ಕರ್ನಾಟಕ

karnataka

ETV Bharat / sports

ಹೈದರಾಬಾದ್​ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್​ - ಹೈದರಾಬಾದ್​ vs ಪಂಜಾಬ್​ ವಿಶ್ಲೇಷಣೆ

ಇತ್ತ 3 ಪಂದ್ಯಗಳಲ್ಲಿ ಒಂದು ಗೆಲುವು 2 ಸೋಲು ಕಂಡಿರುವ ಪಂಜಾಬ್ ತಂಡ ಕೂಡ ಕೆಲವು ಬದಲಾವಣೆ ಮಾಡಿಕೊಂಡಿದೆ. ಜೇ ರಿಚರ್ಡ್ಸನ್ ಮತ್ತು ರಿಲೇ ಮೆರಿಡಿತ್ ಬದಲಿಗೆ ಮೋಯಿಸಸ್ ಹೆನ್ರಿಕ್ಸ್​ ಮತ್ತು ಫ್ಯಾಬಿಯನ್ ಅಲೆನ್​ ಪದಾರ್ಪಣೆ ಮಾಡಿದ್ದಾರೆ.

ಪಂಜಾಬ್ ಕಿಂಗ್ಸ್- ಸನ್​ರೈಸರ್ಸ್ ಹೈದರಾಬಾದ್​
ಪಂಜಾಬ್ ಕಿಂಗ್ಸ್- ಸನ್​ರೈಸರ್ಸ್ ಹೈದರಾಬಾದ್​

By

Published : Apr 21, 2021, 3:15 PM IST

ಚೆನ್ನೈ: ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್​ರೈಸರ್ಸ್​​ ಹೈದರಾಬಾದ್​ ತಂಡದ ವಿರುದ್ಧ ಟಾಸ್​ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ರಾಹುಲ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

3 ಪಂದ್ಯಗಳಲ್ಲಿ ಒಂದು ಗೆಲುವು 2 ಸೋಲು ಕಂಡಿರುವ ಪಂಜಾಬ್ ತಂಡ ಕೂಡ ಕೆಲವು ಬದಲಾವಣೆ ಮಾಡಿಕೊಂಡಿದೆ. ಜೇ ರಿಚರ್ಡ್ಸನ್ ಮತ್ತು ರಿಲೇ ಮೆರಿಡಿತ್ ಬದಲಿಗೆ ಮೋಯಿಸಸ್ ಹೆನ್ರಿಕ್ಸ್​ ಮತ್ತು ಫ್ಯಾಬಿಯನ್ ಅಲೆನ್​ ಪದಾರ್ಪಣೆ ಮಾಡಿದ್ದಾರೆ.

ಇತ್ತ ಹೈದರಾಬಾದ್​ ಸತತ ಮೂರು ಪಂದ್ಯಗಳಿಂದ ಮಧ್ಯಮ ಕ್ರಮಾಂಕದ ವೈಫಲ್ಯದಿಂದಲೇ ಸೋಲು ಕಂಡಿದೆ. ಇಂದಿನ ಪಂದ್ಯಗಳಲ್ಲಿ ಕೆಲವು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುತ್ತಿದೆ. ಅನುಭವಿ ಕೇನ್​ ವಿಲಿಯಮ್ಸ್ ಸ್ಪಿನ್ನರ್ ಮುಜೀಬ್​ ಬದಲಿಗೆ​ ತಂಡ ಸೇರಿಕೊಂಡಿದ್ದಾರೆ. ಮನೀಶ್ ಪಾಂಡೆ ಬದಲಿಗೆ ಕೇದಾರ್ ಜಾಧವ್​ ಮತ್ತು ಸಮದ್​ ಬದಲಿಗೆ ಸಿದ್ಧಾರ್ಥ್ ಕೌಲ್ ಆಡಲಿದ್ದಾರೆ.

ಸನ್​​ರೈಸರ್ಸ್ ಹೈದರಾಬಾದ್​: ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೀ), ಕೇದಾರ್ ಜಾಧವ್, ವಿರಾಟ್ ಸಿಂಗ್,ಕೇನ್ ವಿಲಿಯಮ್ಸನ್ ವಿಜಯ್ ಶಂಕರ್, ಅಭಿಷೇಕ್ ಶರ್ಮಾ ಸಿದ್ಧಾರ್ಥ್​ ಕೌಲ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್​,

ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್ (ನಾಯಕ/ವಿಕೆಟ್ ಕೀಪರ್), ಕ್ರಿಸ್ ಗೇಲ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಶಾರುಖ್ ಖಾನ್, ಫ್ಯಾಬಿಯನ್ ಅಲೆನ್, ಹೆನ್ರಿಕ್ಸ್​, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಅರ್ಷ್‌ದೀಪ್ ಸಿಂಗ್

ABOUT THE AUTHOR

...view details