ಮುಂಬೈ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 2022ರ ಐಪಿಎಲ್ಗೆ ಸೇರ್ಪಡೆಯಾಗಿರುವ ನೂತನ ಫ್ರಾಂಚೈಸಿ ಅಹ್ಮದಾಬಾದ್ಗೆ ನಾಯಕನಾಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
2022ರ ಐಪಿಎಲ್ಗಾಗಿ ಬರೋಬ್ಬರಿ 5,625 ಕೋಟಿ ರೂ. ನೀಡಿ ಅಹ್ಮದಾಬಾದ್ ಫ್ರಾಂಚೈಸಿ ಖರೀದಿಸಿರುವ ಸಿವಿಸಿ ಕ್ಯಾಪಿಟಲ್ಸ್ ಗ್ರೂಪ್ ಈಗಾಗಲೇ ಆಶಿಷ್ ನೆಹ್ರಾರನ್ನು ತಂಡದ ಮುಖ್ಯ ಕೋಚ್ ಆಗಿ, ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ತಂದುಕೊಟ್ಟ ಕೋಚ್ ಗ್ಯಾರಿ ಕಸ್ಟರ್ನ್ ಮೆಂಟರ್ ಆಗಿ ಮತ್ತು ವಿಕ್ರಮ್ ಸೋಲಂಕಿ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಕವಾಗಿದ್ದಾರೆ.
ಇದೀಗ ಮುಂಬೈ ಇಂಡಿಯನ್ಸ್ 4 ಐಪಿಎಲ್ ಟ್ರೋಪಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ನೇಮಿಸುವ ಸಾಧ್ಯತೆಯಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಹಾರ್ದಿಕ್ ಮೂಲತಃ ಗುಜರಾತ್ ರಾಜ್ಯದವರಾಗಿರುವುದರಿಂದ ಅವರನ್ನೇ ಕ್ಯಾಪ್ಟನ್ಆಗಿ ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ.