ಕರ್ನಾಟಕ

karnataka

ETV Bharat / sports

ಟಿ20ಯಲ್ಲಿ ವೇಗದ 6000 ರನ್​: ವಿರಾಟ್​ ಕೊಹ್ಲಿ ದಾಖಲೆ ಮುರಿದ ಕೆ.ಎಲ್.ರಾಹುಲ್ - ವೇಗವಾಗಿ ಟಿ20ಯಲ್ಲಿ 6 ಸಾವಿರ್ ರನ್

ಕೆ.ಎಲ್.ರಾಹುಲ್​ ಈ ಮೈಲಿಗಲ್ಲನ್ನು ತಮ್ಮ 179ನೇ ಇನ್ನಿಂಗ್ಸ್​ನಲ್ಲಿ ತಲುಪಿದರು. ಕನ್ನಡಿಗನಿಗೂ ಮುನ್ನ ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ 184 ಇನ್ನಿಂಗ್ಸ್​ ಮೂಲಕ 6 ಸಾವಿರ ರನ್​ ಗಡಿ ದಾಟಿದ್ದರು.

KL Rahul surpasses Virat Kohli to become fastest Indian to score 6000 T20 runs
ವಿರಾಟ್​ ಕೊಹ್ಲಿ ದಾಖಲೆ ಮುರಿದ ಕೆಎಲ್ ರಾಹುಲ್

By

Published : Apr 20, 2022, 5:07 PM IST

ಮುಂಬೈ: ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್.ರಾಹುಲ್​ ಮಂಗಳವಾರ ಆರ್​ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಟಿ20 ಕ್ರಿಕೆಟ್​​ನಲ್ಲಿ 6,000 ರನ್​ ಪೂರೈಸಿದರು. ಈ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ವೇಗವಾಗಿ ಈ ಮೈಲಿಗಲ್ಲು ದಾಟಿದ ಭಾರತೀಯ ಬ್ಯಾಟರ್​ ಎಂಬ ದಾಖಲೆಗೆ ಪಾತ್ರರಾದರು.

ಕೆ.ಎಲ್.ರಾಹುಲ್​ ಈ ಮೈಲಿಗಲ್ಲನ್ನು ತಮ್ಮ 179ನೇ ಇನ್ನಿಂಗ್ಸ್​ನಲ್ಲಿ ತಲುಪಿದರು. ಕನ್ನಡಿಗನಿಗೂ ಮುನ್ನ ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ 184 ಇನ್ನಿಂಗ್ಸ್​ಗಳಲ್ಲಿ 6 ಸಾವಿರ ರನ್​ ಗಡಿ ದಾಟಿದ್ದರು.

ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಇದೀಗ ಟಿ20 ಕ್ರಿಕೆಟ್​ನಲ್ಲಿ ವೇಗವಾಗಿ 6 ಸಾವಿರ ರನ್​ ಗಳಿಸಿರುವ ಪಟ್ಟಿಯಲ್ಲಿ ವೆಸ್ಟ್​ ಇಂಡೀಸ್​ನ ಗ್ರಿಸ್​ ಗೇಲ್(162 ಇನ್ನಿಂಗ್ಸ್) ಮತ್ತು ಪಾಕಿಸ್ತಾನ ನಾಯಕ ಬಾಬರ್ ಅಜಮ್(165) ಗಿಂತ ಹಿಂದಿದ್ದಾರೆ. ರಾಹುಲ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತ್ಯುತ್ತಮ ಫಾರ್ಮ್​ನಲ್ಲಿದ್ದು, ರಾಜಸ್ಥಾನ್​ ರಾಯಲ್ಸ್​ನ ಜಾಸ್​ ಬಟ್ಲರ್​ ಹೊರತುಪಡಿಸಿ ಶತಕ ಸಿಡಿಸಿರುವ ಬ್ಯಾಟರ್​ ಎನಿಸಿಕೊಂಡಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಮೊದಲ ಓವರ್​​ನಲ್ಲೇ 2 ವಿಕೆಟ್ ಕಳೆದುಕೊಂಡು ನಾಯಕ ಫಾಫ್​ ಡು ಪ್ಲೆಸಿಸ್ ಅವರ 96 ರನ್​ಗಳ ನೆರವಿನಿಂದ ಆರ್​ಸಿಬಿ 181 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಲಖನೌ ತಂಡ 163 ರನ್​ಗಳಿಸಲಷ್ಟೇ ಶಕ್ತವಾಗಿ 18 ರನ್​ಗಳ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ಇದನ್ನೂ ಓದಿ:ಸೋಲಿನ ಮೇಲೆ ಬರೆ, ಲಖನೌ ನಾಯಕ ಕನ್ನಡಿಗ ಕೆ ಎಲ್ ರಾಹುಲ್​ಗೆ ಮತ್ತೆ ದಂಡ

ABOUT THE AUTHOR

...view details