೆಗೆ ಉಭಯ ತಂಡಗಳು ಒಟ್ಟು 15 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಸನ್‌ರೈಸರ್ಸ್‌ ಹೈದ್ರಾಬಾದ್ 8 ಪಂದ್ಯಗಳಲ್ಲೂ ಹಾಗೂ ರಾಜಾಸ್ಥಾನ್ ರಾಯಲ್ಸ್ 7 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.

ಬಲಿಷ್ಠ ಆರ್‌ಆರ್‌ :ರಾಜಸ್ಥಾನ್ ರಾಯಲ್ಸ್ ಬಲಿಷ್ಠ ತಂಡವನ್ನೇ ಖರೀದಿಸಿದೆ. ಹೊಸ ಹುಮ್ಮಸ್ಸಿನಲ್ಲಿ ಇಂದು ಕಣಕ್ಕಿಳಿಯಲು ಅದು ಸಜ್ಜಾಗಿದೆ. ರಾಯಲ್ಸ್​​​ ಬಲ ಎಂದರೆ ಇಂಗ್ಲೆಂಡ್​ನ ಸ್ಫೋಟಕ ಬ್ಯಾಟರ್‌ ಜಾಸ್‌ ಬಟ್ಲರ್‌. ಕಳೆದ ಆವೃತ್ತಿಯಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ದ ಈ ಆಟಗಾರ ಹೊಸ ಆವೃತ್ತಿಯಲ್ಲೂ ಫಾರ್ಮ್ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ.

ಇವರಿಗೆ ಮಾಜಿ ಆರ್‌ಸಿಬಿ ಆಟಗಾರ ದೇವದತ್​​ ಪಡಿಕ್ಕಲ್‌, ಯಶಸ್ವಿ ಜೈಸ್ವಾಲ್‌ ಪವರ್‌ ಹಿಟ್ಟರ್‌ಗಳಾದ ಸಂಜು ಸ್ಯಾಮ್ಸನ್‌, ಶಿಮ್ರೊನ್‌ ಹೆಟ್‌ಮೈರ್‌, ರಿಯಾನ್‌ ಪರಾಗ್‌ ಬೆಂಬಲ ನೀಡಲಿದ್ದಾರೆ. ಆರ್​ಆರ್​ ತಂಡದ ಬೌಲಿಂಗ್ ವಿಭಾಗ ಕೂಡ ಶಕ್ತಿಯುತವಾಗಿದೆ. ಪ್ರಮುಖವಾಗಿ ಆರ್‌.ಅಶ್ವಿ‌ನ್‌ ಮತ್ತು ಯಜ್ವೇಂದ್ರ ಚಾಹಲ್‌ ಸ್ಪಿನ್ ಅಸ್ತ್ರಗಳಾಗಿದ್ದಾರೆ. ವೇಗದ ಬೌಲಿಂಗ್​​​ ವಿಭಾಗದಲ್ಲಿ ಟ್ರೆಂಟ್‌ ಬೌಲ್ಟ್, ಪ್ರಸಿದ್ಧ್ ಕೃಷ್ಣ, ನವದೀಪ್‌ ಸೈನಿ, ನಥನ್‌ ಕೋಲ್ಟರ್‌ ನೈಲ್‌ ಇದ್ದಾರೆ.

ಸನ್‌ರೈಸರ್ಸ್‌ನಲ್ಲಿ ಅಸಮತೋಲನ : ಈ ಬಾರಿ ಸನ್​​ರೈಸರ್ಸ್ ತಂಡದಲ್ಲಿ ಹೆಚ್ಚಿನ ಸಮತೋಲನ ಕಾಣುತ್ತಿಲ್ಲ. ಫ್ರಾಂಚೈಸಿ ಯುವ ಆಟಗಾರರ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದು, ತಂಡ ಕಪ್​​​ ಗೆಲ್ಲುವುದಕ್ಕೆ ಪೂರಕವಾಗುತ್ತಾ ಅಥವಾ ಮಾರಕವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details