ಕರ್ನಾಟಕ

karnataka

ETV Bharat / sports

ಹರ್ಷಲ್​ ಪಟೇಲ್​ ಕೊನೆ ಓವರ್ ಕಮಾಲ್: IPLನಲ್ಲಿ ಹೊಸ ದಾಖಲೆ ಬರೆದ ಅನ್​ಕ್ಯಾಪ್ಡ್​ ಪ್ಲೇಯರ್​

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಆರ್​ಸಿಬಿ ಪರ ಬೌಲಿಂಗ್​ನಲ್ಲಿ ಮಿಂಚು ಹರಿಸುತ್ತಿರುವ ಹರ್ಷಲ್ ಪಟೇಲ್ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.

RCB Harshal patel
RCB Harshal patel

By

Published : Sep 29, 2021, 10:43 PM IST

ದುಬೈ: ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವೇಗಿ ಹರ್ಷಲ್​ ಪಟೇಲ್ ಮಾರಕ ಬೌಲಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ. ಇಂದು ರಾಜಸ್ಥಾನ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 3 ವಿಕೆಟ್ ಪಡೆದು ಮಿಂಚಿದರು.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್​ ವಿಕೆಟ್ ಪಡೆದುಕೊಂಡಿದ್ದ ಪಟೇಲ್​, ರಾಜಸ್ಥಾನ ರಾಯಲ್ಸ್ ವಿರುದ್ಧದ ಕೊನೆ ಓವರ್​ನಲ್ಲಿ ಕಮಾಲ್ ಮಾಡಿದರು. ಇದರ ಜೊತೆಗೆ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಹೊಸ ದಾಖಲೆಯನ್ನೂ ಸೃಷ್ಟಿಸಿದರು.

ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಹರ್ಷಲ್ ಪಟೇಲ್​​

ಇದನ್ನೂ ಓದಿ: ಆರಂಭದಲ್ಲಿ ಅಬ್ಬರಿಸಿ ನಂತರ ಮುಗ್ಗರಿಸಿದ ರಾಯಲ್ಸ್​... ಆರ್​ಸಿಬಿಗೆ ಗೆಲ್ಲಲು 150ರನ್​ಗಳ ಟಾರ್ಗೆಟ್​

ಐಪಿಎಲ್ ಇತಿಹಾಸದಲ್ಲೇ ಅನ್​ಕ್ಯಾಪ್ಡ್​ ಪ್ಲೇಯರ್ ​(ರಾಷ್ಟ್ರೀಯ ತಂಡದ ಪರ ಇನ್ನೂ ಪದಾರ್ಪಣೆ ಮಾಡದೇ ಇರುವ ಆಟಗಾರ) ಆಗಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ಸಾಧನೆ ಮಾಡಿದ್ದಾರೆ. 14ನೇ ಆವೃತ್ತಿಯಲ್ಲಿ ಇಲ್ಲಿಯವರೆಗೆ 26 ವಿಕೆಟ್​ ಪಡೆದುಕೊಂಡಿರುವ ಹರ್ಷಲ್ ಪಟೇಲ್​, ಯುಜುವೇಂದ್ರ ಚಹಲ್ ಅವರನ್ನು​ ಹಿಂದಿಕ್ಕಿದ್ದಾರೆ.

ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಅನ್​ಕ್ಯಾಪ್ಡ್ ಪ್ಲೇಯರ್ಸ್‌:​​

  • ಹರ್ಷಲ್ ಪಟೇಲ್​ (ಆರ್​ಸಿಬಿ) 26 ವಿಕೆಟ್​​, 2021
  • ಯಜುವೇಂದ್ರ ಚಹಲ್​ (ಆರ್​ಸಿಬಿ) 23 ವಿಕೆಟ್​, 2015
  • ಶ್ರೀನಾಥ್​​ ಅರವಿಂದ್​​ (ಆರ್​ಸಿಬಿ) 21 ವಿಕೆಟ್​, 2011
  • ಸಿದ್ಧಾರ್ಥ್​ ಕೌಲ್​​ (ಹೈದರಾಬಾದ್​) 21 ವಿಕೆಟ್​, 2018

ಸದ್ಯದ ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್​​ ಪಡೆದುಕೊಂಡಿರುವ ಹರ್ಷಲ್ ಪಟೇಲ್​ ಪರ್ಪಲ್​ ಕ್ಯಾಪ್​ ಹೊಂದಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಡೆಲ್ಲಿ ತಂಡದ ಆವೀಶ್ ಖಾನ್​ ಇದ್ದಾರೆ.

ABOUT THE AUTHOR

...view details