ಕೋಲ್ಕತ್ತಾ: 2022ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭಾರತದ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನೂತನ ನಾಯಕರಾಗಿ ನೇಮಕಗೊಂಡಿದ್ದಾರೆ.
ಕೆಕೆಆರ್ ಅಂತಹ ಹೆಮ್ಮೆಯ ತಂಡವನ್ನು ಮುನ್ನಡೆಸುವ ಅವಕಾಶ ನನಗೆ ಸಿಕ್ಕಿರುವುದು ದೊಡ್ಡ ಗೌರವವಾಗಿದೆ. ಐಪಿಎಲ್ ಟೂರ್ನಮೆಂಟ್ ವಿಭಿನ್ನ ದೇಶಗಳ ಮತ್ತು ವಿಭಿನ್ನ ಸಂಸ್ಕೃತಿಯ ಆಟಗಾರರನ್ನು ಒಟ್ಟಿಗೆ ಸೇರಿಸುತ್ತಿದೆ. ಅತ್ಯುತ್ತಮ ಸಾಮರ್ಥ್ಯವುಳ್ಳ ಆಟಗಾರರ ಹೊಂದಿರುವ ಈ ತಂಡವನ್ನು ಮುನ್ನಡೆಸುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.
ಈ ತಂಡವನ್ನು ಮುಂದಾಳತ್ವ ನನಗೆ ನೀಡಿದ್ದಕ್ಕೆ ತಂಡದ ಮಾಲೀಕರು, ಕೆಕೆಆರ್ ಮ್ಯಾನೇಜ್ಮೆಂಟ್ಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ತಂಡದ ಗುರಿ ಇಡೇರಿಸುವುದಕ್ಕೆ ಒಳ್ಳೆಯ ಮಾರ್ಗ ನಾವು ಕಂಡುಕೊಳ್ಳುತ್ತೇವೆ ಎಂದು ವಿಶ್ವಾಸ ನನಗಿದೆ ಎಂದು ಅಯ್ಯರ್ ಹೇಳಿದ್ದಾರೆ.