ಕರ್ನಾಟಕ

karnataka

ETV Bharat / sports

IPLನಲ್ಲಿ ಹಲ್​​ಚಲ್ ಎಬ್ಬಿಸಿದ 'ಜಮ್ಮು ಎಕ್ಸ್​ಪ್ರೆಸ್​'.. 14 ಪಂದ್ಯದಲ್ಲೂ ಪ್ರಶಸ್ತಿ; ಹೊಸ ದಾಖಲೆ ಬರೆದ ಮಲಿಕ್​ - ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಉಮ್ರಾನ್

15ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿರುವ ವೇಗಿ ಉಮ್ರಾನ್ ಮಲಿಕ್​ ತಾವು ಆಡಿರುವ ಪ್ರತಿಯೊಂದು ಪಂದ್ಯದಲ್ಲೂ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Umran Malika wins fastest delivery award
Umran Malika wins fastest delivery award

By

Published : May 23, 2022, 3:45 PM IST

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ನ 15ನೇ ಆವೃತ್ತಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡದ ಪರ ಮಿಂಚು ಹರಿಸಿರುವ ಕೇವಲ 22 ವರ್ಷದ ಉಮ್ರಾನ್ ಮಲಿಕ್​ ಹೊಸದೊಂದು ದಾಖಲೆ ಬರೆದಿದ್ದಾರೆ. ಕಳೆದ ವರ್ಷ ಅರಬ್​ ನಾಡಲ್ಲಿ ನಡೆದ ಐಪಿಎಲ್​​ನಲ್ಲಿ ವೇಗಿ ನಟರಾಜನ್​ ಅವರಿಗೆ ಕೋವಿಡ್ ಕಾಣಿಸಿಕೊಂಡಿದ್ದರಿಂದ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದ ಉಮ್ರಾನ್​ ಈ ಸಲದ ಆವೃತ್ತಿಯಲ್ಲಿ ಹಲ್​ಚಲ್​ ಎಬ್ಬಿಸಿ, ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.

IPLನಲ್ಲಿ ಹಲ್​​ಚಲ್ ಎಬ್ಬಿಸಿದ 'ಜಮ್ಮು ಏಕ್ಸ್​ಪ್ರೆಸ್​'..

ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ದಾಖಲೆಯ 157 ಕಿಲೋ ಮೀಟರ್​ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಹೊಸದೊಂದು ಇತಿಹಾಸ ನಿರ್ಮಿಸಿದ್ದ ಜಮ್ಮು ಎಕ್ಸ್​ಪ್ರೆಸ್ ಖ್ಯಾತಿಯ ಉಮ್ರಾನ್ ಮಲಿಕ್​, ತಾವು ಆಡಿರುವ ಲೀಗ್​ನ 14 ಪಂದ್ಯಗಳಲ್ಲೂ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಪಿಎಲ್​​ನಲ್ಲಿ ನೀಡಲಾಗುವ 'ಫಾಸ್ಟೆಸ್ಟ್​ ಡೆಲಿವರಿ ಆಫ್​ ದಿ ಮ್ಯಾಚ್'​ ಅವಾರ್ಡ್​​ ಪ್ರತಿವೊಂದು ಪಂದ್ಯದಲ್ಲೂ ಮಲಿಕ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಉಮ್ರಾನ್​ ಮಲಿಕ್​ ಭಾರತ ತಂಡಕ್ಕೆ ಆಯ್ಕೆ: ಕಾಶ್ಮೀರದಲ್ಲಿ ಸಂಭ್ರಮ- ವಿಡಿಯೋ

ಐಪಿಎಲ್​​ನಲ್ಲಿ ಗಂಟೆಗೆ 150+ ಕಿ.ಮೀ ವೇಗದಲ್ಲಿ ಸ್ಥಿರವಾಗಿ ಚೆಂಡು ಎಸೆಯುವ ಉಮ್ರಾನ್ ಮಲಿಕ್ ಪ್ರತಿ ಪಂದ್ಯಗಳಲ್ಲೂ ಫಾಸ್ಟೆಸ್ಟ್​ ಡೆಲಿವರಿ ಅವಾರ್ಡ್​ ಗಿಟ್ಟಿಸಿಕೊಂಡಿದ್ದಾರೆ. ಪಂಜಾಬ್​ ವಿರುದ್ಧ ನಡೆದ ಲೀಗ್​ನ ಕೊನೆಯ ಪಂದ್ಯದಲ್ಲೂ ಉಮ್ರಾನ್​ ಮಲಿಕ್​ 153.5 ಕಿಲೋ ಮೀಟರ್ ವೇಗದಲ್ಲಿ ಚೆಂಡೆಸೆಯುವ ಮೂಲಕ 14ನೇ ಸಲ ಫಾಸ್ಟೆಸ್ಟ್​ ಡೆಲಿವರಿ ಅವಾರ್ಡ್ ಗಿಟ್ಟಿಸಿಕೊಂಡಿದ್ದಾರೆ. ಜೊತೆಗೆ ಈ ಪ್ರಶಸ್ತಿಯನ್ನ ಪ್ರತಿವೊಂದು ಪಂದ್ಯದಲ್ಲೂ ತಮ್ಮದಾಗಿಸಿಕೊಂಡಿರುವ ಮೊದಲ ಪ್ಲೇಯರ್ ಎಂಬ ಸಾಧನೆ ಮಾಡಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ಸನ್​​ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿರುವ ಉಮ್ರಾನ್ ಮಲಿಕ್, ತಾವು ಆಡಿರುವ 14 ಪಂದ್ಯಗಳಿಂದ 24 ವಿಕೆಟ್ ಕಿತ್ತಿದ್ದಾರೆ. ಇವರ ಅದ್ಭುತ ಪ್ರದರ್ಶಕ್ಕೆ ಬೆರಗಾಗಿರುವ ಆಯ್ಕೆ ಮಂಡಳಿ ಕೂಡ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಇವರಿಗೆ ಮಣೆ ಹಾಕಿದೆ. ಜೂನ್​ 9ರಿಂದ ಭಾರತದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಐದು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿ ನಡೆಯಲಿದೆ. ​

ABOUT THE AUTHOR

...view details