ಕರ್ನಾಟಕ

karnataka

ETV Bharat / sports

ಸಿಎಸ್​ಕೆ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಆರ್​ಸಿಬಿ?.. ದಾಖಲೆಗಳ ಪ್ರಕಾರ ಫೆವರೇಟ್​ ಯಾವುದು?

ಸಿಎಸ್​ಕೆ ಈಗಾಗಲೇ 6 ಸೋಲು ಕಂಡಿದೆ ಪ್ಲೇ ಆಫ್ ಪ್ರವೇಶಿಸಿಲು ಉಳಿದಿರುವ 5 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿ ಧೋನಿ ನಾಯಕತ್ವಕ್ಕೆ ಕಮ್​ಬ್ಯಾಕ್​ ಆಗುತ್ತಿದ್ದಂತೆ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಜಯ ಸಾಧಿಸಿರುವ ಹುಮ್ಮಸ್ಸಿನಲ್ಲಿದೆ. ಈಗ ಅದೇ ರೀತಿ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ ಸಿಎಸ್‌ಕೆ..

Royal Challengers Bangalore vs Chennai Super King
Royal Challengers Bangalore vs Chennai Super King

By

Published : May 4, 2022, 3:22 PM IST

ಪುಣೆ :ಸತತ 3 ಸೋಲು ಕಂಡಿರುವ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಹಳಿಗೆ ಮರಳುವ ಉತ್ಸಾಹದಲ್ಲಿದೆ. 15ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿದ್ದ ಆರ್​ಸಿಬಿ ಕಳೆದ 3 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ.

9ನೇ ಸ್ಥಾನದಲ್ಲಿರುವ ಸಿಎಸ್​ಕೆ ಈಗಾಗಲೇ 6 ಸೋಲು ಕಂಡಿದ್ದು ಪ್ಲೇ ಆಫ್ ಪ್ರವೇಶಿಸಿಲು ಉಳಿದಿರುವ 5 ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿ ಧೋನಿ ನಾಯಕತ್ವಕ್ಕೆ ಕಮ್​ಬ್ಯಾಕ್​ ಆಗುತ್ತಿದ್ದಂತೆ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಜಯ ಸಾಧಿಸಿರುವ ಹುಮ್ಮಸ್ಸಿನಲ್ಲಿದೆ. ಅದೇ ರೀತಿ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ ಸಿಎಸ್‌ಕೆ.

ಎರಡೂ ತಂಡಗಳು ಈಗಾಗಲೇ ಲೀಗ್​ನಲ್ಲಿ ಒಮ್ಮೆ ಮುಖಾಮುಖಿಯಾಗಿವೆ. ಶಿವಂ ದುಬೆ ಮತ್ತು ರಾಬಿನ್ ಉತ್ತಪ್ಪ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 216 ರನ್​ಗಳ ಬೃಹತ್​ ಮೊತ್ತ ದಾಖಲಿಸಿ 23 ರನ್​ಗಳ ಗೆಲುವು ಸಾಧಿಸಿತ್ತು. ಇದೀಗ ಋತುರಾಜ್ ಗಾಯಕ್ವಾಡ್​ ಮತ್ತು ಡೆವೋನ್ ಕಾನ್ವೆ ಕೂಡ ಅದ್ಭುತ ಫಾರ್ಮ್​ನಲ್ಲಿರುವುದರಿಂದ ಬ್ಯಾಟಿಂಗ್‌ಗೆ ಆನೆ ಬಲ ಬಂದಿದೆ. ಕಳೆದ ಪಂದ್ಯದಲ್ಲಿ ಬಲಿಷ್ಠ ಹೈದರಾಬಾದ್ ಬೌಲಿಂಗ್ ಎದುರು ಈ ಜೋಡಿ 182 ರನ್​ಗಳ ಆರಂಭಿಕ ಜೊತೆಯಾಟ ನಡೆಸಿ ದಾಖಲೆ ಬರೆದಿತ್ತು.

10 ಪಂದ್ಯಗಳನ್ನಾಡಿ 6ನೇ ಸ್ಥಾನದಲ್ಲಿರುವ ಆರ್​ಸಿಬಿ ರನ್​ರೇಟ್​ ಋಣಾತ್ಮಕವಾಗಿರುವುದರಿಂದ ಪ್ಲೇ ಆಫ್ ಪ್ರವೇಶಿಸಲು ಉಳಿದ 4 ಪಂದ್ಯಗಳನ್ನು ಗೆಲ್ಲಬೇಕಿದೆ. ಸಮಾಧಾನಕರ ಅಂಶವೆಂದರೆ ಫಾರ್ಮ್​ ಸಮಸ್ಯೆ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಹಾಗಾಗಿ, ಈ ಪಂದ್ಯದಲ್ಲೂ ಕೊಹ್ಲಿಯಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ.

ಆರ್​ಸಿಬಿ ವಿರುದ್ಧ ಸಿಎಸ್​ಕೆ ಅಮೋಘ ದಾಖಲೆ : ಎರಡೂ ತಂಡಗಳು ಐಪಿಎಲ್​ನಲ್ಲಿ 29 ಬಾರಿ ಮುಖಾಮುಖಿಯಾಗಿವೆ. ಆರ್​ಸಿಬಿ ಕೇವಲ 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಸಿಎಸ್​ಕೆ 19 ಜಯ ಸಾಧಿಸಿದ್ದು, 1 ಪಂದ್ಯದ ಫಲಿತಾಂಶ ಬಂದಿಲ್ಲ.

ಇದನ್ನೂ ಓದಿ:ಬಲಿಷ್ಠ ಗುಜರಾತ್​ ವಿರುದ್ಧ ಗೆದ್ದ ಪಂಜಾಬ್​​.. ಪಾಯಿಂಟ್​ ಪಟ್ಟಿಯಲ್ಲಿ ಆರ್​ಸಿಬಿ ಹಿಂದಿಕ್ಕಿದ ಮಯಾಂಕ್​ ಬಳಗ

ABOUT THE AUTHOR

...view details