ಪುಣೆ(ಮಹಾರಾಷ್ಟ್ರ):ಸತತ ಸೋಲುಗಳನ್ನು ಕಾಣುತ್ತಿರುವ ಮುಂಬೈ ಇಂಡಿಯನ್ಸ್ ಮತ್ತೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದೆ. ಆದರೆ ಈಗ ಸೋಲಿನ ಜೊತೆಗೆ ದಂಡವನ್ನೂ ಪಾವತಿಸಬೇಕಾದ ಅನಿವಾರ್ಯತೆಗೆ ಮುಂಬೈ ತಂಡಕ್ಕೆ ಎದುರಾಗಿದೆ. ಹೌದು, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ದಂಡ ವಿಧಿಸಲಾಗಿದೆ.
ನಿಧಾನಗತಿಯ ಓವರ್ ಕಾರಣಕ್ಕೆ ಮುಂಬೈ ತಂಡದ ನಾಯಕ ಸೇರಿದಂತೆ ಎಲ್ಲಾ ಆಟಗಾರರಿಗೆ ದಂಡವನ್ನು ವಿಧಿಸಲಾಗಿದ್ದು ನಾಯಕ ರೋಹಿತ್ ಶರ್ಮಾಗೆ 24 ಲಕ್ಷ ರೂಪಾಯಿ ದಂಡ ಮತ್ತು ಉಳಿದ ಆಟಗಾರರಿಗೆ 6 ಲಕ್ಷ ರೂಪಾಯಿ ಅಥವಾ ಪಂದ್ಯಕ್ಕೆ ನೀಡುವ ಸಂಭಾವನೆಯ ಶೇಕಡಾ 25ರಷ್ಟರಲ್ಲಿ ಯಾವುದು ಕಡಿಮೆಯೋ ಅಷ್ಟು ದಂಡವನ್ನು ವಿಧಿಸಲಾಗಿದೆ.