ಬೆಂಗಳೂರು :2022ರ ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜಿನಲ್ಲಿ ಸ್ಟೀವ್ ಸ್ಮಿತ್, ಶಕಿಬ್ ಸೇರಿದಂತೆ ಕೆಲವು ಅಂತಾರಾಷ್ಟ್ರೀಯ ಆಟಗಾರರು ಅನ್ಸೋಲ್ಡ್ ಆಗಿದ್ದಾರೆ.
ಮೂಲಬೆಲೆ 2 ಕೋಟಿ ರೂ. ಹೊಂದಿದ್ದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್, ಬಾಂಗ್ಲಾದೇಶದ ಶಕಿಬ್ ಅಲ್ ಹಸನ್, ಭಾರತದ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಹಾಗೂ 1 ಕೋಟಿ ರೂ. ಮೂಲ ಬೆಲೆಯುಳ್ಳ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮೊದಲ ಸುತ್ತಿನ ಹರಾಜಿನಲ್ಲಿ ಮಾರಾಟವಾಗಿಲ್ಲ.
ಸ್ಮಿತ್ ಕಳೆದ ಆವೃತ್ತಿಯಲ್ಲಿ 2.2 ಕೋಟಿ ರೂ.ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ, ಶಕಿಬ್ ಅಲ್ ಹಸನ್ 3.2 ಕೋಟಿ ರೂ.ಗಳಿಗೆ ಕೆಕೆಆರ್ ಪಡೆದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಸುರೇಶ್ ರೈನಾರನ್ನು 11 ಕೋಟಿ ರೂ.ಗಳಿಗೆ ತನ್ನಲ್ಲೇ ಉಳಿಸಿಕೊಂಡಿತ್ತು ಮತ್ತು ಮಿಲ್ಲರ್ರನ್ನು ರಾಜಸ್ಥಾನ್ ರಾಯಲ್ಸ್ 75 ಲಕ್ಷ ರೂ.ಗಳಿಗೆ ಖರೀದಿಸಿತ್ತು.
ಅಲ್ರೌಂಡರ್ ಪೈಕಿ ಪ್ರಸ್ತುತ ನಡೆದಿರುವ ಹರಾಜಿನಲ್ಲಿ ದೀಪಕ್ ಹೂಡ 5.75ರೂ(LSG) ಕೋಟಿ, ಹರ್ಷಲ್ ಪಟೇಲ್(RCB) 10.75 ಕೋಟಿ ರೂ., ನಿತೀಶ್ ರಾಣಾ 8 ಕೋಟಿ ರೂ(KKR), ಜೇಸನ್ ಹೋಲ್ಡರ್ 8.75 ಕೋಟಿ ರೂ.(LSG) ಪಡೆದಿದ್ದಾರೆ.
ಇದನ್ನೂ ಓದಿ:ಕಳೆದ ಆವೃತ್ತಿಯಲ್ಲಿ 20 ಲಕ್ಷ ಪಡೆದಿದ್ದ ಪಡಿಕ್ಕಲ್ಗೆ ಈ ಬಾರಿ 7.75 ಕೋಟಿ ರೂ: ಹರ್ಷಲ್ ಪಟೇಲ್ಗೆ 10.75 ಕೋಟಿ ರೂ!