ದುಬೈ: ಎವಿನ್ ಲೂಯಿಸ್ ಅವರ ಅಬ್ಬರದ ಅರ್ಧಶತಕದ ಹೊರೆತಾಗಿಯೂ ರಾಜಸ್ಥಾನ್ ರಾಯಲ್ಸ್ ದಿಢೀರ್ ಕುಸಿತ ಕಂಡ ರಾಜಸ್ಥಾನ್ ರಾಯಲ್ಸ್ ಆರ್ಸಿಬಿಗೆ ಕೇವಲ 150ರನ್ಗಳ ಸಾಧಾರಣ ಟಾರ್ಗೆಟ್ ನೀಡಿದೆ.
150 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಆರ್ಸಿಬಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಆರಂಭವೊದಗಿಸಿದರು. ಈ ಜೋಡಿ 5.2 ಓವರ್ಗಳಲ್ಲಿ 48ರನ್ಗಳ ಜೊತೆಯಾಟ ನೀಡಿದರು. 22ರನ್ಗಳಿಸಿದ್ದ ವೇಳೆ ಪಡಿಕ್ಕಲ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ 25ರನ್ಗಳಿಕೆ ಮಾಡಿದ್ದ ವಿರಾಟ್ ಕೊಹ್ಲಿ ಕೂಡ ರನೌಟ್ ಬಲೆಗೆ ಬಿದ್ದರು.
ಭರತ್ ಮ್ಯಾಕ್ಸ್ವೆಲ್ ಆಸರೆ
ಆರಂಭಿಕ ವಿಕೆಟ್ ಪತನಗೊಳ್ಳುತ್ತಿದ್ದಂತೆ ತಂಡಕ್ಕೆ ಭರತ್-ಮ್ಯಾಕ್ಸ್ವೆಲ್ ಉತ್ತಮ ಆಸರೆಯಾದರು. ಈ ಜೋಡಿ 50ರನ್ಗಳ ಜೊತೆಯಾಟವಾಡಿದ್ದು, ಬ್ಯಾಟಿಂಗ್ ಮುಂದುವರೆಸಿದ್ದಾರೆ. ಭರತ್ 42ರನ್ ಗಳಿಕೆ ಮಾಡಿದ್ದು ಮ್ಯಾಕ್ಸ್ವೆಲ್ 26ರನ್ಗಳಿಸಿ ಬ್ಯಾಟ್ ಮಾಡ್ತಿದ್ದಾರೆ. ಸದ್ಯ ತಂಡದ ಗೆಲುವಿಗೆ 27ರನ್ಗಳ ಅವಶ್ಯಕತೆ ಇದೆ.
ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್
ಟಾಸ್ ಸೋತು ದುಬೈ ಅಂತಾತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಬ್ಯಾಟಿಂಗ್ ಆರಂಭಿಸಿದ ರಾಯಲ್ಸ್ ಮೊದಲ ವಿಕೆಟ್ಗೆ 77 ರನ್ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿತು. ಯಶಸ್ವಿ ಜೈಸ್ವಾಲ್ ಕೇವಲ 22 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 31 ರನ್ಗಳಿಸಿ ಡೇನಿಯಲ್ ಕ್ರಿಶ್ಚಿಯನ್ಗೆ ವಿಕೆಟ್ ಒಪ್ಪಿಸಿದರು.
ಜೊತೆಗಾರ ಔಟಾದರು ತನ್ನ ಆರ್ಭಟ ಮುಂದುವರಿಸಿದ ಲೂಯಿಸ್ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಲೂಯಿಸ್ ಆರ್‌ಸಿಬಿ ಪರ ಪದಾರ್ಪಣೆ ಮಾಡಿದ್ದ ಜಾರ್ಜ್ ಗಾರ್ಟನ್ಗೆ ವಿಕೆಟ್ ಒಪ್ಪಿಸುವ ಮುನ್ನ 37 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 58 ರನ್ಗಳಿಸಿದರು.
ಲೂಯಿಸ್ ಔಟಾಗುತ್ತಿದ್ದಂತೆ ಪೆವಿಲಿಯನ್ ಪರೇಡ್ ನಡೆಸಿದ ರಾಯಲ್ಸ್
ಇವರ ವಿಕೆಟ್ ಬೀಳುತ್ತಿದ್ದಂತೆ ರಾಯಲ್ಸ್ ಪತನ ಆರಂಭವಾಯಿತು. ಲೂಯಿಸ್ ನಂತರ ಬಂದ ಲಾಮ್ರೋರ್ ಕೇವಲ 3 ರನ್ಗಳಿಸಿ ಚಹಾಲ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ನಾಯಕ ಸಾಮ್ಸನ್ 15 ಎಸೆತಗಳಲ್ಲಿ 19 ರನ್ಗಳಿಸಿ ಶಹ್ಬಾಜ್ ಅಹ್ಮದ್ ಓವರ್ನಲ್ಲಿ ಪಡಿಕ್ಕಲ್ಗೆ ಕ್ಯಾಚ್ ನೀಡಿ ಔಟಾದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್
ತೆವಾಟಿಯಾ ಕೂಡ ಅದೇ ಓವರ್ನ ಕೊನೆಯ ಎಸೆತದಲ್ಲಿ ಪಡಿಕ್ಕಲ್ಗೆ ಕ್ಯಾಚ್ ನೀಡಿ ಔಟಾದರು. ಭರವಸೆಯ ಬ್ಯಾಟರ್ ಲವಿಂಗ್ಸ್ಟೋನ್ ಆಟವನ್ನು ಚಹಾಲ್ ಕೇವಲ 6ರನ್ಗಳಿಗೆ ಅಂತ್ಯಗೊಳಿಸಿದರು. ಪರಾಗ್ 14 ಸಕಾರಿಯಾ 2, ಕ್ರಿಸ್ ಮೋರಿಸ್ 14 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಆರ್‌ಸಿಬಿ ಪರ ಹರ್ಷಲ್ ಪಟೇಲ್ 34ಕ್ಕೆ 3, ಯುಜ್ವೇಂದ್ರ ಚಹಲ್ 18ಕ್ಕೆ 2, ಶಹ್ಬಾಜ್ ಅಹ್ಮದ್ 10ಕ್ಕೆ 2 ಕ್ರಿಶ್ಚಿಯನ್ 21ಕ್ಕೆ1 ಮತ್ತು ಗಾರ್ಟನ್ 30ಕ್ಕೆ1 ವಿಕೆಟ್ ಪಡೆದು ರಾಜಸ್ಥಾನ್ ತಂಡದ ಬೃಹತ್ ಮೊತ್ತದ ಕನಸನ್ನು ನುಚ್ಚುನೂರು ಮಾಡಿದರು