ಬೆಂಗಳೂರು:15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ಬರುವ ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ತಮ್ಮಿಷ್ಟದ ಆಟಗಾರರನ್ನ ಖರೀದಿ ಮಾಡಲು ಎಲ್ಲ 10 ಫ್ರಾಂಚೈಸಿಗಳು ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿವೆ.
ಇಲ್ಲಿಯವರೆಗೆ ಚಾಂಪಿಯನ್ ಆಗಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ವೆಸ್ಟ್ ಇಂಡೀಸ್ನ ಆಲ್ರೌಂಡರ್ ಜೇಸನ್ ಹೋಲ್ಡರ್ ಖರೀದಿ ಮಾಡಲು ಯೋಜನೆ ರೂಪಿಸಿದ್ದು, ಇವರ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ಅಂಬಾಟಿ ರಾಯುಡು ಹಾಗೂ ಯುವ ಪ್ಲೇಯರ್ ರಿಯಾನ್ ಪರಾಗ್ ಮೇಲೆ ಕಣ್ಣಿಟ್ಟಿದೆ.
ಫ್ರಾಂಚೈಸಿ ಈಗಾಗಲೇ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ಗೆ ಉಳಿಸಿಕೊಂಡಿದ್ದು, ಇದೀಗ ಜೇಸನ್ ಹೋಲ್ಡರ್ ಖರೀದಿ ಮಾಡಲು 12 ಕೋಟಿ ರೂ.ವರೆಗೆ ಬಿಡ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಉಳಿದಂತೆ ರಾಯುಡು ಖರೀದಿ ಮಾಡಲು 8 ಕೋಟಿ ರೂ. ಹಾಗೂ ಪರಾಗ್ಗೋಸ್ಕರ 7 ಕೋಟಿ ರೂ. ಮೀಸಲಿಟ್ಟಿದೆ ಎಂದು ತಿಳಿದು ಬಂದಿದೆ. ಉಳಿದ 28 ಕೋಟಿ ರೂ.ದಲ್ಲಿ ತಂಡಕ್ಕೆ ಬೇಕಾಗಿರುವ ಇತರೆ ಆಟಗಾರರ ಖರೀದಿ ಮಾಡಲು ಮುಂದಾಗಿದೆ.
ಇದನ್ನೂ ಓದಿರಿ:ಕ್ರಿಕೆಟ್ ಬಿಡ್ಬೇಕು ಅಂದ್ಕೊಂಡಿದ್ದ ಯುವಕ ಉಪನಾಯಕನಾಗಿ ದೇಶಕ್ಕೆ U19 ವಿಶ್ವಕಪ್ ತಂದುಕೊಟ್ಟ!
ಕೊಹ್ಲಿ, ಮ್ಯಾಕ್ಸ್ವೆಲ್, ಸಿರಾಜ್ ಜೊತೆ ಆಲ್ರೌಂಡರ್ ಹೋಲ್ಡರ್, ರಾಯುಡು ಹಾಗೂ ಪರಾಗ್ ಆರ್ಸಿಬಿ ಸೇರಿಕೊಂಡರೆ ತಂಡಕ್ಕೆ ಆನೆಬಲ ಬರಲಿದೆ. ಹೀಗಾಗಿ ಫ್ರಾಂಚೈಸಿ ಈ ಪ್ಲೇಯರ್ ಖರೀದಿಗೆ ಮುಂದಾಗಿದೆ. ಈ ಸಲದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ 590 ಪ್ಲೇಯರ್ಸ್ ಹೆಸರು ಫೈನಲ್ ಆಗಿದ್ದು, ಇದರಲ್ಲಿ 217 ಸ್ಥಾನಗಳಿಗೆ ಆಟಗಾರರ ಖರೀದಿ ಪ್ರಕ್ರಿಯೆ ನಡೆಯಲಿದೆ.