ಪುಣೆ:ಇಂಡಿಯನ್ ಪ್ರೀಮಿಯರ್ ಲೀಗ್ನ 42ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಪಂಜಾಬ್ ಕಿಂಗ್ ತಂಡದ ವಿರುದ್ಧ 20 ರನ್ಗಳ ಗೆಲುವು ಸಾಧಿಸಿದೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅತ್ಯದ್ಭುತ ಬೌಲಿಂಗ್ ಪ್ರದರ್ಶಿಸಿದ ಲಖನೌ ತಂಡ ಕೇವಲ 133 ರನ್ಗಳಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ಕಟ್ಟಿಹಾಕುವ ಮೂಲಕ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡ ಕ್ವಿಂಟನ್ ಡಿಕಾಕ್ 46 ರನ್ ಹಾಗೂ ದೀಪಕ್ ಹೂಡಾ 34ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. ಪಂಜಾಬ್ ಬೌಲಿಂಗ್ ದಾಳಿಗೆ ತತ್ತರಿಸಿದ ಲಖನೌ ಆರಂಭದಲ್ಲೇ ಕೆ.ಎಲ್.ರಾಹುಲ್ ಅವರನ್ನು ಕಳೆದುಕೊಂಡಿತ್ತು. ಕೆ.ಎಲ್.ರಾಹುಲ್ ಕೇವಲ 6 ರನ್ ಗಳಿಸಲು ಮಾತ್ರವಷ್ಟೇ ಸಾಧ್ಯವಾಯಿತು. ನಂತರ ಕ್ವಿಂಟನ್ ಡಿ ಕಾಕ್ 46 ರನ್ ದಾಖಲಿಸಿ ತಂಡ ಸ್ವಲ್ಪ ಚೇತರಿಸಿಕೊಳ್ಳುವಂತೆ ಮಾಡಿದರು.
ದೀಪಕ್ ಹೂಡಾ 34 ಗಳಿಸಿ ತಂಡಕ್ಕೆ ಆಸರೆಯಾದರೆ, ಕೃನಾಲ್ ಪಾಂಡ್ಯಾ 7 ರನ್, ಸ್ಟೋನಿಸ್ 1ರನ್ ಹಾಗೂ ಬದೌನಿ 4 ರನ್ಗಳಿಕೆ ಮಾಡಿ ಔಟಾದರು. ಹೋಲ್ಡರ್ ಕೇವಲ 11 ರನ್ ಗಳಿಸಿ ನಿರಾಸೆ ಮೂಡಿಸಿದರು. ಚಮೀರಾ 17 ರನ್, ಮೋಸಿನ್ ಖಾನ್ 13 ರನ್ ಗಳಿಸಿ ತಂಡ 150ರ ಗಡಿ ದಾಟುವಂತೆ ಮಾಡಿದರು.
ಪಂಜಾಬ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ರಬಾಡಾ 38 ರನ್ಗೆ 4 ವಿಕೆಟ್ ಪಡೆದುಕೊಂಡರೆ, ರಾಹುಲ್ ಚಹರ್ 30 ರನ್ಗೆ 2 ವಿಕೆಟ್ ಹಾಗೂ ಸಂದೀಪ್ ಶರ್ಮಾ 18 ವಿಕೆಟ್ಗೆ 1 ವಿಕೆಟ್ ಕಬಳಿಸಿದರು. ಕೊನೆಗೆ 8 ವಿಕೆಟ್ ನಷ್ಟಕ್ಕೆ ಲಖನೌ 153 ರನ್ ಗಳಿಸಿ, ಸಾಧಾರಣ ಮೊತ್ತವನ್ನು ಪಂಜಾಬ್ಗೆ ನೀಡಿತ್ತು.
ಸಾಧಾರಣ ಮೊತ್ತವನ್ನು ಬೆನ್ನತ್ತಿದ ಪಂಜಾಬ್ 153 ರನ್ಗಳ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಮಯಾಂಕ್ ಅಗರ್ವಾಲ್ 25, ಜಾನಿ ಬೈರ್ಸ್ಟೋ 32, ಲಿಯಾ ಲಿವಿಂಗ್ಸ್ಟೋನ್ 18, ರಿಶಿ ಧವನ್ 21 ರನ್ಗಳನ್ನು ಗಳಿಸಿದರೂ, ಉಳಿದವರು ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸುವಲ್ಲಿ ವಿಫಲರಾದರು. ಶಿಖರ್ ಧವನ್ 15 ಎಸೆತಗಳಲ್ಲಿ 5 ರನ್ಗಳಿಸಿ ಹಿನ್ನಡೆಗೆ ಕಾರಣರಾದರು. ಭಾನುಕ ರಾಜಪಕ್ಸ 9 ರನ್, ಜಿತೇಶ್ ಶರ್ಮ, ಕಗಿಸೋ ರಬಾಡಾ ತಲಾ 2 ರನ್ ಗಳಿಸಿದರು. ಇದರ ಫಲಿತಾಂಶವಾಗಿ 8 ವಿಕೆಟ್ ನಷ್ಟಕ್ಕೆ ಕೇವಲ 133 ರನ್ ಗಳಿಸಲು ಮಾತ್ರವಷ್ಟೇ ಸಾಧ್ಯವಾಯಿತು.
ಲಖನೌ ಪರ ಮೊಸಿನ್ ಖಾನ್ 24 ರನ್ಗಳನ್ನು ನೀಡಿ, 3 ವಿಕೆಟ್ ಪಡೆದುಕೊಂಡರೆ, ದುಶ್ಮಂತು ಚಮೀರಾ 17 ರನ್ ನೀಡಿ 2 ವಿಕೆಟ್, ಕೃನಾಲ್ ಪಾಂಡ್ಯಾ 11 ರನ್ ನೀಡಿ 2 ವಿಕೆಟ್, ರವಿ ಬಿಷ್ಣೋಯಿ 41 ರನ್ ನೀಡಿ 1 ವಿಕೆಟ್ ಪಡೆದುಕೊಂಡರು. ಆದರೂ 133 ರನ್ಗಳಿಗೆ ಪಂಜಾಬ್ ತಂಡವನ್ನು ಕಟ್ಟಿಹಾಕಿ ಲಖನೌ ಗೆಲುವಿಗೆ ಬೌಲರ್ಗಳು ಕಾರಣರಾದರು.
ಇದನ್ನೂ ಓದಿ:ಮುಂಬೈ ವಿರುದ್ಧದ ಪಂದ್ಯದಲ್ಲಿ ವಿಶೇಷ ಜರ್ಸಿ ತೊಟ್ಟು ರಾಜಸ್ಥಾನ ಕಣಕ್ಕೆ: ಕಾರಣ?