ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಬಲಿಷ್ಠ ಪಂಜಾಬ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪೈಪೋಟಿ ನಡೆಸಲಿವೆ. ಇಂದು ನಡೆಯುತ್ತಿರುವ 8ನೇ ಪಂದ್ಯದಲ್ಲಿ ಟಾಸ್ ಗೆದ್ದು ಪೀಲ್ಡಿಂಗ್ ಆರಿಸಿಕೊಂಡ ಕೆಕೆಆರ್ ಆಟಗಾರರು ಎದುರಾಳಿ ತಂಡ ಪಂಜಾಬ್ ಅನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಸವಾಲು ಹಾಕಿಕೊಂಡಿದ್ದಾರೆ.
ಎರಡೂ ತಂಡಗಳನ್ನು ಹೊಸ ನಾಯಕರು ಮುನ್ನಡೆಸಲಿದ್ದು, ಕೆಕೆಆರ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದರೆ, ಪಂಜಾಬ್ ಕಿಂಗ್ಸ್ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸುತ್ತಿದ್ದಾರೆ. ಇನ್ನು ಉಭಯ ತಂಡಗಳೆರಡು ಗೆಲುವಿನ ನಿರೀಕ್ಷೆಯಲ್ಲಿದ್ದು, ಯಾವ ತಂಡ ಗೆದ್ದು ವಿಜಯದ ಮಾಲೆ ತನ್ನ ಕೊರಳಿಗೆ ಹಾಕಿಕೊಳ್ಳಲಿದೆ ಅನ್ನೋದನ್ನು ಕಾದು ನೋಡಬೇಕಿದೆ.