ಮುಂಬೈ:15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದಿರುವ ರಾಹುಲ್ ಪಡೆ ಬೌಲಿಂಗ್ ಆಯ್ದುಕೊಂಡಿದೆ. ತಾವು ಆಡಿರುವ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಸೋಲು ಕಂಡಿರುವ ಕಾರಣ ಇಂದಿನ ಪಂದ್ಯದಲ್ಲಿ ಗೆದ್ದು, ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿದೆ.
ಮುಂಬೈನ ಬ್ರಾಬೌರ್ನೆ ಮೈದಾನದಲ್ಲಿ ಪಂದ್ಯ ಆರಂಭವಾಗಿದ್ದು, ಲಖನೌ ತಂಡಕ್ಕೆ ಕನ್ನಡಿಗ ರಾಹುಲ್ ನಾಯಕತ್ವವಿದ್ದು, ಚೆನ್ನೈ ತಂಡಕ್ಕೆ ಆಲ್ರೌಂಡರ್ ರವೀಂದ್ರ ಜಡೇಜಾ ಸಾರಥ್ಯವಿದೆ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ CSK ಪಡೆ KKR ವಿರುದ್ಧ ಸೋಲು ಕಂಡಿದ್ದು, ಮತ್ತೊಂದೆಡೆ, ಕೆ ಎಲ್ ರಾಹುಲ್ ಸಾರಥ್ಯದ ಲಖನೌ ತಂಡ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿದೆ. ಇದರಿಂದಾಗಿ ಉಭಯ ತಂಡಗಳು ಇಂದು ಗೆಲುವಿಗಾಗಿ ಸೆಣಸಾಡಲಿವೆ.
ಇದನ್ನೂ ಓದಿ:ಧೋನಿಯಷ್ಟೇ ಕೂಲ್ ದಿನೇಶ್ ಕಾರ್ತಿಕ್: ಕೊನೆ ಕ್ಷಣದಲ್ಲಿ ಬ್ಯಾಟ್ ಮಾಡಲು ಕಳುಹಿಸಿದ ರಹಸ್ಯವೇನು?