ಮುಂಬೈ: ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್ 2022ರ ಐಪಿಎಲ್ಗಾಗಿ ಭಾರತಕ್ಕೆ ಆಗಮಿಸಿದ್ದು, ಸನ್ರೈಸರ್ಸ್ ಹೈದರಾಬಾದ್ ಪರ ಬೌಲಿಂಗ್ ಕೋಚ್ ಅಗಿ 2ನೇ ಇನ್ನಿಂಗ್ಸ್ಗೆ ಮುನ್ನುಡಿ ಬರೆದಿದ್ದಾರೆ.
38 ವರ್ಷದ ಮಾಜಿ ವೇಗಿ 15ನೇ ಆವೃತ್ತಿಗೆ ಎಸ್ಆರ್ಹೆಚ್ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ. ಈ ಹಿಂದೆ ಅವರು ಫ್ರಾಂಚೈಸಿಗಾಗಿ ಆಟಗಾರನಾಗಿಯೂ ಆಡಿದ್ದರು. ಇದೀಗ ಟಾಮ್ ಮೂಡಿ, ಬ್ರಿಯಾನ್ ಲಾರಾ, ಮುತ್ತಯ್ಯ ಮುರಳೀಧರನ್ ಅವರಂತಹ ಲೆಜೆಂಡರಿ ಕ್ರಿಕೆಟಿಗರ ಜೊತೆಗೆ ಕೋಚಿಂಗ್ ಬಳಗದಲ್ಲಿ ಫ್ರಾಂಚೈಸಿಗೆ 2ನೇ ಟ್ರೋಫಿ ತಂದು ಕೊಡುವುದಕ್ಕೆ ಶ್ರಮಿಸಲಿದ್ದಾರೆ.
ಮತ್ತೆ ಐಪಿಎಲ್ಗೆ ಮರಳಿರುವುಕ್ಕೆ ತುಂಬಾ ಖುಷಿಯಾಗಿದೆ. ನಾನು ಭಾರತದಲ್ಲಿ ಕೆಲವು ಸಮಯ ಕಳೆದಿದ್ದೇನೆ, ಹಾಗಾಗಿ ಮತ್ತೆ ಮರಳುವುದಕ್ಕೆ ಸ್ವಲ್ಪ ಉತ್ಸಾಹಿತನಾಗಿದ್ದೇನೆ. ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ನನಗೆ ಸಾಕಷ್ಟು ನೆನಪುಗಳು ಮರುಕಳುಹಿಸಿದವು. ದಕ್ಷಿಣ ಆಫ್ರಿಕಾ ಅಥವಾ ಐಪಿಎಲ್ ತಂಡಗಳಲ್ಲಿ ಆಡಲೂ ಈ ಹಿಂದೆಯೇ ಇಲ್ಲಿಗೆ ಬಂದು ಹೋಗಿದ್ದೆ. ಇದೀಗ ಕೋಚ್ ಆಗಿ ಹೊಸ ಪಾತ್ರವಹಿಸುವುದಕ್ಕೆ ಉತ್ಸಾಹವನ್ನುಂಟು ಮಾಡಿದೆ ಎಂದು ಸ್ಟೇನ್ ಫ್ರಾಂಚೈಸಿ ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.