ಕರ್ನಾಟಕ

karnataka

ETV Bharat / sports

ಟಿ-20 ವಿಶ್ವಕಪ್ ತಂಡದಿಂದ ಹೊರಬಿದ್ದ ಚಹಲ್‌ಗೆ ಆರ್​​ಸಿಬಿ ಪರ ಮಿಂಚುವ ಛಲ

ಐಸಿಸಿ ವಿಶ್ವಕಪ್​ ಟೂರ್ನಿಗಾಗಿ ಪ್ರಕಟಗೊಂಡಿರುವ ಟೀಂ ಇಂಡಿಯಾದಲ್ಲಿ ಸ್ಪಿನ್ನರ್​ ಯಜುವೇಂದ್ರ ಚಹಲ್​ ಅವಕಾಶ ಪಡೆದುಕೊಳ್ಳುವಲ್ಲಿ ವಿಫಲಗೊಂಡಿದ್ದರೂ, ಮುಂಬರುವ ಐಪಿಎಲ್​​ನಲ್ಲಿ ಮಿಂಚುವ ಗುರಿ ಇಟ್ಟುಕೊಂಡಿದ್ದಾರೆ.

yuzvendra chahal
yuzvendra chahal

By

Published : Sep 16, 2021, 3:08 PM IST

​​ದುಬೈ: ನಿಗದಿತ ಓವರ್​ಗಳ ಕ್ರಿಕೆಟ್​​ನಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯನಾಗಿದ್ದ ಯಜುವೇಂದ್ರ ಚಹಾಲ್​ಗೆ ಈ ಸಲದ ಐಸಿಸಿ ಟಿ-20 ವಿಶ್ವಕಪ್​​ನಿಂದ ಹೊರಬಿದ್ದಿದ್ದಾರೆ. ಆದರೆ ವಿಶ್ವಕಪ್​ ಆರಂಭಕ್ಕೂ ಮುನ್ನ ಯುಎಇನಲ್ಲಿ ಆಯೋಜನೆಗೊಂಡಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಆರ್​ಸಿಬಿ ಪರ ಮಿಂಚು ಹರಿಸುವ ಪ್ಲಾನ್​ ಹಾಕಿಕೊಂಡಿದ್ದಾರೆ.

14ನೇ ಆವೃತ್ತಿ ಐಪಿಎಲ್​ನ ದ್ವಿತೀಯಾರ್ಧದ ಪಂದ್ಯಗಳಲ್ಲಿ ಭಾಗಿಯಾಗಲು ಈಗಾಗಲೇ ದುಬೈಗೆ ತೆರಳಿ ಅಭ್ಯಾಸದಲ್ಲಿ ಭಾಗಿಯಾಗಿರುವ ಚಹಲ್​, ಉತ್ತಮ ಪ್ರದರ್ಶನ ನೀಡುವ ಇರಾದೆ ಹೊಂದಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ಐಪಿಎಲ್​​ನ ಉಳಿದ ಪಂದ್ಯಗಳನ್ನಾಡಲು ನಾನು ಉತ್ಸುಕನಾಗಿದ್ದೇನೆ. ಅಂಕಪಟ್ಟಿಯಲ್ಲಿ ಈಗಾಗಲೇ ಮೂರನೇ ಸ್ಥಾನದಲ್ಲಿರುವ ನಾವು, ಇದೀಗ ಮತ್ತಷ್ಟು ಉತ್ತಮ ಪ್ರದರ್ಶನ ನೀಡಿದರೆ ಖಂಡಿತವಾಗಿ ಉತ್ತಮವಾದ ಫಲಿತಾಂಶ ಹೊರಬರಲಿದೆ ಎಂದಿದ್ದಾರೆ. ನೆಟ್​ನಲ್ಲಿ ಉತ್ತಮವಾಗಿ ಬೌಲಿಂಗ್​ ಮಾಡಿದಾಗ ನಮ್ಮಲ್ಲಿ ಮತ್ತಷ್ಟು ಉತ್ತಮ ಭಾವನೆ ಮೂಡುತ್ತದೆ. ಇದೀಗ 'old Yuzi is Back' ಎಂದು ತಿಳಿಸಿದ್ದಾರೆ.

ಕೋವಿಡ್ ಕಾರಣದಿಂದಾಗಿ 14ನೇ ಆವೃತ್ತಿ ಐಪಿಎಲ್​ ಪಂದ್ಯಗಳು ಮುಂದೂಡಿಕೆಯಾಗಿದ್ದವು. ಇದೀಗ ಸೆಪ್ಟೆಂಬರ್​ 19ರಿಂದ ದುಬೈನಲ್ಲಿ ಆರಂಭಗೊಳ್ಳಲಿದೆ. ಆರ್​​ಸಿಬಿ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ದಾಖಲಿಸಿದ್ದು, 10 ಪಾಯಿಂಟ್​ಗಳೊಂದಿಗೆ 3ನೇ ಸ್ಥಾನದಲ್ಲಿದೆ.

ಇದನ್ನೂ ಓದಿ:10 ಸಿಕ್ಸರ್‌​, 7 ಬೌಂಡರಿ, 46 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ ಎಬಿಡಿ: ವಿಡಿಯೋ ನೋಡಿ..

ಸೆಪ್ಟೆಂಬರ್​ 20ರಂದು ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ವಿರುದ್ಧ ಸೆಣಸಾಟ ನಡೆಸಲಿರುವ ಆರ್​​ಸಿಬಿ, ಸೆ. 24ರಂದು ಚೆನ್ನೈ ವಿರುದ್ಧ ಮತ್ತೊಂದು ಪಂದ್ಯದಲ್ಲಿ ಭಾಗಿಯಾಗಲಿದೆ. ಅರಬ್​ ನಾಡಿನಲ್ಲಿ ಒಟ್ಟು 31 ಪಂದ್ಯಗಳು ಆಯೋಜನೆಗೊಂಡಿವೆ. ಐಪಿಎಲ್​ ಮುಕ್ತಾಯವಾಗುತ್ತಿದ್ದಂತೆ ಐಸಿಸಿ ಟಿ-20 ವಿಶ್ವಕಪ್​ ಕೂಡ ಇಲ್ಲೇ ನಡೆಯಲಿದೆ.

ABOUT THE AUTHOR

...view details