ಮುಂಬೈ: ಸತತ 4 ಸೋಲಿನ ಬಳಿಕ ಹಾಲಿ ಚಾಂಪಿಯನ್ ಗೆಲುವಿನ ನಗೆ ಬೀರಿದೆ. ಶಿವಂ ದುಬೆ(95 ನಾಟೌಟ್), ರಾಬಿನ್ ಉತ್ತಪ್ಪ(88) ಮತ್ತು ಸ್ಪಿನ್ದ್ವಯರಾದ ಜಡೇಜಾ ಮತ್ತು ತೀಕ್ಷಣ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಆರ್ಸಿಬಿ ವಿರುದ್ಧ ಮಂಗಳವಾರ 23 ರನ್ಗಳಿಂದ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.
ಉತ್ತಪ್ಪ-ದುಬೆ ಬ್ಯಾಟಿಂಗ್, ಜಡೇಜಾ ಮತ್ತು ತೀಕ್ಷಣ ಬೌಲಿಂಗ್ ಅಲ್ಲದೆ ಈ ಪಂದ್ಯದಲ್ಲಿ ಹೆಚ್ಚು ಅಭಿಮಾನಿಗಳನ್ನು ಆಕರ್ಷಿಸಿದ್ದು 36 ವರ್ಷದ ಅಂಬಾಟಿ ರಾಯುಡು ಫೀಲ್ಡಿಂಗ್. ಅವರ ಒಂದೇ ಕೈಯಲ್ಲಿ ಹಿಡಿದ ಅದ್ಭುತ ಕ್ಯಾಚ್ ಅನ್ನು 'ಕ್ಯಾಚ್ ಆಫ್ ದ ಸೀಸನ್'ಎಂದು ಕ್ರಿಕೆಟ್ ಅಭಿಮಾನಿಗಳು ಬಣ್ಣಿಸಿದ್ದಾರೆ.
ರವೀಂದ್ರ ಜಡೇಜಾ ಎಸೆದ 16ನೇ ಓವರ್ನ 4ನೇ ಎಸೆತದಲ್ಲಿ 2 ಆರ್ಸಿಬಿ ತಂಡದ ಆಕಾಶ್ ದೀಪ್ ಅವರು ಶಾರ್ಟ್ ಕವರ್ನತ್ತ ಹೊಡೆದ ಚೆಂಡನ್ನು ರಾಯುಡು ಒಂದೆರಡು ಹೆಜ್ಜೆ ಓಡಿ ತಮ್ಮ ಬಲಭಾಗಕ್ಕೆ ಜಿಂಕೆಯಂತೆ ಜಿಗಿದು ಒಂದೇ ಕೈಯಲ್ಲಿ ಚೆಂಡನ್ನು ಹಿಡಿದುಕೊಂಡರು.