ಮುಂಬೈ:ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಆರಂಭಿಕ ಆಘಾತದ ಹೊರತಾಗಿ ರಾಹುಲ್ ತ್ರಿಪಾಠಿ(76), ಪ್ರಿಯಾಮ್ ಗರ್ಗ್(42) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6ವಿಕೆಟ್ನಷ್ಟಕ್ಕೆ 193 ರನ್ಗಳಿಕೆ ಮಾಡಿದೆ.
ತಂಡದ ಪರ ಅಭಿಷೇಕ್ ಶರ್ಮಾ(9) ಬೇಗ ಔಟಾದರು. ಈ ವೇಳೆ ಒಂದಾದ ಗರ್ಗ್ ಹಾಗೂ ತ್ರಿಪಾಠಿ ಎದುರಾಳಿ ಬೌಲರ್ಗಳನ್ನ ದಂಡಿಸಿದರು. ಈ ಜೋಡಿ 80ಕ್ಕೂ ಅಧಿಕ ರನ್ಗಳ ಜೊತೆಯಾಟವಾಡಿತು. ಕೇವಲ 26 ಎಸೆತಗಳಲ್ಲಿ 42ರನ್ಗಳಿಕೆ ಮಾಡಿದ್ದ ಗರ್ಗ್ ರಮಣದೀಪ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ಪೂರನ್ ಕೂಡ ಅಬ್ಬರಿಸಿ 22 ಎಸೆತಗಳಲ್ಲಿ 38ರನ್ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ತ್ರಿಪಾಠಿ 44 ಎಸೆತಗಳಲ್ಲಿ ಬರೋಬ್ಬರಿ 76ರನ್ಗಳಿಸಿ, ವಿಕೆಟ್ ಒಪ್ಪಿಸಿದರು. ಮರ್ಕ್ರಾಮ್ 2ರನ್ಗಳಿಸಿ ಔಟಾದರೆ, ವಿಲಿಯಮ್ಸನ್ ಅಜೇಯ 8ರನ್, ವಾಷಿಂಗ್ಟನ್ ಸುಂದರ್ 9ರನ್ಗಳಿಕೆ ಮಾಡಿದರು.
ಮುಂಬೈ ಪರ ರಮಣದೀಪ್ ಸಿಂಗ್ 3, ಡೆನಿಯಲ್ ಸ್ಯಾಮ್ಸ್ , ಮೆರ್ಡಿತ್, ಬುಮ್ರಾ ತಲಾ 1 ವಿಕೆಟ್ ಪಡೆದರು.
ಇಂಡಿಯನ್ ಪ್ರೀಮಿಯರ್ ಲೀಗ್ನ 65ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ರೋಹಿತ್ ಶರ್ಮಾ ಬಳಗ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳಲು ವಿಲಿಯಮ್ಸನ್ ಬಳಗಕ್ಕೆ ಈ ಜಯ ಅತಿ ಅವಶ್ಯವಾಗಿದೆ.