ಮುಂಬೈ: ಇಲ್ಲಿಯವರೆಗಿನ ಐಪಿಎಲ್ ಪಂದ್ಯಗಳಲ್ಲಿ ಈ ಸಲ ಕಪ್ ನಮ್ದೇ ಅಂತಾ ಬೀಗುತ್ತಿದ್ದ ಆರ್ಸಿಬಿ ಅಭಿಮಾನಿಗಳಿಗೆ ಇಂದಿನ ಮ್ಯಾಚ್ ಮತ್ತೆ ರೆಕ್ಕೆಪುಕ್ಕ ಬರುವಂತೆ ಮಾಡಿದೆ. ಐಪಿಎಲ್ 15 ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ನಾಯಕ ಡುಪ್ಲೆಸಿಸ್(88) ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿಯ ಉತ್ತಮ ಜೊತೆಯಾಟದಿಂದ ಪಂಜಾಬ್ ಕಿಂಗ್ಸ್ ವಿರುದ್ಧ 2 ವಿಕೇಟ್ ನಷ್ಟಕ್ಕೆ ಆರ್ಸಿಬಿ 205 ಬೃಹತ್ ಮೊತ್ತ ಕಲೆ ಹಾಕಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಡುಪ್ಲೆಸಿಸ್ ನಾಯಕತ್ವದ ತಂಡವನ್ನು ಪಂಜಾಬ್ ಕಿಂಗ್ಸ್ನ ಕಟ್ಟಿ ಹಾಕುವ ಯೋಜನೆ ಯಶಸ್ವಿಯಾಗಲಿಲ್ಲ. ನಾಯಕ ಮತ್ತು ಮಾಜಿ ನಾಯಕರ 118ರನ್ಗಳ ಜೊತೆಯಾಟ ಬೃಹತ್ ಮೊತ್ತ ಕಲೆ ಸಾಧ್ಯವಾಯಿತು. ಫಾಫ್ ಡುಪ್ಲೆಸಿಸ್ 12ರನ್ಗಳಿಂದ ಈ ಆವೃತ್ತಿಯ ಮೊದಲ ಶತಕದಿಂದ ವಂಚಿತರಾದರು. ನಂತರ ಬಂದ ದಿನೇಶ್ ಕಾರ್ತಿಕ್ ಕೊಹ್ಲಿ ಜತೆಗೂಡಿ ಬಿರುಸಿನ ಆಟ ಪ್ರದರ್ಶಿಸಿದರು. ಕೇವಲ 14ಬಾಲ್ಗಳಲ್ಲಿ 32ರನ್ ಗಳಿಸಿದರು ಮತ್ತು ವಿರಾಟ್ ಕೊಹ್ಲಿ 41ರನ್ ಗಳಿಸಿ ಅಜೇಯರಾಗಿ ಉಳಿದರು.