ದುಬೈ:ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ವರ್ಷದಿಂದ ವರ್ಷಕ್ಕೆ ತನ್ನ ವೀಕ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. 14ನೇ ಆವೃತ್ತಿಯಲ್ಲೂ ನಿರೀಕ್ಷೆಯಂತೆ ಐಪಿಎಲ್ ವೀಕ್ಷಕರ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.12 ರಷ್ಟು ಹೆಚ್ಚಳವಾಗಿದೆ. ಈ ವಿಚಾರವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಯುಎಇಯಲ್ಲಿ ನಡೆಯುತ್ತಿರುವ ವಿವೋ ಐಪಿಎಲ್ 2021, ಸತತ ನಾಲ್ಕನೇ ವರ್ಷವೂ ಟಿವಿಯಲ್ಲಿ 400 ಮಿಲಿಯನ್ ವೀಕ್ಷಕರ ಮೈಲುಗಲ್ಲನ್ನು ಮುರಿಯುವ ಹಾದಿಯಲ್ಲಿದೆ ಎಂದು ಸ್ಟಾರ್ ಇಂಡಿಯಾ ನೆಟ್‌ವರ್ಕ್ ತಿಳಿಸಿದೆ. ಟೂರ್ನಮೆಂಟ್ 35ನೇ ಪಂದ್ಯದವರೆಗೆ 380 ಮಿಲಿಯನ್ ವೀಕ್ಷಕರನ್ನು ಪಡೆದುಕೊಂಡಿದೆ. ವೀಕ್ಷಕರ ಪ್ರಮಾಣ ಐಪಿಎಲ್ 2020 ಗಿಂತ ಶೇ.12 ರಷ್ಟು ಹೆಚ್ಚಳವಾಗಿದೆ. ಟಿವಿ ವೀಕ್ಷಕರ ಸಂಖ್ಯೆ 2018 ರಿಂದ ಕೊನೆಯ ಮೂರು ಆವೃತ್ತಿಗಳಿಗಿಂತ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.