ಕರ್ನಾಟಕ

karnataka

ETV Bharat / sports

ಐಪಿಎಲ್ 2020: ಊಹಾಪೋಹಗಳಿಗೆ ತೆರೆ, ಅಧಿಕೃತ ಹೆಸರು ಪ್ರಕಟಿಸಿದ ಅಹಮದಾಬಾದ್​​ ಫ್ರಾಂಚೈಸಿ - ಇಂಡಿಯನ್ ಪ್ರೀಮಿಯರ್ ಲೀಗ್​

ತಂಡ ಖರೀದಿಸಿದ 4 ತಿಂಗಳ ಬಳಿಕ , ಮೆಗಾ ಹರಾಜಿಗೆ 3 ದಿನಗಳಿರುವಾಗ ಫ್ರಾಂಚೈಸಿ ತಮ್ಮ ತಂಡಕ್ಕೆ ಗುಜರಾತ್​ ಟೈಟನ್ಸ್​ ಎಂಬ ಅಧಿಕೃತ ಹೆಸರನ್ನು ಪ್ರಕಟಿಸಿದೆ. 2017 ಮತ್ತು 18ರ ಆವೃತ್ತಿಗಳಲ್ಲೂ ಗುಜರಾತ್​ ಲಯನ್ಸ್​ ಎಂಬ ಹೆಸರಿನ ಫ್ರಾಂಚೈಸಿ 2 ವರ್ಷಗಳ ಕಾಲ ಐಪಿಎಲ್​ನಲ್ಲಿತ್ತು.

IPL 2022: Ahmedabad franchise named 'Gujarat Titans'
ಗುಜರಾತ್ ಟೈಟನ್ಸ್​

By

Published : Feb 9, 2022, 3:03 PM IST

ಅಹ್ಮದಾಬಾದ್​ : 2022ರ ಐಪಿಎಲ್​ಗೆ ನೂತನವಾಗಿ ಸೇರಿಕೊಂಡಿರುವ ಅಹ್ಮದಾಬಾದ್​ ಫ್ರಾಂಚೈಸಿ ಬುಧವಾರ ತಮ್ಮ ತಂಡಕ್ಕೆ 'ಗುಜರಾತ್​​ ಟೈಟನ್ಸ್'​ ಎಂದು ಅಧಿಕೃತ ಹೆಸರನ್ನು ಖಚಿತಪಡಿಸಿದೆ. ಎರಡು ದಿನಗಳ ಹಿಂದೆ ಅಹ್ಮದಾಬಾದ್​ ಟೈಟನ್ಸ್ ಎಂಬ ಹೆಸರು ಸಾಮಾಜಿಕ ಜಾಲಾತಾಣದಲ್ಲಿ ವೈರಲ್​ ಆಗಿತ್ತು.

2021 ಅಕ್ಟೋಬರ್​ನಲ್ಲಿ ನಡೆದ ಹೊಸ ತಂಡಗಳ ಬಿಡ್​​ನಲ್ಲಿ ಸಿವಿಸಿ ಕ್ಯಾಪಿಟಲ್ಸ್ ಬರೋಬರಿ 5625 ಕೋಟಿ ರೂ. ಬಿಡ್​​ ಮಾಡಿ ಅಹ್ಮದಾಬಾದ್​ ತಂಡವನ್ನು ಖರೀದಿಸಿತ್ತು. 2022ರ ಹರಾಜಿಗೂ ಮೊದಲೇ ಭಾರತದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯರನ್ನು(15 ಕೋಟಿರೂ) ನಾಯಕನಾಗಿ ನೇಮಿಸಿರುವ ಫ್ರಾಂಚೈಸಿ, ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್(15 ಕೋಟಿ)​​ ಮತ್ತು ಭಾರತದ ಉದಯೋನ್ಮುಖ ಬ್ಯಾಟರ್​ ಶುಬ್ಮನ್​ ಗಿಲ್​(8 ಕೋಟಿ) ಅವರನ್ನು ನೇರ ಡ್ರಾಫ್ಟ್​ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ.

ತಂಡ ಖರೀದಿಸಿದ 4 ತಿಂಗಳ ಬಳಿಕ , ಮೆಗಾ ಹರಾಜಿಗೆ 3 ದಿನಗಳಿರುವಾಗ ಫ್ರಾಂಚೈಸಿ ತಮ್ಮ ತಂಡಕ್ಕೆ ಗುಜರಾತ್​ ಟೈಟನ್ಸ್​ ಎಂಬ ಅಧಿಕೃತ ಹೆಸರು ಪ್ರಕಟಿಸಿದೆ. 2017 ಮತ್ತು 18ರ ಆವೃತ್ತಿಗಳಲ್ಲೂ ಗುಜರಾತ್​ ಲಯನ್ಸ್​ ಎಂಬ ಹೆಸರಿನ ಫ್ರಾಂಚೈಸಿ 2 ವರ್ಷಗಳ ಕಾಲ ಐಪಿಎಲ್​ನಲ್ಲಿತ್ತು.

ಈಗಾಗಲೇ ಲಖನೌ ತಂಡ ಕೂಡ ಲಖನೌ ಸೂಪರ್ ಜೈಂಟ್ಸ್​ ಎಂದು ನಾಮಕರಣ ಮಾಡಿದೆ. ಸಂಜೀವ್​ ಗೋಯಂಕಾ ಅವರ ಆರ್​ಪಿಎಸ್​ಜಿ ಗ್ರೂಫ್​ 7090 ಕೋಟಿ ರೂ.ಗಳಿಗೆ ಲಖನೌ ತಂಡವನ್ನು ಖರೀದಿ ಮಾಡಿದೆ. ಕನ್ನಡಿಗ ರಾಹುಲ್​(17 ಕೋಟಿ) ನಾಯಕನನ್ನಾಗಿ ನೇಮಕ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾರ್ಕಸ್​ ಸ್ಟೋಯ್ನಿಸ್(9.2 ಕೋಟಿ)​ ಮತ್ತು ಯುವ ಸ್ಪಿನ್ನರ್​ ರವಿ ಬಿಷ್ಣೋಯ್(4 ಕೋಟಿ) ​ರನ್ನು ಡ್ರಾಫ್ಟ್​ ಮಾಡಿಕೊಂಡಿದೆ.

ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಹರಾಜಿನಲ್ಲಿರುವ 590 ಆಟಗಾರರಲ್ಲಿ 10 ಫ್ರಾಂಚೈಸಿಗಳು ಒಟ್ಟು 217 ಆಟಗಾರರನ್ನು ಖರೀದಿಸಲಿದ್ದಾರೆ.

ಇದನ್ನೂ ಓದಿ:ಕ್ರಿಕೆಟ್​ ಬಿಟ್ಟು ನಿಮ್ಮಪ್ಪನ ಜೊತೆ ಆಟೋ ಓಡಿಸ್ಕೊಂಡಿರು ಎಂದಿದ್ರು.. ಧೋನಿ ಮಾತು ನನ್ನಲ್ಲಿ ವಿಶ್ವಾಸ ತರಿಸಿದವು: ಸಿರಾಜ್​​

ABOUT THE AUTHOR

...view details