ಮುಂಬೈ :ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಹೊಸ ತಂಡಗಳಾಗಿರುವ ಗುಜರಾತ್ ಟೈಟನ್ಸ್ ಮತ್ತು ಲಖನೌ ತಂಡ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಗುಜರಾತ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯಾ, ಬೌಲಿಂಗ್ ಆಯ್ದುಕೊಂಡಿದ್ದಾರೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ಆರಂಭವಾಗಿದೆ.
ಲಖನೌ ತಂಡದ ಸಾರಥ್ಯವನ್ನು ಕನ್ನಡಿಗ ಕೆ.ಎಲ್.ರಾಹುಲ್ ವಹಿಸಿಕೊಂಡಿದ್ದು, ಗುಜರಾತ್ ತಂಡಕ್ಕೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೇತೃತ್ವವಿದೆ. ಈಗಾಗಲೇ ಪಂಜಾಬ್ ತಂಡದ ಕ್ಯಾಪ್ಟನ್ ಆಗಿದ್ದ ಅನುಭವ ಹೊಂದಿರುವ ರಾಹುಲ್, ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ, ಕಳೆದ ಆವೃತ್ತಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ಹಾರ್ದಿಕ್ ನವೋತ್ಸಾಹದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ.
ಆಡುವ 11ರ ಬಳಗ ಇಂತಿದೆ: ಗುಜರಾತ್ ಟೈಟನ್ಸ್:ಶುಬ್ಮನ್ ಗಿಲ್, ಮ್ಯಾಥ್ಯೋ ವ್ಯಾಡ್(ವಿ,ಕೀ), ವಿಜಯ್ ಶಂಕರ್,ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ(ಕ್ಯಾಪ್ಟನ್), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಾಶಿದ್ ಖಾನ್, ಫಾರ್ಗ್ಯೂಸನ್, ವರುಣ್ ಆ್ಯರೊನ್, ಮೊಹಮ್ಮದ್ ಶಮಿ
ಲಖನೌ ತಂಡ: ಕೆಎಲ್ ರಾಹುಲ್(ಕ್ಯಾಪ್ಟನ್),, ಕ್ವಿಂಟನ್ ಡಿಕಾಕ್(ವಿ,ಕೀ), ಇವಿನ್ ಲಿವಿಸ್, ಮನೀಷ್ ಪಾಂಡೆ, ದೀಪಕ್ ಹೂಡಾ, ಕೃನಾಲ್ ಪಾಂಡ್ಯಾ, ಮೊಸಿನ್ ಖಾನ್, ಆಯುಷ್ ಬದೌನಿ, ಚಮೀರ್, ರವಿ ಬಿಷ್ಣೋಯ್, ಆವೇಶ್ ಖಾನ್
ಲಖನೌ ತಂಡದಲ್ಲಿ ಕೆ.ಎಲ್.ರಾಹುಲ್ ಜೊತೆ ಕನ್ನಡಿಗ ಮನೀಷ್ ಪಾಂಡೆ, ಆಲ್ರೌಂಡರ್ಗಳಾಗಿ ಕೃಣಾಲ್ ಪಾಂಡ್ಯ, ದೀಪಕ್ ಹೂಡಾ ಇರಲಿದ್ದಾರೆ. ವಿಕೆಟ್ ಕೀಪರ್ ಆಗಿ ಕ್ವಿಂಟನ್ ಡಿಕಾಕ್ ಸಹ ಇರುವುದು ತಂಡದ ಸಾಮರ್ಥ್ಯ ಹೆಚ್ಚಿಸಿದೆ. ಗುಜರಾತ್ ತಂಡದಲ್ಲಿ ಹಾರ್ದಿಕ್ ಪಾಂಡ್ಯಾ ಜೊತೆ ಶುಭ್ಮನ್ ಗಿಲ್, ವಿಜಯಶಂಕರ್, ರಾಹುಲ್ ತೆವಾಟಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಜೊತೆ ಅಫ್ಘಾನಿಸ್ತಾನದ ರಶೀದ್ ಖಾನ್ ಇದ್ದಾರೆ.