ಕರ್ನಾಟಕ

karnataka

ETV Bharat / sports

IPL 2022ರ ಮೆಗಾ ಹರಾಜು ಪ್ರಕ್ರಿಯೆ: ಬೋಲ್ಟ್​ 8 ಕೋಟಿ, ಅಶ್ವಿನ್ 5 ಕೋಟಿಗೆ ರಾಜಸ್ಥಾನ್ ಪಾಲು - ಟ್ರೆಂಟ್​ ಬೌಲ್ಟ್​ ಅಂತಿಮವಾಗಿ 8 ಕೋಟಿ ಬೆಲೆಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ

ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಟ್ರೆಂಟ್​ ಬೋಲ್ಟ್​ 8 ಕೋಟಿಗೆ ಮತ್ತು ಆರ್. ಅಶ್ವಿನ್ 5 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಎರಡು ದಿನಗಳ ಕಾಲ ಐಪಿಎಲ್ 2022ರ ಹರಾಜು ಪ್ರಕ್ರಿಯೆ ನಡೆಯಲಿದ್ದು ಆದಿತ್ಯವಾರ ಹರಾಜು ಪ್ರಕ್ರಿಯೆ ಮುಗಿಯಲಿದೆ.

ipl-2022-auction-ravichandran-ashwin-sold-to-rajasthan-royals-for-rs-5-crore
ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆ : ಧವನ್ 8.25 ಕೋಟಿ, ಅಶ್ವಿನ್ 5 ಕೋಟಿಗೆ ರಾಜಸ್ಥಾನ್ ಪಾಲು

By

Published : Feb 12, 2022, 1:44 PM IST

Updated : Feb 12, 2022, 1:58 PM IST

ಬೆಂಗಳೂರು : ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಅಶ್ವಿನ್ ಅವರಿಗೆ ರಾಜಸ್ಥಾನ್ ರಾಯಲ್ಸ್ 5 ಕೋಟಿ ರೂ ಖರೀದಿಸಿದೆ.

ಮುಂಬೈ ಇಂಡಿಯನ್ಸ್​​ನಲ್ಲಿದ್ದ ಟ್ರೆಂಟ್​ ಬೌಲ್ಟ್​ ಅಂತಿಮವಾಗಿ 8 ಕೋಟಿ ಬೆಲೆಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಎರಡು ದಿನಗಳ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 600 ಆಟಗಾರರು ಒಳಗೊಂಡಿದ್ದಾರೆ. 2 ಕೋಟಿ ಮುಖ ಬೆಲೆಯ 48 ಆಟಗಾರರು,1.5 ಕೋಟಿ ಮುಖ ಬೆಲೆಯ 20 ಆಟಗಾರರು, 1 ಕೋಟಿ ಮುಖ ಬೆಲೆಯ 34 ಆಟಗಾರರು ಹರಾಜು ಪ್ರಕ್ರಿಯೆಯಲ್ಲಿದ್ದಾರೆ.

ಒಟ್ಟು 377 ಭಾರತೀಯ ಆಟಗಾರರು ಮತ್ತು 223 ವಿದೇಶಿ ಆಟಗಾರರು ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ. ಎರಡು ದಿನಗಳ ಕಾಲ ಐಪಿಎಲ್ 2022ರ ಹರಾಜು ಪ್ರಕ್ರಿಯೆ ನಡೆಯಲಿದ್ದು ಆದಿತ್ಯವಾರ ಹರಾಜು ಪ್ರಕ್ರಿಯೆ ಮುಗಿಯಲಿದೆ.

ಇದನ್ನು ಓದಿ:ಟಾಟಾ ಐಪಿಎಲ್​ ಮೆಗಾ ಹರಾಜು: ಶ್ರೇಯಸ್​, ಇಶಾನ್​, ಹರ್ಷಲ್ ಪಟೇಲ್​ಗೆ ಜಾಕ್​ಪಾಟ್​!?

Last Updated : Feb 12, 2022, 1:58 PM IST

ABOUT THE AUTHOR

...view details