ಪುಣೆ:ಸೂರ್ಯಕುಮಾರ್ ಯಾದವ್(68) ಅವರ ಏಕಾಂಗಿ ಹೋರಾಟದ ನೆರವಿನಿಂದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 151 ರನ್ಗಳಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್ಗೆ 50 ರನ್ಸೇರಿಸಿತು. ಆದರೆ 15 ಎಸೆತಗಳಲ್ಲಿ 26 ರನ್ಗಳಿಸಿದ್ದ ರೋಹಿತ್ ಶರ್ಮಾ ಔಟಾಗುತ್ತಿದ್ದಂತೆ ಮುಂಬೈ ಪೆವಿಲಿಯನ್ ಪರೇಡ್ ನಡೆಸಿತು.
ನಂತರ ಕೇವಲ 12 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು. ರೋಹಿನ್ ಬೆನ್ನಲ್ಲೇ ಡೆವಾಲ್ಡ್ ಬ್ರೇವಿಸ್(8), ಇಶಾನ್ ಕಿಶನ್ 26(28), ತಿಲಕ್ ವರ್ಮಾ(0) ಮತ್ತು ಕೀರನ್ ಪೊಲಾರ್ಡ್(0) ಬಂದ ದಾರಿಯಲ್ಲೇ ವಾಪಸ್ ಆದರು.
ಇಂದೇ ಐಪಿಎಲ್ಗೆ ಪದಾರ್ಪಣೆ ಮಾಡಿದ ರಮಣ್ದೀಪ್ ಸಿಂಗ್ 12 ಎಸೆತಗಳಲ್ಲಿ 6 ರನ್ಗಳಿಸಿ ಹರ್ಷಲ್ ಪಟೇಲ್ಗೆ 2ನೇ ಬಲಿಯಾದರು. ಆದರೆ 7ನೇ ವಿಕೆಟ್ಗೆ ಇನ್ಫಾರ್ಮ್ ಸೂರ್ಯಕುಮಾರ್ ಯಾದವ್ ಜೊತೆಗೂಡಿದ ಜಯದೇವ್ ಉನಾದ್ಕಟ್ 72 ರನ್ ಸೇರಿಸಿದರು. ಇದರಲ್ಲಿ ಉನಾದ್ಕಟ್ 13 ರನ್ಗಳಿಸಿದದರೆ, ಯಾದವ್ 37 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ಗಳ ಸಹಿತ ಅಜೇಯ 68 ರನ್ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಆರ್ಸಿಬಿ ಪರ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಹರ್ಷಲ್ ಪಟೆಲ್ 23ಕ್ಕೆ 2, ಆಕಾಶ್ ದೀಪ್ 20ಕ್ಕೆ1, ವನಿಂಡು ಹಸರಂಗ 28ಕ್ಕೆ 2, ವಿಕೆಟ್ ಪಡೆದು ಮಿಂಚಿದರು. ಆದರೆ ಮೊಹಮ್ಮದ್ ಸಿರಾಜ್ ಈ ಪಂದ್ಯದಲ್ಲೂ 51 ರನ್ ಬಿಟ್ಟುಕೊಟ್ಟು ದುಬಾರಿಯಾದರು.