ಮುಂಬೈ: 2022ರ 0ಇಂಡಿಯನ್ ಪ್ರೀಮಿಯರ್ ಲೀಗ್ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಉದ್ಯಮಿ ಸಂಜೀವ್ ಗೋಯಂಕ ನೇತೃತ್ವದ RPSG ಗ್ರೂಪ್ ಮಾಲೀಕತ್ವದ ಲಖನೌ ಮೂಲದ ಫ್ರಾಂಚೈಸಿಗೆ ಲಲಖನೌ ಸೂಪರ್ ಜೈಂಟ್ಸ್ ಎಂದು ಸೋಮವಾರ ನಾಮಕರಣ ಮಾಡಲಾಗಿದೆ.
ಕಳೆದ ಅಕ್ಟೋಬರ್ನಲ್ಲಿ ನಡೆದಿದ್ದ ಬಿಡ್ನಲ್ಲಿ ಬರೋಬ್ಬರಿ 7090 ಕೋಟಿ ರೂ. ನೀಡಿ RPSG ಗ್ರೂಪ್ ಲಖನೌ ಫ್ರಾಂಚೈಸಿಯನ್ನು ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ತಂಡ ಎಂಬ ಖ್ಯಾತಿಗೂ ಪಾತ್ರವಾಗಿತ್ತು.
ಮತ್ತೊಂದು ತಂಡ ಅಹ್ಮದಾಬಾದ್ ಫ್ರಾಂಚೈಸಿಯನ್ನು ಸಿವಿಸಿ ಕ್ಯಾಪಿಟಲ್ಸ್ ಪಾರ್ಟ್ನರ್ಸ್ ಎಂಬ ಖಾಸಗಿ ಇಕ್ವಿಟಿ ಕಂಪನಿ 5625 ಕೋಟಿ ರೂ. ನೀಡಿ ಖರೀದಿಸಿತ್ತು.
ಕಳೆದ ವಾರವಷ್ಟೆ ಲಖನೌ ಫ್ರಾಂಚೈಸಿ ಕನ್ನಡಿಗ ಕೆ ಎಲ್ ರಾಹುಲ್ ಅವರನ್ನು ದಾಖಲೆಯ 17 ಕೋಟಿ ರೂ. ನೀಡಿ ಡ್ರಾಫ್ಟ್ ಮಾಡಿಕೊಂಡಿದ್ದ ಫ್ರಾಂಚೈಸಿ ಅವರನ್ನೇ ನಾಯಕನನ್ನಾಗಿ ನೇಮಿಸಿತ್ತು. ಇವರ ಜೊತೆಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಮತ್ತು ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಕ್ರಮವಾಗಿ 9.5 ಮತ್ತು 4 ಕೋಟಿ ರೂ.ಗಳಿಗೆ ರಿಟೈನ್ ಮಾಡಿಕೊಂಡಿತ್ತು.