ಕರ್ನಾಟಕ

karnataka

ETV Bharat / sports

ಬೆಂಗಳೂರಿನಲ್ಲಿ ಐಪಿಎಲ್​​ ಮೆಗಾ ಹರಾಜಿಗೆ ದಿನಾಂಕ ನಿಗದಿ​ ಮಾಡಿದ ಬಿಸಿಸಿಐ - IPL mega auction date fix

ಎಎನ್​ಐ ಸುದ್ದಿಸಂಸ್ಥೆ ಜೊತೆ ಈ ಕುರಿತು ಮಾತನಾಡಿರುವ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್, ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು13, 2022ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

IPL 2022 mega auction
ಇಂಡಿಯನ್ ಪ್ರೀಮಿಯರ್ ಲೀಗ್

By

Published : Jan 11, 2022, 7:17 PM IST

ನವದೆಹಲಿ:ಐಪಿಎಲ್ ಮುಂದಿನ ಅವಧಿಯಲ್ಲಿ ಪಾಲ್ಗೊಳ್ಳಲು ನೂತನ ಫ್ರಾಂಚೈಸಿಗಳಾದ ಲಖನೌ ಮತ್ತು ಅಹ್ಮದಾಬಾದ್‌ಗೆ ಬಿಸಿಸಿಐ ಅಧಿಕೃತ ಅನುಮತಿ ನೀಡಿದೆ. ಎರಡೂ ತಂಡಗಳಿಗೆ ಆಟಗಾರರ ಡ್ರಾಪ್​ ಮಾಡಿಕೊಳ್ಳಲು ಎರಡು ವಾರ ಗಡುವು ನೀಡಿದೆ.

2022 ರಿಂದ 10 ತಂಡಗಳ ಐಪಿಎಲ್‌ ಲೀಗ್​ ನಡೆಯಲಿದೆ. ಈಗಾಗಲೇ ಹೊಸ ತಂಡಗಳನ್ನು ಬಿಟ್ಟು ಎಲ್ಲಾ ತಂಡಗಳು ತಮಗೆ ಬೇಕಾದಂತಹ ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ. ಈ ವರ್ಷ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಈ ಕುರಿತು ಎಎನ್​ಐ ಜೊತೆ ಮಾತನಾಡಿರುವ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್, "ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು13, 2022ರಂದು ನಡೆಸಲು ನಿರ್ಧರಿಸಲಾಗಿದೆ" ಎಂದು ತಿಳಿಸಿದರು.

ಲಖನೌ ಮತ್ತು ಅಹ್ಮದಾಬಾದ್​ ಫ್ರಾಂಚೈಸಿಗಳಿಗೆ ಎಲ್ಲಾ ಔಪಚಾರಿಕ ಪತ್ರಗಳನ್ನು ನೀಡಲಾಗಿದೆ. ಇದರ ಜೊತೆಗೆ ತಲಾ ಮೂರು ಆಟಗಾರರನ್ನು ನೇರ ಆಯ್ಕೆ ಮಾಡಿಕೊಳ್ಳುವುದಕ್ಕೆ ಐಪಿಎಲ್ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ಎರಡು ವಾರಗಳ ಗಡುವು ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

2022ರ ಇಂಡಿಯನ್​ ಪ್ರೀಮಿಯರ್ ಲೀಗ್​ನ ಶೀರ್ಷಿಕೆ ಪ್ರಾಯೋಜಕತ್ವವನ್ನು ಭಾರತದ ದೈತ್ಯ ಉದ್ಯಮ ಸಂಸ್ಥೆ ಟಾಟಾ ಸಮೂಹ ಪಡೆದುಕೊಂಡಿದೆ.

ಇದನ್ನೂ ಓದಿ:ವಿವೋ ಐಪಿಎಲ್ ಅಲ್ಲ, ಮುಂದಿನ ವರ್ಷ ಟಾಟಾ ಐಪಿಎಲ್

ABOUT THE AUTHOR

...view details