ಕರ್ನಾಟಕ

karnataka

ETV Bharat / sports

ಸ್ಯಾಮ್ಸನ್​ ಆಕರ್ಷಕ ಫಿಫ್ಟಿ, ಪಡಿಕ್ಕಲ್​,ಹೆಟ್ಮಾಯರ್​ ಸ್ಫೋಟಕ ಬ್ಯಾಟಿಂಗ್​.. ಸನ್​ರೈಸರ್ಸ್ ಗೆಲುವಿಗೆ 211 ರನ್​ ಗುರಿ

ಹೈದರಾಬಾದ್​ ಬೌಲಿಂಗ್ ದಾಳಿಯನ್ನು ಸುಲಭವಾಗಿ ಎದುರಿಸಿದ ರಾಜಸ್ಥಾನ ರಾಯಲ್ಸ್ ಬೃಹತ್ ಮೊತ್ತ ಕಲೆ ಹಾಕಿದ್ದು, ವಿಲಿಯಮ್ಸನ್​ ಪಡೆಗೆ 211ರನ್​ಗಳ ಬೃಹತ್​ ಗೆಲುವಿನ ಗುರಿ ನೀಡಿದೆ.

Rajasthan royals vs Hyderabad
Rajasthan royals vs Hyderabad

By

Published : Mar 29, 2022, 9:39 PM IST

ಪುಣೆ:ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​​ ಮೈದಾನದಲ್ಲಿ ರಾಜಸ್ಥಾನ-ಹೈದರಾಬಾದ್​ ತಂಡ ಮುಖಾಮುಖಿಯಾಗಿವೆ. ಟಾಸ್​​ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್​​​ ಆರಂಭದಿಂದಲೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದು, ನಿಗದಿತ 20 ಓವರ್​​ಗಳಲ್ಲಿ 6 ವಿಕೆಟ್ ​ನಷ್ಟಕ್ಕೆ 210 ರನ್​ಗಳಿಕೆ ಮಾಡಿ, ಎದುರಾಳಿ ತಂಡಕ್ಕೆ 211ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ.

ರಾಜಸ್ಥಾನ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜೋಶ್ ಬಟ್ಲರ್​​ ಹಾಗೂ ಜೈಸ್ವಾಲ್​ ಉತ್ತಮ ಆರಂಭ ಒದಗಿಸಿದರು. ಭುವನೇಶ್ವರ್ ಕುಮಾರ್​ ಎಸೆದ ಮೊದಲ ಓವರ್​​ನಲ್ಲೇ ಬಟ್ಲರ್​ ವಿಕೆಟ್​ ಒಪ್ಪಿಸಿದ್ರೂ, ನೋ ಬಾಲ್​ ಆದ ಕಾರಣ ಜೀವದಾನ ಪಡೆದುಕೊಂಡರು. ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡ ಬ್ಯಾಟರ್ ತಾವು ಎದುರಿಸಿದ 28 ಎಸೆತಗಳಲ್ಲಿ 3 ಸಿಕ್ಸರ್, 3 ಬೌಂಡರಿ ಸೇರಿದಂತೆ 35ರನ್​ಗಳಿಕೆ ಮಾಡಿದರು. ಇವರಿಗೆ ಸಾಥ್ ನೀಡಿದ ಜೈಸ್ವಾಲ್ 20ರನ್​ಗಳಿಕೆ ಮಾಡಿ ಅರ್ಧಶತಕದ ಜೊತೆಯಾಟವಾಡಿದರು.

ಶೆಫಾರ್ಡ್​ ಎಸೆದ ಓವರ್​​ನಲ್ಲಿ ಜೈಸ್ವಾಲ್​(20) ವಿಕೆಟ್ ಒಪ್ಪಿಸಿದರೆ, ಉಮ್ರಾನ್ ಮಲ್ಲಿಕ್​ ಓವರ್​ನಲ್ಲಿ (35) ಬಟ್ಲರ್​ ಔಟಾದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಒಂದಾದ ಕ್ಯಾಪ್ಟನ್​ ಸ್ಯಾಮ್ಸನ್​ ಹಾಗೂ ಕನ್ನಡಿಗ ಪಡಿಕ್ಕಲ್ ಎದುರಾಳಿ ತಂಡದ ಬೌಲರ್​ಗಳನ್ನ ಬೆಂಡೆತ್ತಿದರು. ಈ ಜೋಡಿ ಮೇಲಿಂದ ಮೇಲೆ ಬೌಂಡರಿ ಸಿಕ್ಸರ್​ ಸುರಿಮಳೆಗೈದು ರನ್​ಗತಿ ಮತ್ತಷ್ಟು ಏರಿಸಿದರು. ಕ್ಯಾಪ್ಟನ್​ ಸ್ಯಾಮ್ಸನ್​​ ತಾವು ಎದುರಿಸಿದ 27 ಎಸೆತಗಳಲ್ಲಿ 5 ಸಿಕ್ಸರ್​, 3 ಬೌಂಡರಿ ಸೇರಿದಂತೆ 55ರನ್​ಗಳಿಕೆ ಮಾಡಿದರೆ, ಪಡಿಕ್ಕಲ್​​ 29 ಎಸೆತಗಳಲ್ಲಿ 2 ಸಿಕ್ಸರ್​, 4 ಬೌಂಡರಿ ಸೇರಿದಂತೆ 41ರನ್​ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.

ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಕನ್ನಡಿಗ ಪಡಿಕ್ಕಲ್​​

ಹೆಟ್ಮಾಯರ್ ಅಬ್ಬರ:ಕೊನೆ ಕ್ಷಣದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿಸಿದ ಶಿಮ್ರಾನ್ ಹೆಟ್ಮಾಯರ್​ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿ ತಂಡದ ಮೊತ್ತ 200ರ ಗಡಿ ದಾ​ಟುವಂತೆ ಮಾಡಿದರು. ತಾವು ಎದುರಿಸಿದ ಕೇವಲ 13 ಎಸೆತಗಳಲ್ಲಿ 3 ಸಿಕ್ಸರ್, 2 ಬೌಂಡರಿ ಸೇರಿ 32ರನ್​ಗಳಿಕೆ ಮಾಡಿದರು. ಇವರಿಗೆ ರಿಯಾನ್ ಪರಾಗ್​​(12) ಉತ್ತಮ ಸಾಥ್ ನೀಡಿದರು. ತಂಡ 20 ಓವರ್​​ಗಳಲ್ಲಿ 6 ವಿಕೆಟ್​ನಷ್ಟಕ್ಕೆ 210ರನ್​ಗಳಿಕೆ ಮಾಡಿದ್ದು, ಎದುರಾಳಿಗೆ 211ರನ್​ ಕಠಿಣ ಗುರಿ ನೀಡಿದೆ.

ಹೈದರಾಬಾದ್ ತಂಡದ ಪರ ಉಮ್ರಾನ್ ಮಲ್ಲಿಕ್, ನಟರಾಜನ್​ ತಲಾ 2 ವಿಕೆಟ್ ಪಡೆದುಕೊಂಡರೆ, ಭುವನೇಶ್ವರ್ ಕುಮಾರ್ ಹಾಗೂ ಶಿಫಾರ್ಡ್ 1 ವಿಕೆಟ್ ಕಿತ್ತರು.

ABOUT THE AUTHOR

...view details