ಕರ್ನಾಟಕ

karnataka

ಯುಎಇಗಿಂತಲೂ ಕಡಿಮೆ ವೆಚ್ಚದಲ್ಲಿ ಐಪಿಎಲ್​ ಆಯೋಜಿಸಲು ಆಫರ್ ನೀಡಿದ ದಕ್ಷಿಣ ಆಫ್ರಿಕಾ

By

Published : Jan 25, 2022, 5:06 PM IST

ಸಿಎಸ್ಎ ನೀಲನಕ್ಷೆಯಲ್ಲಿರುವ ಪ್ರಮುಖ ಅಂಶವೆಂದರೆ ಜೋಹನ್ಸ್​ಬರ್ಗ್ ಬಯೋಬಬಲ್ ನಿರ್ಮಾಣ ಮಾಡಿ ನಾಲ್ಕು ಸ್ಥಳಗಳಲ್ಲಿ ಸ್ಪರ್ಧೆಯನ್ನು ಆಯೋಜಿಸುವುದು. ನಿರ್ದಿಷ್ಟವಾಗಿ ಹೇಳುವುದಾದರೆ, ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂ, ಪ್ರಿಟೋರಿಯಾದ ಸೆಂಚುರಿಯನ್ ಪಾರ್ಕ್, ಬೆನೋನಿಯ ವಿಲೋಮೂರ್ ಪಾರ್ಕ್ ಮತ್ತು ಪೊಟ್ಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಬಹುದು ಎಂದು ದಕ್ಷಿಣ ಆಫ್ರಿಕಾ ಮಂಡಳಿ ಪ್ರಸ್ತಾಪಿಸಿದೆ..

outh Africa sends proposal to BCCI to host IPL
ಇಂಡಿಯನ್ ಪ್ರೀಮಿಯರ್ ಲೀಗ್

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತದಲ್ಲೇ 2022ರ ಐಪಿಎಲ್ ಆಯೋಜನೆ ಮಾಡುವ ಉದ್ದೇಶ ಹೊಂದಿದೆಯಾದರೂ ಕೋವಿಡ್-19 ಕಾರಣ ಮೀಸಲು ಸ್ಥಳವನ್ನ ಗೊತ್ತುಪಡಿಸಿಕೊಳ್ಳುವ ಆಲೋಚನೆಯಲ್ಲಿದೆ.

ಈ ಚರ್ಚೆ ಸಾಗುತ್ತಿರುವ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಐಪಿಎಲ್​ ಅನ್ನು ಆಯೋಜಿಸಲು ತಮ್ಮ ದೇಶ ಯುಎಇಗಿಂತಲೂ ಅಗ್ಗವಾದ ಆಯ್ಕೆ ಎಂದು ಆಫರ್ ನೀಡಿದೆ.

ಈ ಕುರಿತು ಈಗಾಗಲೆ BCCI ಮತ್ತು CSA ನಡುವೆ ಚರ್ಚೆಗಳು ನಡೆಯುತ್ತಿವೆ. ದ.ಅಫ್ರಿಕಾದಲ್ಲಿ ಲೀಗ್ ಆಯೋಜಿಸಿದರೆ ವಿಮಾನ ಪ್ರಯಾಣವಿಲ್ಲದ ಸ್ಥಳಗಳಿಗೆ ಒತ್ತು ನೀಡಲಾಗುತ್ತದೆ. ಇದರಿಂದ ಫ್ರಾಂಚೈಸಿಗಳಿಗೆ ತಗಲುವ ಪ್ರಯಾಣ ವೆಚ್ಚವನ್ನು ಕಡಿತಗೊಳಿಸಬಹುದು.

ಅದಲ್ಲದೆ, ದಕ್ಷಿಣ ಆಫ್ರಿಕಾದಲ್ಲಿ ಹೋಟೆಲ್ ಸುಂಕಗಳು ಯುಎಇಗಿಂತ ತುಂಬಾ ಅಗ್ಗವಾಗಿರುತ್ತವೆ ಎಂದು ಸಿಎಸ್​ಎ ತನ್ನ ಪ್ರಪೋಸಲ್​ನಲ್ಲಿ ಉಲ್ಲೇಖಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸಿಎಸ್ಎ ನೀಲನಕ್ಷೆಯಲ್ಲಿರುವ ಪ್ರಮುಖ ಅಂಶವೆಂದರೆ ಜೋಹನ್ಸ್​ಬರ್ಗ್ ಬಯೋಬಬಲ್ ನಿರ್ಮಾಣ ಮಾಡಿ ನಾಲ್ಕು ಸ್ಥಳಗಳಲ್ಲಿ ಸ್ಪರ್ಧೆಯನ್ನು ಆಯೋಜಿಸುವುದು. ನಿರ್ದಿಷ್ಟವಾಗಿ ಹೇಳುವುದಾದರೆ, ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂ, ಪ್ರಿಟೋರಿಯಾದ ಸೆಂಚುರಿಯನ್ ಪಾರ್ಕ್, ಬೆನೋನಿಯ ವಿಲೋಮೂರ್ ಪಾರ್ಕ್ ಮತ್ತು ಪೊಟ್ಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಬಹುದು ಎಂದು ದಕ್ಷಿಣ ಆಫ್ರಿಕಾ ಮಂಡಳಿ ಪ್ರಸ್ತಾಪಿಸಿದೆ.

ಈ ಎಲ್ಲವೂ ಫ್ಲಡ್‌ಲೈಟ್ ಹೊಂದಿರುವ ಅಂತಾರಾಷ್ಟ್ರೀಯ ಮೈದಾನಗಳಾಗಿವೆ ಮತ್ತು ಅಂತರ ಕೂಡ ಕಡಿಮೆಯಿದ್ದು, ಜೋಹನ್ಸ್​ ಬರ್ಗ್​ಗೆ ಹತ್ತಿರದಲ್ಲಿವೆ ಎಂದು ತಿಳಿಸಿದೆ. 2009ರಲ್ಲಿ ಭಾರತದಲ್ಲಿ ಲೋಕಸಭೆ ಚುನಾವಣೆ ನಡೆದ ಸಂದರ್ಭದಲ್ಲಿ 2ನೇ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿಯೇ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಸಿಎಸ್​ಎ 8 ಕ್ರೀಡಾಂಗಣಗಳ ವ್ಯವಸ್ಥೆ ಮಾಡಿತ್ತು.

ಆದರೆ, ಬಿಸಿಸಿಐ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮಾಲೀಕರು ಮತ್ತು ಮಂಡಳಿ ಭಾರತದಲ್ಲಿ ಲೀಗ್ ಆಯೋಜಿಸಲು ನಿರ್ಧರಿಸಿದೆ. ಮುಂಬೈನಲ್ಲಿ, ಅಗತ್ಯವಾದರೆ ಪುಣೆಯಲ್ಲಿ ಆಯೋಜಿಸಲು ಫ್ರಾಂಚೈಸಿ ಮಾಲೀಕರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಐಪಿಎಲ್​ನ ದುಬಾರಿ ಫ್ರಾಂಚೈಸಿಗೆ 'ಲಖನೌ ಸೂಪರ್​ ಜೇಂಟ್ಸ್​' ಎಂದು ನಾಮಕರಣ

ABOUT THE AUTHOR

...view details