ಕರ್ನಾಟಕ

karnataka

ETV Bharat / sports

IPL 2022: ಸಿಎಸ್​ಕೆ ಸೋಲಿಸಿ ಶುಭಾರಂಭ ಮಾಡಿದ ಕೆಕೆಆರ್​

ಐಪಿಎಲ್​ 15 ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ ಆವೃತ್ತಿಯಲ್ಲಿ ಫೈನಲ್​ ಪಂದ್ಯದಲ್ಲಿ ಸೋತಿದ್ದಕ್ಕೆ ಸೇಡು ತೀರಿಸಿಕೊಂಡಿದೆ.

CSK
ಕೆಕೆಆರ್

By

Published : Mar 26, 2022, 11:08 PM IST

ಮುಂಬೈ:ಐಪಿಎಲ್​ 15ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆಲುವು ಸಾಧಿಸಿದೆ. ಸಿಎಸ್​ಕೆ ನೀಡಿದ್ದ 131 ರನ್​ಗಳ ಸಾಧಾರಣ ಮೊತ್ತ ಬೆನ್ನತ್ತಿದ ಕೆಕೆಆರ್​ ತಂಡ 18.3 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 133 ರನ್​ಗಳಿಸಿ ವಿಜಯದ ನೆಗೆ ಬೀರಿತು.

ಕೆಕೆಆರ್​ ತಂಡಕ್ಕೆ ಅಜಿಂಕ್ಯಾ ರಹಾನೆ ಮತ್ತು ವೆಂಕಟೇಶ್​ ಅಯ್ಯರ್​ ಉತ್ತಮ ಆರಂಭ ನೀಡಿದರು. ತಮ್ಮ ಕಳಪೆ ಆಟದಿಂದ ಭಾರತ ಟೆಸ್ಟ್​ ತಂಡದಿಂದ ಹೊರಬಿದ್ದು, ವೃತ್ತಿ ಬದುಕಿನ ತೂಗುಯ್ಯಾಲೆಯಲ್ಲಿರುವ ಅಜಿಂಕ್ಯಾ ರಹಾನೆ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. 6 ಬೌಂಡರಿ, 1 ಸಿಕ್ಸರ್​ ಸಮೇತ 44 ರನ್ ಚಚ್ಚಿದರು.

ಟಿ-20 ಸ್ಪೆಷಲಿಸ್ಟ್​ ಆಗುತ್ತಿರುವ ವೆಂಕಟೇಶ್​ ಅಯ್ಯರ್​ (16), ನಿತೀಶ್​ ರಾಣಾ (21), ಸ್ಯಾಮ್​ ಬಿಲ್ಲಿಂಗ್ಸ್​(25) ರನ್​ ಗಳಿಸಿದರೆ, ತಂಡದ ನಾಯಕತ್ವ ವಹಿಸಿರುವ ಶ್ರೇಯಸ್​ ಅಯ್ಯರ್​ ಔಟಾಗದೇ 20 ರನ್​ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಚೆನ್ನೈ ಪರ ಡ್ವೇನ್​ ಬ್ರಾವೋ 3 ವಿಕೆಟ್​ ಪಡೆದು ಮಿಂಚಿದರೆ, ಮಿಚೆಲ್​ ಸ್ಯಾಂಟನರ್ 1 ವಿಕೆಟ್​ ಪಡೆದರು.

ಸಿಎಸ್​ಕೆಗೆ ಧೋನಿ ಅರ್ಧಶತಕದ ಬಲ:ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್​ ಮಾಡಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಹಳೆಯ ಹುಲಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(50) ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ವಿಶೇಷ ಅಂದರೆ ಧೋನಿ ಹಲವು ದಿನಗಳ ಬಳಿಕ ಮತ್ತು ಈ ಆವೃತ್ತಿಯ ಮೊದಲ ಪಂದ್ಯದಲ್ಲೇ ಭರ್ಜರಿ ಬ್ಯಾಟ್​ ಬೀಸಿ ಅಭಿಮಾನಿಗಳನ್ನು ರಂಜಿಸಿದರು.

2 ದಿನಗಳ ಹಿಂದಷ್ಟೇ ನಾಯಕತ್ವದಿಂದ ಹಿಂದೆ ಸರಿದಿದ್ದ ಮಹೇಂದ್ರ ಸಿಂಗ್​ ಧೋನಿ ಈ ಪಂದ್ಯದಲ್ಲಿ ರಾರಾಜಿಸಿದರು. ತಂಡದ ಬ್ಯಾಟಿಂಗ್​ ಬಲವಾಗಿರುವ ಯುವಕರು ಪೆವಿಲಿಯನ್​ ಪರೇಡ್​ ನಡೆಸುತ್ತಿದ್ದರೆ, ಹಿರಿಯ ಆಟಗಾರ ಯುವಕರನ್ನೇ ನಾಚಿಸುಂತೆ ಬ್ಯಾಟ್ ಬೀಸಿದರು. 7 ಬೌಂಡರಿ 1 ಸಿಕ್ಸರ್​ ಸಮೇತ ಬರೋಬ್ಬರಿ 50 ರನ್​ ಗಳಿಸಿದರು.

ತಂಡದ ನಾಯಕತ್ವ ವಹಿಸಿಕೊಂಡಿರುವ ರವೀಂದ್ರ ಜಡೇಜಾ 26 ರನ್​ ಗಳಿಸಿ ಧೋನಿಗೆ ಸಾಥ್​ ನೀಡಿದರು. ಇಬ್ಬರ ನಡುವೆ ಮುರಿಯದ 70 ರನ್​ಗಳ ಜೊತೆಯಾಟ ಮೂಡಿಬಂದಿತ್ತು.

ಓದಿ:ಧೋನಿ ಮಿಂಚಿನ ಬ್ಯಾಟಿಂಗ್​.. 131 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದ ಸಿಎಸ್​ಕೆ

ABOUT THE AUTHOR

...view details