ನವದೆಹಲಿ :ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜೆರ್ಸಿ ನಂಬರ್ 7. ಸಾಕಷ್ಟು ಮಂದಿ ಅವರ ಜೆರ್ಸಿ ನಂಬರ್ 7 ಯಾಕೆ ಎಂಬುದರ ಬಗ್ಗೆ ಹಲವಾರು ರೀತಿಯ ಊಹೆಗಳನ್ನು ಮಾಡಿರುತ್ತಾರೆ.
ಇನ್ನೂ ಕೆಲವರು ಧೋನಿಗೆ ಅದೃಷ್ಟದ ಸಂಖ್ಯೆ 7 ಇರಬಹುದು. ಆದ್ದರಿಂದ ಅವರ ಜೆರ್ಸಿ ನಂಬರ್ 7 ಎಂದುಕೊಂಡಿರುತ್ತಾರೆ. ಆದರೀಗ ಸ್ವತಃ ಎಂ.ಎಸ್.ಧೋನಿ ಜೆರ್ಸಿ ನಂಬರ್ನ ಗುಟ್ಟು ರಟ್ಟು ಮಾಡಿದ್ದಾರೆ.
ಇಂಡಿಯಾ ಸಿಮೆಂಟ್ಸ್ ನಡೆಸಿದ ವರ್ಚುವಲ್ ಸಂವಾದದ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ ಎಂಎಸ್ ಧೋನಿ, ನಾನು ಜುಲೈ 7ರಂದು ಜನಿಸಿದ ಕಾರಣದಿಂದಾಗಿ ನಾನು ಜೆರ್ಸಿ ನಂಬರ್ 7 ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೊದಲಿಗೆ ಬಹಳಷ್ಟು ಜನರು ನನಗೆ 7 ಅದೃಷ್ಟದ ಸಂಖ್ಯೆ ಎಂದು ಭಾವಿಸಿದ್ದರು. ಆಗಾಗ ಜನರು ನನ್ನನ್ನು ಕೇಳುತ್ತಲೇ ಇದ್ದರು. ನಾನು ಅದೃಷ್ಟದ ಸಂಖ್ಯೆ ಎಂಬ ಮೂಢನಂಬಿಕೆಯನ್ನು ಹೊಂದಿಲ್ಲ. 7 ನನ್ನ ಹೃದಯಕ್ಕೆ ಹತ್ತಿರವಾದ ಸಂಖ್ಯೆ. ಆದ್ದರಿಂದ ಅದನ್ನು ಜೆರ್ಸಿ ನಂಬರ್ ಆಗಿ ಹೊಂದಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ಆಲ್ ಇಂಗ್ಲೆಂಡ್ ಓಪನ್: ಶ್ರೀಕಾಂತ್, ಸಿಂಧು, ಸೈನಾಗೆ ಸೋಲು: ಕ್ವಾರ್ಟರ್ ಫೈನಲ್ಗೆ ಎಂಟ್ರಿ ಕೊಟ್ಟ ಭಾರತೀಯರು!
ಮತ್ತಷ್ಟು ಏಳರ ಗಣಿತ..:ಮಹೇಂದ್ರ ಸಿಂಗ್ ಧೋನಿ 7ರ ಸಂಖ್ಯೆಯ ಕುರಿತು ಮತ್ತಷ್ಟು ಗಣಿತವನ್ನು ಸೇರಿಸಿದ್ದಾರೆ. ಅವರು ಜುಲೈ ತಿಂಗಳಲ್ಲಿ ಹುಟ್ಟಿದ್ದಾರೆ. ಜುಲೈ ಅಂದರೆ ಏಳನೇ ತಿಂಗಳು. ಅವರು ಹುಟ್ಟಿದ ವರ್ಷ 1981.
ಕೊನೆಯ ಎರಡು ಸಂಖ್ಯೆಗಳನ್ನು ತೆಗೆದು, ಪ್ರತ್ಯೇಕವಾಗಿ ಕಳೆದರೆ 7 ಬರುತ್ತದೆ. ( ಧೋನಿ ಹುಟ್ಟಿದ ವರ್ಷದ ಕೊನೆಯ ಎರಡು ನಂಬರ್ಗಳು 8 ಮತ್ತು 1.ಇಲ್ಲಿ 8 ರಿಂದ 1 ಅನ್ನು ಕಳೆದರೆ 7 ಬರುತ್ತದೆ). ಇದರಿಂದಾಗಿ 7 ಸಂಖ್ಯೆ ನನಗೆ ತುಂಬಾ ಹತ್ತಿರವಾಗಿದೆ ಎಂದು ಧೋನಿ ಹೇಳಿದ್ದಾರೆ.